Site icon Vistara News

ವಸಂತ ನಗರದಲ್ಲಿರುವ ಕೆಜಿಎಫ್‌ ಬಾಬು ಮನೆ, ಕಚೇರಿ ಮೇಲೆ ಐಟಿ ದಾಳಿ, ಪರಿಶೀಲನೆ

ಕೆಜಿಎಫ್‌ ಬಾಬು

ಬೆಂಗಳೂರು: ಉದ್ಯಮಿ ಹಾಗೂ ಕಾಂಗ್ರೆಸ್‌ನಿಂದ ಇತ್ತೀಚೆಗಷ್ಟೇ ಎಂಎಲ್ಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯೂಸುಫ್‌ ಷರೀಫ್‌ (ಕೆಜಿಎಫ್‌ ಬಾಬು) ಮನೆ ಹಾಗೂ ಕಚೇರಿ ಮೇಲೆ ಶನಿವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶನಿವಾರ ಬೆಳಗ್ಗೆ ವಸಂತ ನಗರದಲ್ಲಿರುವ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಕೆಜಿಎಫ್‌ ಬಾಬು ಮನೆ ಮತ್ತು ಕಚೇರಿ ಸೇರಿದಂತೆ 7 ಕಡೆ ಆದಾಯ ತೆರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಜಿಎಫ್‌ ಬಾಬು ಆದಾಯ ತೆರಿಗೆ ಪಾವತಿಸದ ಕಾರಣಕ್ಕೆ ಕೆಜಿಎಫ್‌ ಮತ್ತು ಕೋಲಾರದಲ್ಲಿರುವ ಅವರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ | 19ರ ವಯಸ್ಸಿನಲ್ಲೇ ಕಾಲೇಜ್‌ ಡ್ರಾಪ್‌ ಔಟ್‌ ಆಗಿದ್ದ ಅಲೆಕ್ಸಾಂಡರ್‌ ವಾಂಗ್‌, ಈಗ ಜಗತ್ತಿನ ಕಿರಿಯ ಬಿಲಿಯನೇರ್‌ ಉದ್ಯಮಿ!

ಕಾಂಗ್ರೆಸ್‌ನಿಂದ ಸ್ಥಳೀಯ ಸಂಸ್ಥೆಗಳ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದ ಕೆಜಿಎಫ್‌ ಬಾಬು ಚುನಾವಣೆ ವೇಳೆ ₹1741 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು.

ನಾಮಪತ್ರ ಸಲ್ಲಿಕೆ ವೇಳೆ ಕೆಜಿಎಫ್‌ ಬಾಬು ತಿಳಿಸಿರುವ ಪ್ರಕಾರ, ಇವರ ಬಳಿ ₹1,741.57 ಕೋಟಿ ಆಸ್ತಿ ಇದೆ. ₹97.98 ಕೋಟಿ ಮೌಲ್ಯದ ಚರಾಸ್ತಿ, ₹1643.59 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು ₹1,741.57 ಕೋಟಿ ಆಸ್ತಿ, ಪತ್ನಿಯರು, ಅವಲಂಬಿತರು ಸೇರಿ ಅವರ ಒಟ್ಟು ಆಸ್ತಿ ₹1,745 ಕೋಟಿ ರೂ ಎಂದು ಘೋಷಿಸಿಕೊಂಡಿದ್ದರು.

ಇದನ್ನೂ ಓದಿ | Mindtree: ಮೈಂಡ್‍ಟ್ರಿ ಜತೆ L&T ಇನ್ಫೊ ಟೆಕ್ ವಿಲೀನ, 5ನೇ ದೊಡ್ಡ ಐಟಿ ಕಂಪನಿ ಸೃಷ್ಟಿ

Exit mobile version