Site icon Vistara News

Karnataka Weather : ಇಂದು ಬೆಂಗಳೂರು-ಮೈಸೂರಲ್ಲಿ ಗುಡುಗು ಮಳೆ; ನಾಳೆ 9 ಜಿಲ್ಲೆಗಳಿಗೆ ಅಲರ್ಟ್‌

Mysore Heavy Rain on monday

ಬೆಂಗಳೂರು: ರಾಜ್ಯದಲ್ಲಿ ಮಳೆ ಆರ್ಭಟ ಮತ್ತೆ (Karnataka Weather Forecast) ಶುರುವಾಗಿದೆ. ಮೈಸೂರು ಹಾಗೂ ಬೆಂಗಳೂರಿನ ಅಲ್ಲಲ್ಲಿ ಸೋಮವಾರ (ಅಕ್ಟೋಬರ್‌ 9) ಗುಡುಗು ಸಹಿತ ಭಾರಿ (Karnataka Weather) ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ (Bangalore Rain) ಭರ್ಜರಿ ವರ್ಷಧಾರೆಯಾಗಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಬಿಟ್ಟೂ ಬಿಡದೆ ಮಳೆ (Rain News) ಸುರಿದಿದೆ. ಸಂಜೆಗೆ ಸುರಿದ ಭಾರಿ ಮಳೆಗೆ ಟ್ರಾಫಿಕ್‌ ಜಾಮ್ ಉಂಟಾಗಿತ್ತು. ವಾಹನ ಸವಾರರು ಪರದಾಡಬೇಕಾಯಿತು.

ಇತ್ತ ಮೈಸೂರಿನಲ್ಲೂ ಮಳೆ ಆರ್ಭಟ ಜೋರಾಗಿತ್ತು. ಸತತ ಒಂದೂವರೆ ಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನ- ಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿಯುತ್ತಿತ್ತು. ಇತ್ತ ದಿಢೀರ್‌ ಮಳೆಯಿಂದಾಗಿ ಜನರು ಬಸ್‌ ನಿಲ್ದಾಣಗಳ ಮೊರೆ ಹೋಗಿದ್ದರು.

ಮೂರು ದಿನ ಭಾರಿ ಮಳೆ ಎಚ್ಚರಿಕೆ

ಸೋಮವಾರ ತಮಿಳುನಾಡು ಮೂಲಕ ಕನ್ಯಾಕುಮಾರಿವರೆಗೆ ಸಮುದ್ರ ಮಟ್ಟದಲ್ಲಿ ಟ್ರಫ್‌ ಎದ್ದಿದೆ. ಇದರ ಪ್ರಭಾವದಿಂದಾಗಿ ದಕ್ಷಿಣ ಒಳನಾಡಲ್ಲಿ ಇನ್ನು ಮೂರು ದಿನಗಳು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ , ಮಂಡ್ಯ, ಕೋಲಾರ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಮಳೆಗಾಗಿ ವರುಣ ದೇವರಿಗೆ ಪಿಂಡ ಪ್ರದಾನ

ಕೋಲಾರದಲ್ಲಿ ಬರಗಾಲದ ಮುಕ್ತಿಗಾಗಿ ವರುಣ ದೇವರಿಗೆ ಪಿಂಡ ಪ್ರದಾನ ಮಾಡಲಾಯಿತು. ಹಿಂದೂ ಸಂಪ್ರದಾಯದ ಪ್ರಕಾರ ಪಿತೃಪಕ್ಷ ಮಾಸದಲ್ಲಿ ನಮ್ಮನ್ನು ಅಗಲಿದವರಿಗೆ ಪಿಂಡ ಪ್ರದಾನ ಮಾಡಲಾಗುತ್ತದೆ. ಅಲ್ಲದೆ ಪಿಂಡ ಪ್ರದಾನ ಮಾಡಿ ಪಿತೃಗಳನ್ನು ಸಂತೃಪ್ತಿಗೊಳಿಸುವುದು ನಂಬಿಕೆ ಇದೆ. ಅದರಂತೆ ಜಿಲ್ಲೆಯಲ್ಲಿ ಸಮರ್ಪಕ ಮಳೆ ಇಲ್ಲದೇ ಬರಗಾಲ ಆವರಿಸಿದೆ. ಜತೆಗೆ ಕಾವೇರಿ‌ ನದಿ ನೀರಿಗಾಗಿ ಎರಡು ರಾಜ್ಯಗಳ ನಡುವೆ ಗಲಾಟೆ ನಡೆಯುತ್ತಿದೆ. ಹೀಗಾಗಿ ವರುಣ ದೇವ ನಿನ್ನ ಕೃಪೆ ತೋರಿಸು ಹಾಗೂ ಬರಗಾಲ ನಿವಾರಣೆ ಮಾಡು ಎಂದು ಕರ್ನಾಟಕ ಸಿಂಹ ಗರ್ಜನೆಯ ರಾಜ್ಯಾಧ್ಯಕ್ಷ ಕೆ.ಶಾ.ಪ್ರಸನ್ನಕುಮಾರಸ್ವಾಮಿ ಅವರು ಎಳ್ಳು ನೀರು ಬಿಟ್ಟು ಪಿಂಡ ಪ್ರದಾನ ಮಾಡಿದ್ದಾರೆ. ವಿವಿಧ ಭಕ್ಷ್ಯಗಳನ್ನ ಇಟ್ಟು ನಮ್ಮನ್ನಗಲಿದ ಗುರು ಹಿರಿಯರ ಬಳಿ ಮನವಿ ಮಾಡಿದ್ದಾರೆ‌.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version