Site icon Vistara News

Kidnap Case: ರೈತನ ಮೇಲೆ ಹಲ್ಲೆ, ಟೊಮ್ಯಾಟೊ ತುಂಬಿದ ವಾಹನ ಸಮೇತ ಪರಾರಿ!

bolero theft

ಬೆಂಗಳೂರು: ಟೊಮ್ಯಾಟೊ ರೇಟ್ ಗಗನಕ್ಕೇರಿದ್ದೇ ತಡ (tomato price hike) ಟೊಮ್ಯಾಟೋ ಗಾಡಿಯನ್ನೇ ಅಪಹರಿಸಿ ಒಯ್ದ (kidnap case) ಘಟನೆ ವರದಿಯಾಗಿದೆ. 250 ಕಿಲೋಗೂ ಹೆಚ್ಚು ಟೊಮ್ಯಾಟೊ ತುಂಬಿದ್ದ ಬೊಲೆರೋ ಪಿಕಪ್‌ ವಾಹನವನ್ನು ಪೀಣ್ಯ ಬಳಿ ದುಷ್ಕರ್ಮಿಗಳು ರೈತನ ಮೇಲೆ ಹಲ್ಲೆ ಮಾಡಿ (assault case) ಸೆಳೆದು ಕೊಂಡೊಯ್ದಿದ್ದಾರೆ.

ಹಿರಿಯೂರಿನಿಂದ ಕೋಲಾರಕ್ಕೆ ಟೊಮ್ಯಾಟೋ ಸಾಗಿಸುತ್ತಿದ್ದ ರೈತರ ವಾಹನವನ್ನು ಕಾರಿನಲ್ಲಿ ಬಂದಿದ್ದ ಮೂವರು ಹಿಂಬಾಲಿಸಿದ್ದರು. ಟೊಮ್ಯಾಟೊ ತುಂಬಿದ್ದ ಗಾಡಿ ನೋಡಿ ಅದನ್ನು ಫಾಲೋ ಮಾಡಿದ್ದರು. ಆರ್‌ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಗೆ ಬಂದಾಗ ಗಾಡಿ ಟಚ್ ಆದಂತೆ ನಾಟಕ ಆಡಿ ಬೊಲೆರೋ ನಿಲ್ಲಿಸಿ ಡ್ರೈವರ್‌ಗೆ ಹಲ್ಲೆ ಮಾಡಿದ್ದರು.

ನಂತರ ಗಾಡಿ ಡ್ಯಾಮೇಜ್‌ ಆಗಿದೆ, ಹಣ ಕೊಡು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಇಲ್ಲ ಎಂದಾಗ ಮೊಬೈಲ್‌ ಮೂಲಕ ಹಣ ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದರು. ನಂತರ ಟೊಮ್ಯಾಟೋ ತುಂಬಿದ್ದ ಇಡೀ ಗಾಡಿಯನ್ನೇ ಹೈಜಾಕ್ ಮಾಡಿಕೊಂಡು, ಗಾಡಿಯಲ್ಲಿ ರೈತನನ್ನು ಕೂರಿಸಿಕೊಂಡು ಹೋಗಿದ್ದರು. ಚಿಕ್ಕಜಾಲ ಬಳಿ ಡ್ರೈವರ್‌ನನ್ನು ಬಿಟ್ಟು ಟೊಮ್ಯಾಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದರು.

ಸದ್ಯ ಘಟನೆ ಸಂಬಂಧ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: Kidnapping Case: ಕಾಲ್‌ ಗರ್ಲ್‌ ಆಗಿ ಬಂದವಳೇ ಕಿಡ್ನ್ಯಾಪರ್‌ ಆದಳು; ಬೆಂಗಳೂರು ಯುವಕರ ಅಪಹರಣ ಕೇಸ್‌ಗೆ ಟ್ವಿಸ್ಟ್‌

Exit mobile version