Site icon Vistara News

Kissing competition | ಮಂಗಳೂರು ಕಾಲೇಜೊಂದರ ವಿದ್ಯಾರ್ಥಿಗಳ ಹುಚ್ಚಾಟ; ಸುಮೋಟೋ ಕೇಸ್‌ ದಾಖಲು!

kissing competition

ಮಂಗಳೂರು: ಇಲ್ಲಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಆಯೋಜಿಸಿದ್ದ ಮುತ್ತು ಕೊಡುವ ಸ್ಪರ್ಧೆ (Kissing competition) ವಿಡಿಯೊ ವೈರಲ್ ಆಗಿದೆ. ಸ್ಪರ್ಧೆಯ ನಿಯಮದ ಪ್ರಕಾರ ಎಲ್ಲರ ಮುಂದೆ ಮುತ್ತು ಕೊಡಬೇಕು. ಕಾಲೇಜು ಸಮವಸ್ತ್ರದಲ್ಲೇ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಚುಂಬಿಸಿದ್ದು, ಅಕ್ಕಪಕ್ಕದಲ್ಲಿದ್ದ ಅವರ ಸ್ನೇಹಿತರು ಹುರಿದುಂಬಿಸಿದ್ದಾರೆ. ಈಗ ಮಂಗಳೂರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಮನೆಯೊಂದರಲ್ಲಿ ನಡೆಸಿರುವ ಈ ಮುತ್ತು ಕೊಡುವ ಸ್ಪರ್ಧೆ (Kissing competition) ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರಿನ ಬಾವಟಗುಡ್ಡೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಈ ಅವಾಂತರಕ್ಕೆ ಸಾಕ್ಷಿಯಾಗಿದ್ದಾರೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಮಂಗಳೂರು ಪೊಲೀಸರು ವಿಡಿಯೊದಲ್ಲಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ. ಅಲ್ಲದೆ, ಮುತ್ತು ಕೊಡುವ ಸ್ಪರ್ಧೆಯ ವೇಳೆ ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ. ವಿಡಿಯೊ ಚಿತ್ರೀಕರಣ ಮಾಡಿರುವ ಯುವಕನನ್ನು ಬಂಧನ ಮಾಡಲಾಗಿದೆ. ಮಂಗಳೂರು ಸಿಸಿಬಿ ತಂಡ ವಶಕ್ಕೆ ಪಡೆದಿದ್ದು, ಈ ಸಂಬಂಧ ಸುಮೋಟೋ ಕೇಸ್‌ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ | Viral Video | ಕ್ಲಾಸ್‌ ರೂಮ್‌ನಲ್ಲಿ ವಿದ್ಯಾರ್ಥಿಗಳ ರೋಮ್ಹಾನ್ಸ್: ಕಾಲೇಜಿಂದ ಡಿಬಾರ್‌

Exit mobile version