Site icon Vistara News

Kidnapping Case : ಬಸ್‌ನಲ್ಲಿ ಅಪರಿಚಿತರ ಕೈಗೆ ಕೊಟ್ಟ ಮಗು ಮಿಸ್ಸಿಂಗ್‌; ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಪೊಲೀಸರು

Malavalli police give a twist to Mandya childs missing case

ಮಂಡ್ಯ: ಮಂಡ್ಯದಲ್ಲಿ ಮಗು ಮಿಸ್ಸಿಂಗ್‌ ಕೇಸ್‌ಗೆ (Missing Case) ಪೊಲೀಸರ ತನಿಖೆಯಲ್ಲಿ ಟ್ವಿಸ್ಟ್‌ ಸಿಕ್ಕಿದೆ. ಮಹಿಳೆಯ ಹೈಡ್ರಾಮಾಕ್ಕೆ ಪೊಲೀಸರೇ ದಂಗಾಗಿದ್ದರು. ಆಕೆ ಮಧ್ಯ ವಯಸ್ಸಿನ ಮಹಿಳೆ, ಈಗಾಗಲೇ ಮಕ್ಕಳು, ಮೊಮ್ಮಕ್ಕಳನ್ನು ಹೊಂದಿದ್ದಾಳೆ. ನಿನ್ನೆ ಬುಧವಾರ ಚೆನ್ನಪಟ್ಟಣದಿಂದ ಮಳವಳ್ಳಿಗೆ ಹೋಗುತ್ತಿದ್ದಳು. ಮಳವಳ್ಳಿ ಪಟ್ಟಣದಲ್ಲಿ ತನ್ನ 7 ತಿಂಗಳ ಗಂಡು ಮಗುವೊಂದನ್ನು ಅಪರಿಚಿತ ಮಹಿಳೆಯೊಬ್ಬಳು ಎತ್ತಿಕೊಂಡು (Kidnapping Case) ಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆಕೆ ನೀಡಿದ ದೂರಿನ್ವಯ ಮಗು ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಮಳವಳ್ಳಿ ಠಾಣೆ ಪೊಲೀಸರು (Malavalli Police) ತನಿಖೆಗೆ ಇಳಿಯುವ ಮೊದಲೇ ಇಡೀ ಪ್ರಕರಣ ಬೇರೊಂದು ಟ್ವಿಸ್ಟ್ ಪಡೆದುಕೊಂಡಿತ್ತು.

ಟಿ.ನರಸೀಪುರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದ ಸವಿತಾ ಎಂಬಾಕೆ ಚೆನ್ನಪಟ್ಟಣದಿಂದ ಮಳವಳ್ಳಿಗೆ ಸರ್ಕಾರಿ ಬಸ್‌ನಲ್ಲಿ ತೆರಳುತ್ತಿದ್ದಳು. ಈ ವೇಳೆ ಸೀಟ್‌ ಇಲ್ಲದ ಕಾರಣಕ್ಕೆ ತನ್ನ 7 ತಿಂಗಳ ಮಗುವನ್ನು ಬಸ್‌ನಲ್ಲೇ ಇದ್ದ ಅಪರಿಚಿತ ಮಹಿಳೆಯೊಬ್ಬರು ಮಗು ಎತ್ತಿಕೊಂಡಿದ್ದಳು. ಆದರೆ ಮಳವಳ್ಳಿ ಬಸ್ ನಿಲ್ದಾಣದಲ್ಲಿಬಸ್ ಇಳಿಯುತ್ತಲೇ ಮಗುವಿನ ಸಮೇತ ಎಸ್ಕೇಪ್ ಆಗಿದ್ದಾಳೆ ಎಂದು ಏಕಾಏಕಿ ಕಿರುಚಾಡಲು ಶುರು ಮಾಡಿದ್ದಳು.

ನಂತರ ಮಳವಳ್ಳಿ ಪಟ್ಟಣ ಠಾಣೆಗೆ ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಮೇರೆಗೆ ಮಗುವಿನ ನಾಪತ್ತೆ ಪ್ರಕರಣ ದಾಖಲಿಸಿಕೊಂಡರು. ಇನ್ನೇನು ತನಿಖೆ ಮುಂದುವರೆಸಬೇನ್ನುವಷ್ಟರಲ್ಲಿ ಇಡೀ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿತ್ತು. ಯಾಕಂದರೆ ತನ್ನ ಮಗು ನಾಪತ್ತೆ ಆಗಿದೆ ಎಂದು ಹೇಳಿಕೊಂಡು ದೂರು ನೀಡಿದ್ದ ಮಹಿಳೆಯದ್ದೇ ಆಗಿರಲಿಲ್ಲ.

