ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency-NTA ) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಪ್ರಕಟಿಸಿದೆ. ಕರ್ನಾಟಕದ ಧ್ರುವ್ ಅದ್ವಾನಿ ಈ ಪರೀಕ್ಷೆಯಲ್ಲಿ 5ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಪರೀಕ್ಷೆಯಲ್ಲಿ ತಮಿಳುನಾಡಿನ ಪ್ರಭಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ 720 ಕ್ಕೆ 720 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರಿಬ್ಬರು ಈ ಸಲದ ಮೊದಲ ರ‍್ಯಾಂಕ್ ಹಂಚಿಕೊಂಡಿದ್ದಾರೆ. ಕರ್ನಾಟಕದ ಬೈರೇಶ್ ಎಸ್.ಎಚ್. 48ನೇ ರ‍್ಯಾಂಕ್ ಪಡೆದಿದ್ದು, ಟಾಪ್ 50ರ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
ಧ್ರುವ್ ಅದ್ವಾನಿಯು 715 ಅಂಕಗಳನ್ನು (ಶೇ.99.99) ಪಡೆದು 5ನೇ ರ‍್ಯಾಂಕ್ ಪಡೆದಿದ್ದರೆ, 48ನೇ ರ‍್ಯಾಂಕ್ ಪಡೆದಿರುವ ಎಸ್.ಎಚ್.ಬೈರೇಶ್ 710(ಶೇ.99.99) ಅಂಕ ಗಳಿಸಿದ್ದಾರೆ. ಟಾಪ್ 10 ಅಂಗವಿಕಲ ಮಹಿಳಾ ಕೋಟಾದಲ್ಲಿ ಲಾವಣ್ಯ ಗುಪ್ತಾ 686 (ಶೇ.99.94) ಅಂಕ ಗಳಿಸಿ ದೇಶಕ್ಕೆ ಮೊದಲ ಟಾಪರ್ ಎನಿಸಿದ್ದಾರೆ. ಪರಿಶಿಷ್ಟ ಪಂಗಡ ಕೆಟಗರಿಯಲ್ಲಿ ಸಚಿನ್ ಪಿ.ಆರ್. 7ನೇ ರ್ಯಾಂಕ್ ಮತ್ತು ಚಾಯಾಂಕ್ ಮೂರ್ತೆಣ್ಣವರ್ 9ನೇ ರ‍್ಯಾಂಕ್ ಪಡೆದಿದ್ದಾರೆ.
ಎನ್ಟಿಎ ನೀಟ್ ಫಲಿತಾಂಶಗಳ ಜೊತೆಗೆ ಅಖಿಲ ಭಾರತ ಟಾಪರ್ಗಳ ಹೆಸರುಗಳು ಮತ್ತು ಅವರು ಗಳಿಸಿದ ಅಂಕಗಳು ಮತ್ತು ವರ್ಗವಾರು ಕಟ್ ಆಫ್ ಅಂಕಗಳನ್ನು ಪ್ರಕಟಿಸಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಮಣಿಪುರ ಹೊರತುಪಡಿಸಿ ಬೇರೆಲ್ಲ ರಾಜ್ಯಗಳಲ್ಲಿ ಮೇ 7, 2023ರಂದು ನಡೆಸಲಾಗಿತ್ತು. ಮಣಿಪುರದ 8,753 ಅಭ್ಯರ್ಥಿಗಳಿಗೆ ಜೂನ್ 6 ರಂದು ರಾಜ್ಯ ರಾಜಧಾನಿ ಇಂಫಾಲ್ ಸೇರಿದಂತೆ 11 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ.
ಮೇ 7 ಮತ್ತು ಜೂನ್ 6 ರ ನೀಟ್ ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳನ್ನು ಅಭ್ಯರ್ಥಿಗಳ ರೆಕಾರ್ಡ್ ಮಾಡಿದ ಪ್ರತಿಕ್ರಿಯೆಗಳು ಮತ್ತು ಒಎಂಆರ್ ಪ್ರತಿಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಅಂತಿಮ ಕೀ ಉತ್ತರಗಳನ್ನು ಫಲಿತಾಂಶಗಳೊಂದಿಗೆ ಅಥವಾ ನಂತರ ಪ್ರಕಟಿಸಲಾಗುತ್ತದೆ.
