ಬಾಗಲಕೋಟೆ: ರಾಜ್ಯ ವಿಧಾನಸಭೆ ಚುನಾವಣೆ ಕಾವು (Karnataka Election) ದಿನೇದಿನೆ ಜಾಸ್ತಿಯಾಗುತ್ತಿದೆ. ಸಿನಿಮಾ ನಟರು ಕೂಡ ಚುನಾವಣೆ ಪ್ರಚಾರಕ್ಕೆ ಧುಮುಕಿದ್ದಾರೆ. ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿ ಹಲವು ನಟ-ನಟಿಯರು ತಮ್ಮ ಆಪ್ತರ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಚಿತ್ರನಟರನ್ನು ಕಂಡು ಜನರು ಕೂಡ ಪುಳಕಿತರಾಗುತ್ತಿದ್ದಾರೆ. ಅದರಲ್ಲೂ, ಸುದೀಪ್ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಬಾಗಲಕೋಟೆಯಲ್ಲಿ ಅಜ್ಜಿಯೊಬ್ಬರು ಸುದೀಪ್ ಅವರನ್ನು ಪ್ರಚಾರಕ್ಕೆ ಕರೆಸದ ಕಾರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, “ಸುದೀಪ್ ಅವರನ್ನು ಕರೆಸದ ಕಾರಣ ನಾನು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವುದಿಲ್ಲ” ಎಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಚುನಾವಣೆ ಪ್ರಚಾರ ನಡೆಸಿದ್ದಾರೆ. ಸಮಾವೇಶವನ್ನೂ ಆಯೋಜಿಸಿದ್ದಾರೆ. ಸಮಾವೇಶಕ್ಕೆ ಆಯೋಜಿಸಿದ ಅಜ್ಜಿಗೆ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆಸದ ಕಾರಣ ಸಿಟ್ಟುಬಂದಿದೆ. ಇದೇ ವೇಳೆ, ಬಿಜೆಪಿ ಮುಖಂಡರೊಬ್ಬರು ಅಜ್ಜಿಯ ಬಳಿ ಬಂದು ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಜ್ಜಿ, “ಸುದೀಪ್ ಇಲ್ಲಿಗೆ ಯಾಕೆ ಬಂದಿಲ್ಲ. ನಾನು ನಿನಗೆ ವೋಟ್ ಹಾಕುವುದಿಲ್ಲ” ಎಂದು ಹೇಳಿದ್ದಾರೆ. ಸುದೀಪ್ ಬರದೆ ಇದ್ದಿದ್ದಕ್ಕೆ ಮುಖಂಡರು ಹಲವು ಕಾರಣ ನೀಡಿದರೂ ಅಜ್ಜಿ ಕೋಪಿಸಿಕೊಂಡು ಹಾಗೆ ಹೇಳಿದ್ದಾರೆ.
ಇಲ್ಲಿದೆ ಅಜ್ಜಿ ವರಾತದ ವಿಡಿಯೊ
ಇದನ್ನೂ ಓದಿ: Karnataka Election 2023: ಬಿಜೆಪಿ ಪರ ಪ್ರಚಾರಕ್ಕೆ ಶಾರ್ಟ್ ಬ್ರೇಕ್; ನಟ ಸುದೀಪ್ ಕೊಟ್ಟ ಕಾರಣವೇನು?
ಸುದೀಪ್ ಅವರು ಅಬ್ಬರದ ಪ್ರಚಾರದ ಮಧ್ಯೆಯೇ ಎರಡು ದಿನ ಬ್ರೇಕ್ ತೆಗೆದುಕೊಂಡಿದ್ದರು. ಹಾಗೆಯೇ, ಬೊಮ್ಮಾಯಿ ಅವರ ಪರ ಪ್ರಚಾರ ಮಾಡುವುದಾಗಿ ತಿಳಿಸಿದ್ದರು. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದ ಅವರು, “ನಾನು ಈ ಮೊದಲೇ ಹೇಳಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದೇನೆ. ಅದಕ್ಕೆ ಬದ್ಧವಾಗಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೂ ನನಗೆ ಬೇಕಾದವರು. ಈ ಒಂದು ಚುನಾವಣಾ ನಾನು ಎಲ್ಲರೊಂದಿಗೆ ಹೊಂದಿರುವ ಸಂಬಂಧಗಳನ್ನು ಕಡಿದು ಹಾಕುವುದಿಲ್ಲ. ಡಿಕೆಶಿ ಅವರು ಸ್ವಲ್ಪ ಮಜಾ ತೆಗೆದುಕೊಳ್ಳುತ್ತಾರೆ. ತೆಗೆದುಕೊಳ್ಳಲಿ ಎಂದು ಹೇಳಿದರು. ಹೆಬ್ಬುಲಿ ಸಿನಿಮಾ ನಂತರದ ಇದೇ ಮೊದಲ ಬಾರಿಗೆ ನಾನು ರೋಡ್ ಶೋ ಮಾಡುತ್ತಿರುವುದು” ಎಂದು ತಿಳಿಸಿದ್ದರು.