Site icon Vistara News

Karnatata Election: ಕಾಂಗ್ರೆಸ್‌ ಗೆದ್ದ ಬೆನ್ನಲ್ಲೇ ಭಟ್ಕಳ ವೃತ್ತದಲ್ಲಿ ಮುಸ್ಲಿಂ ಧ್ವಜ ಹಾರಾಟ

Muslim flag hoisted in Samshuddin circle in Bhatkal

Muslim flag hoisted in Samshuddin circle in Bhatkal

ಕಾರವಾರ: ಭಟ್ಕಳ ವಿಧಾನಸಭಾ ಕ್ಷೇತ್ರ ದಲ್ಲಿ (Karnataka Election results 2023) ಕಾಂಗ್ರೆಸ್‌ ಅಭ್ಯರ್ಥಿ ಮಂಕಾಳು ವೈದ್ಯ (Mankalu vaidya) ಅವರು ಗೆಲುವು ಸಾಧಿಸಿದ ಬೆನ್ನಲ್ಲೇ ಭಟ್ಕಳ ಪಟ್ಟಣದ ಸಂಶುದ್ದೀನ್‌ ವೃತ್ತದಲ್ಲಿ ಮುಸ್ಲಿಂ ಧ್ವಜ ವನ್ನು ಹಾರಿಸಲಾಗಿದೆ.

ಭಟ್ಕಳದ ಪೇಟೆಯ ಮಧ್ಯಭಾಗದಲ್ಲಿರುವ ಸಂಶುದ್ದೀನ್‌ ವೃತ್ತದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ಮಂಕಾಳು ವೈದ್ಯ ಅವರ ಭಾವಚಿತ್ರವಿರುವ ಧ್ವಜ, ಅಂಬೇಡ್ಕರ್‌ರ ಧ್ವಜದೊಂದಿಗೆ ಮುಸ್ಲಿಂ ಧ್ವಜವನ್ನು ಪ್ರದರ್ಶನ ಮಾಡಲಾಗಿದೆ.

ವೃತ್ತದಲ್ಲಿ ಹಾಕಲಾಗಿದ್ದ ಕೇಸರಿ ಧ್ವಜದೊಂದಿಗೆ ಮುಸ್ಲಿಂ ಯುವಕರು ಮುಸ್ಲಿಂ ಧ್ವಜ ಹಾರಿಸುವ ವಿಡಿಯೊ ವೈರಲ್‌ ಆಗಿದೆ. ಮುಸ್ಲಿಂ ಯುವಕರ ಈ ಕೃತ್ಯಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮಂಕಾಳು ವೈದ್ಯ ಅವರು ಭಟ್ಕಳ ಕ್ಷೇತ್ರದಲ್ಲಿ 30 ಸಾವಿರಕ್ಕೂ ಅಧಿಕ ಮತಗಳ‌ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಸುನೀಲ್ ನಾಯ್ಕ ವಿರುದ್ಧ ಭರ್ಜರಿ ಮತಗಳ ಅಂತರದಿಂದ ಗೆಲವು ಸಾಧಿಸಿರುವುದರಿಂದ ಮುಸ್ಲಿಂ ಯುವಕರು ಸಂಭ್ರಮಾಚರಣೆ ನಡೆಸಿದ್ದಾರೆ.

ಮುಸ್ಲಿಂ ಯುವಕರು ವೃತ್ತವನ್ನು ಹತ್ತಿ ಅಲ್ಲಿಂದಲೇ ಧ್ವಜವನ್ನು ಬೀಸುತ್ತಿರುವ ದೃಶ್ಯ ವೈರಲ್‌ ಆಗಿದ್ದು, ಕೆಲವರು ಇದು ಪಾಕಿಸ್ತಾನದ ಧ್ವಜ ಎಂದೂ ಹೇಳುತ್ತಿದ್ದಾರೆ. ಆದರೆ, ಅರ್ಧ ಚಂದ್ರ ಮತ್ತು ನಕ್ಷತ್ರ ಇರುವ ಈ ಧ್ವಜ ಮುಸ್ಲಿಮರ ಧ್ವಜ ಎಂದೂ ಹೇಳಲಾಗಿದೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

Exit mobile version