ಭಾರತದ ಹೊರಗಿನ 14 ನಗರಗಳು ಸೇರಿದಂತೆ ಭಾರತದ 499 ನಗರಗಳಲ್ಲಿರುವ 4097 ವಿವಿಧ ಕೇಂದ್ರಗಳಲ್ಲಿ 2087462 ಅಭ್ಯರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಯುಜಿ) ನಡೆಸಲಾಗಿತ್ತು.
ಅಗ್ರ 20 ರ‍್ಯಾಂಕ್ ಪಡೆದವರ ಪಟ್ಟಿ ಇಲ್ಲಿದೆ;
ರ‍್ಯಾಂಕ್ 1: ಪ್ರಬಂಜನ್ ಜೆ, ಬೋರಾ ವರುಣ್ ಚಕ್ರವರ್ತಿ (720 ಅಂಕಗಳು)
ರ‍್ಯಾಂಕ್ 3: ಕೌಸ್ತವ್ ಬೌರಿ (716)
4ನೇ ರ‍್ಯಾಂಕ್: ಪ್ರಂಜಲ್ ಅಗರ್ವಾಲ್ (715)
5ನೇ ರ‍್ಯಾಂಕ್: ಧ್ರುವ್ ಅಡ್ವಾಣಿ (715)
6ನೇ ರ‍್ಯಾಂಕ್: ಸೂರ್ಯ ಸಿದ್ಧಾರ್ಥ್ ಎನ್ (715)
7ನೇ ರ‍್ಯಾಂಕ್: ಶ್ರೀನಿಕೇತ್ ರವಿ (715)
8ನೇ ರ‍್ಯಾಂಕ್: ಸ್ವಯಂ ಶಕ್ತಿ ತ್ರಿಪಾಠಿ (715)
ರ‍್ಯಾಂಕ್9: ವರುಣ್ ಎಸ್ (715)
10ನೇ ರ‍್ಯಾಂಕ್: ಪಾರ್ಥ್ ಖಂಡೇಲ್ವಾಲ್ (715)
11ನೇ ರ‍್ಯಾಂಕ್: ಆಶಿಕಾ ಅಗರ್ವಾಲ್ (715)
12ನೇ ರ‍್ಯಾಂಕ್: ಸಯಾನ್ ಪ್ರಧಾನ್ (715)
13ನೇ ರ‍್ಯಾಂಕ್: ಹರ್ಷಿತ್ ಬನ್ಸಾಲ್ (715)
14ನೇ ರ‍್ಯಾಂಕ್: ಶಶಾಂಕ್ ಕುಮಾರ್ (715)
15ನೇ ರ‍್ಯಾಂಕ್: ಕಾಂಚನಿ ಗೇಯಂತ್ ರಘು ರಾಮ್ ರೆಡ್ಡಿ (715)
16ನೇ ರ‍್ಯಾಂಕ್: ಶುಭಮ್ ಬನ್ಸಾಲ್ (715)
17ನೇ ರ‍್ಯಾಂಕ್: ಭಾಸ್ಕರ್ ಕುಮಾರ್ (715)
18ನೇ ರ‍್ಯಾಂಕ್: ದೇವ್ ಭಾಟಿಯಾ (715)
19ನೇ ರ‍್ಯಾಂಕ್: ಅರ್ನಬ್ ಪತಿ (715)
20ನೇ ರ‍್ಯಾಂಕ್: ಶಶಾಂಕ್ ಸಿನ್ಹಾ (715)
ಇದನ್ನೂ ಓದಿ : KCET Result 2023 : ಸಿಇಟಿ ಫಲಿತಾಂಶ ಜೂನ್ 15 ಕ್ಕೆ ಖಚಿತ