ಬೆಂಗಳೂರು: ರಾಜಧಾನಿಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಮತ್ತು ಗಾಳಿಪಟ ಹಾರಿಸುವ ಹುಚ್ಚು ಒಬ್ಬ ಬಾಲಕನ ಜೀವವನ್ನೇ ಬಲಿ (Kite tragedy) ಪಡೆದಿದೆ.
ಆರ್ ಟಿ ನಗರ ವ್ಯಾಪ್ತಿಯ ಚಾಮುಂಡಿ ನಗರದ ಚ್ಯೂಯಿಂಗ್ ಗಮ್ ಫ್ಯಾಕ್ಟರಿ ಬಳಿ ಅಬೂಬಕರ್ ಎಂಬ ೧೧ ವರ್ಷದ ಬಾಲಕ ