ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda Airport) ಎರಡನೇ ಟರ್ಮಿನಿಲ್ ಇಂದಿನಿಂದ(ಜ.15)ರಿಂದ ಪ್ರಯಾಣಿಕರ ಸೇವೆಗೆ ಲಭ್ಯವಾಗುತ್ತಿದೆ. ಮಕರ ಸಂಕ್ರಾಂತಿಯ ಪ್ರಯುಕ್ತ ಬೆಂಗಳೂರಿನಿಂದ ಕಲಬುರಗಿಗೆ ಮೊದಲ ವಿಮಾನ ಹಾರಾಟ ನಡೆಸಲಿದೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಎರಡನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದರು. ಬೆಂಗಳೂರಿನಿಂದ ಕಲಬುರಗಿಗೆ ಸ್ಟಾರ್ ಏರ್‌ಲೈನ್ಸ್ ಮೊದಲ ವಿಮಾನ ಸಂಚಾರ ಆರಂಭಿಸುತ್ತಿದೆ. ಟರ್ಮಿಲ್‌ನಲ್ಲಿ ಪ್ರಯಾಣಿಕರು ತುಂಬಿದ್ದಾರೆ. ಭಾನುವಾರ ಬೆಳಗ್ಗೆ 8.40ಕ್ಕೆ ಮೊದಲ ವಿಮಾನ ಕಲ್ಬುರ್ಗಿಯತ್ತ ಟೇಕಾಫ್ ಆಗಿದೆ. ಪ್ರತಿ ಪ್ರಯಾಣಿಕರಿಗೆ ಶಾಲು ಹೊದಿಸಿ, ಸ್ವೀಟ್ ಬಾಕ್ಸ್ ನೀಡಿ, ಏರ್‌ಪೋರ್ಟ್ ಸಿಬ್ಬಂದಿ ಸ್ವಾಗತಿಸುತ್ತಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿದೆ. ಎರಡನೇ ಟರ್ಮಿನಲ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ, ಮುಂಬಯಿ ಏರ್‌ಪೋರ್ಟ್ ಅನ್ನು ಹಿಂದಿಕ್ಕಿ ಎರಡನೇ ಬ್ಯುಸಿ ಏರ್‌ಪೋರ್ಟ್ ಆಗಲಿದೆ ಬೆಂಗಳೂರು ಏರ್‌ಪೋರ್ಟ್. ಒಟ್ಟು 2.54 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ಮೊದಲ ಹಂತ ನಿರ್ಮಾಣವಾಗಲಿದೆ. ಈಗಾಗಲೇ 5,000 ಕೋಟಿ ರೂ. ಹೂಡಿಕೆ ಆಗಿದೆ. ಸುಸಜ್ಜಿತ ಚೆಕ್ ಇನ್ ಕೌಂಟರ್, ಸೆಕ್ಯುರಿಟಿ ಲೇನ್, ಎಮಿಗ್ರೇಶನ್ ಕೌಂಟರ್, ಕಸ್ಟಮ್ಸ್ ಹ್ಯಾಂಡ್ ಬ್ಯಾಗ್ ತಪಾಸಣೆ, ಶಾಪಿಂಗ್ ಮಾಲ್, ರೆಸ್ಟೋರೆಂಟ್ ಸೌಲಭ್ಯ.
ಇದನ್ನೂ ಓದಿ | Modi in Bengaluru | ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