Site icon Vistara News

Kichcha Sudeep: ಬೊಮ್ಮಾಯಿ ಪರ ಕಿಚ್ಚ ಸುದೀಪ್ ಪ್ರಚಾರ ಪ್ರವಾಸ ಇಂದಿನಿಂದ ಆರಂಭ

Kichcha Sudeep Sent Notice To Producer Kumar

Actor Kichcha Sudeep Sent Notice To Producer Kumar Who Made Allegations Against Actor

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraja bommai) ಅವರ ಪರ ಪ್ರಚಾರಕ್ಕಿಳಿದಿರುವ ನಟ ಕಿಚ್ಚ ಸುದೀಪ್ (Kichcha Sudeep), ಇಂದಿನಿಂದ ಅಧಿಕೃತವಾಗಿ ಬೀದಿಗಿಳಿಯಲಿದ್ದಾರೆ.

ಬೆಳಗ್ಗೆ 9ಕ್ಕೆ ಬೆಂಗಳೂರಿನ ಹೆಚ್‌ಎಎಲ್‌ ವಿಮಾನ ನಿಲ್ದಾಣದಿಂದ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಹುಬ್ಬಳ್ಳಿಗೆ ಪ್ರಯಾಣ ಹೊರಡಲಿರುವ ಸುದೀಪ್, ಹುಬ್ಬಳ್ಳಿಯಿಂದ ಶಿಗ್ಗಾಂವಿಗೆ ತೆರಳಲಿದ್ದಾರೆ. ನಂತರ ಬೊಮ್ಮಾಯಿಯವರ ನಾಮಪತ್ರ ಸಲ್ಲಿಕೆ ವೇಳೆ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ.

ರಾಜಕೀಯ ಅಖಾಡದಲ್ಲಿ ʼರನ್ನʼನ ಮತಬೇಟೆ ಹೇಗಿರಲಿದೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಹಾಗೂ ಪಕ್ಷದಲ್ಲಿ ಮೂಡಿದೆ. ಪಕ್ಷದ ಕಾರ್ಯಕರ್ತರಲ್ಲಿ ಸುದೀಪ್‌ ಆಗಮನ ಹುಮ್ಮಸ್ಸು ಹೆಚ್ಚಿಸಿದೆ. ಸುದೀಪ್‌ ರಾಜಕೀಯಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿಗಳ ನಡುವೆ ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಸುದೀಪ್, ತಾನು ಬೊಮ್ಮಾಯಿಯವರ ಪರ ಪ್ರಚಾರ ಮಾಡಲಿದ್ದೇನೆ ಎಂದು ಪ್ರಕಟಿಸಿದ್ದರು.

ಶಿಗ್ಗಾಂವಿಯಲ್ಲಿ ಸುದೀಪ್‌ ಎಷ್ಟು ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂಬ ವಿವರ ಇನ್ನೂ ಲಭ್ಯವಿಲ್ಲ. ಇದೇ ವೇಳೆಗೆ, ಸುದೀಪ್‌ ಬಿಜೆಪಿಯತ್ತ ಸೆಳೆಯಬಹುದಾದ ಮತಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಕಾಂಗ್ರೆಸ್‌ ತಲೆ ಕೆಡಿಸಿಕೊಳ್ಳುತ್ತಿದೆ.

ಇದನ್ನೂ ಓದಿ: Karnataka Elections : ಕಿಚ್ಚ ಸುದೀಪ್‍ಗೆ ಅವಮಾನ ಮಾಡಿದ ಕಾಂಗ್ರೆಸ್, ಜೆಡಿಎಸ್‍ಗೆ ಜನರಿಂದ ತಕ್ಕ ಉತ್ತರ: ಗೌರವ್ ಭಾಟಿಯ

Exit mobile version