Site icon Vistara News

Whatsapp Post | ಪಾಕ್‌ ಬಾವುಟವುಳ್ಳ ವಾಟ್ಸ್ಆ್ಯಪ್ ಪೋಸ್ಟ್‌; ಪ್ರಶ್ನಿಸಿದ್ದಕ್ಕೆ ಪೈಲ್ವಾನ್‌ಗಳ ನಡುವೆ ಫೈಟ್‌

post

ವಿಜಯಪುರ: ಇಲ್ಲಿನ ತಿಕೋಟಾ ತಾಲೂಕಿನ ಹೊನವಾಡ ಬಳಿ ಸಂಗ್ರಾಮ ಕಲ್ಲು ಎತ್ತುವ ಇಬ್ಬರು ಪೈಲ್ವಾನ್‌ಗಳ ನಡುವೆ ವಾಟ್ಸ್ಆ್ಯಪ್‌ನಲ್ಲಿ (Whatsapp Post) ದೇಶ ವಿರೋಧಿ ಪೋಸ್ಟ್‌ಗೆ ಸಂಬಂಧಪಟ್ಟಂತೆ ವಾದ-ವಾಗ್ವಾದಗಳು ನಡೆದು ಬಳಿಕ ಅಪಹರಣ ಹಂತಕ್ಕೆ ಹೋಗಿದ್ದಲ್ಲದೆ, ಪ್ರಶ್ನೆ ಮಾಡಿದವನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ನಡೆದಿದೆ.

ಹಲ್ಲೆಗೊಳಗಾದ ಉಮೇಶ್‌ ಹರಗಿ

ಆಸಂಗಿ ಗ್ರಾಮದ ಪೈಲ್ವಾನ್ ಅಫ್ಜಲ್ ಖಾನ್ ಮುಜಾವರ ಎಂಬಾತ ಪಾಕಿಸ್ತಾನದ ಧ್ವಜದ ಮಾದರಿ ಚಿತ್ರವಿರುವ ಹಸಿರು ಸಿಂಹ ಫೋಟೊವನ್ನು ವಾಟ್ಸ್ಆ್ಯಪ್‌ ಗ್ರೂಪ್‌ಗೆ ಪೋಸ್ಟ್‌ ಮಾಡಿದ್ದಾನೆ. ಇದನ್ನು ಪರಿಚಿತ ಉಮೇಶ್‌ ಹರಗಿ ಅವರು ಅಫ್ಜಲ್‌ ಖಾನ್‌ ಬಳಿ ಪ್ರಶ್ನಿಸಿದ್ದಾರೆ.

ಪೈಲ್ವಾನ್ ಅಫ್ಜಲ್ ಖಾನ್ ಮುಜಾವರ ಹಾಗೂ ಆತನ ಪೋಸ್ಟ್‌

ಉಮೇಶ್‌ಗೆ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ಆಗಿದೆ. ಇದೇ ಕೋಪಕ್ಕೆ ಆಗಸ್ಟ್ 22ರ ಸಂಜೆ ಅಫ್ಜಲ್ ಖಾನ್ ಮುಜಾವರ ಮೂವರ ಜತೆಗೆ ಸೇರಿ ಉಮೇಶ್‌ರನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ರಾಡ್‌ನಿಂದ ಮೈಮೇಲೆ ಬಾಸುಂಡೆ ಬರುವಂತೆ ಮನಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಲೆಗೂ ಪೆಟ್ಟಾಗಿದೆ ಎಂದು ಉಮೇಶ್‌ ಆರೋಪಿಸಿದ್ದಾರೆ.

ಅಪ್ಜಲ್ ಖಾನ್ ಪಾಕಿಸ್ತಾನದ ಪರ ಮಾತಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಉಮೇಶ್, ಮಾರಣಾಂತಿಕ ಹಲ್ಲೆ ಮಾಡಿ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಪೈಲ್ವಾನ್ ಉಮೇಶ ಹರಗಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Vijayapura News | ವಿಜಯಪುರ ಡಾಬಾ ಕುರ್ಚಿ ಗಲಾಟೆ; ಚೂರಿ ಇರಿದಿದ್ದ ನಾಲ್ವರ ಅರೆಸ್ಟ್‌

Exit mobile version