ಯಾಕೆಂದರೆ ಪೊಲೀಸರು ಮಗು ಕಿಡ್ನ್ಯಾಪ್ ಆಗಿದೆ ಎಂದು ಪ್ರಕಟಣೆ ಹೊರಡಿಸಿದ್ದರು. ಎಲ್ಲಾ ಕಡೆಗಳಲ್ಲಿ ಫೋಟೊ ವೈರಲ್ ಆಗಿತ್ತು. ಈ ಫೋಟೊವನ್ನು ನೋಡಿದ ಮಗುವಿನ ನಿಜವಾದ ತಂದೆಗೆ ಒಂದು ಕ್ಷಣ ಆಘಾತವೇ ಆಗಿತ್ತು. ಯಾಕಂದರೆ ಕಿಡ್ನ್ಯಾಪ್ ಆಗಿದೆ ಎಂದು ಹೇಳಲಾಗಿರುವ ಮಗು ತನ್ನ ಹೆತ್ತವರ ಮಡಿಲಿನಲ್ಲಿ ಜೋಪಾನವಾಗಿತ್ತು.

ಇದನ್ನೂ ಓದಿ: BBK SEASON 10: ನನ್ನ ಕ್ಯಾರೆಕ್ಟರ್‌ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿಲ್ಲ; ಸಂಗೀತಾಗೆ ಕಾರ್ತಿಕ್‌ ತಿರುಗೇಟು!

ಹೌದು ಇಲ್ಲಿ ನಾಪತ್ತೆಯಾಗಿದ್ದ ಮಗುವು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸಾಗ್ಯ ಗ್ರಾಮದ ದರ್ಶನ್ ಹಾಗೂ ರಮ್ಯಾ ದಂಪತಿಯಾದಾಗಿತ್ತು. ದರ್ಶನ್‌ರ ಪತ್ನಿ ರಮ್ಯಾ ಅವರು ಚೆನ್ನಪಟ್ಟಣ ತಾಲೂಕಿನ ನೆರಲೂರು ಗ್ರಾಮದವರು, ಇಲ್ಲಿ ಮಗು ಕಿಡ್ನ್ಯಾಪ್ ಎಂದು ದೂರು ನೀಡಿರುವ ಸವಿತ ಸಹ ನೆರಲೂರಿನ ಗ್ರಾಮದವಳೇ ಆಗಿದ್ದಳು.

ಸವಿತಾಳಿಗೆ ಈಗಾಗಲೇ ಮಕ್ಕಳು ಮೊಮ್ಮಕ್ಕಳು ಇದ್ದಾರೆ. ಆಕೆ ಹೇಳಿಕೊಂಡಿರುವಂತೆ ಆಕೆ ನರಸೀಪುರ ಗ್ರಾಮದವಳು ಅಲ್ಲ. ಜತೆಗೆ ತನ್ನ ಪತ್ನಿ ಶಿವಕುಮಾರ್ ಎಂದು ಹೇಳಿರುವ ಹೆಸರು ಸಹ ಸುಳ್ಳು. ಯಾಕಂದರೆ ಸವಿತಾಳ ಗಂಡ ತೀರಿ ಹೋಗಿ ಹಲವು ವರ್ಷಗಳೇ ಕಳೆದುಹೋಗಿವೆಯಂತೆ. ಸದ್ಯ ಆಕೆಗೆ ಆರೋಗ್ಯದ ಸಮಸ್ಯೆ ಎದುರಾಗಿದ್ದು, ಮಂಡ್ಯದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ನಡುವೆ ತಮ್ಮ ಸ್ನೇಹಿತನ ಮಗುವನ್ನು ಕುರಿತು ಹರಡಿರುವ ವದಂತಿ ಹಾಗೂ ಸುಳ್ಳು ಸುದ್ದಿ ಬಗ್ಗೆ ಆತಂಕ ವ್ಯಕ್ತಪಡಿಸಿರುವ ದರ್ಶನ್ ಸ್ನೇಹಿತರು ಮಕ್ಕಳ ವಿಚಾರದಲ್ಲಿ ಯಾರೂ ಹೀಗೆ ಮಾಡಬಾರದು. ಆಕೆಯ ವಿರುದ್ಧ ಕ್ರಮಕೈಗೊಂಡು, ಸರಿಯಾದ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಮಗುವನ್ನ ಕಿಡ್ನ್ಯಾಪ್‌ ಮಾಡಲಾಗಿದೆ ಎಂಬ ವಿಚಾರ ಇಟ್ಟುಕೊಂಡು ತನಿಖೆ ಕೈಗೊಳ್ಳಲಾರಂಭಿಸಿದ ಮಳವಳ್ಳಿ ಪಟ್ಟಣ ಠಾಣೆ ಪೊಲೀಸರಿಗೆ ಈಗ ಪ್ರಕರಣ ಮತ್ತೊಂದು ತಿರುವಿನತ್ತ ಸಾಗಿದೆ. ಇಲ್ಲಿ ಸುಳ್ಳು ದೂರು ನೀಡಿ ಪ್ರಕರಣ ದಾಖಲಿಸಿರುವ ಆಕೆಯ ವಿಚಾರಣೆ ನಂತರವಷ್ಟೇ ಇಡೀ ಪ್ರಕರಣ ಸತ್ಯಾಂಶ ಹೊರ ಬರಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version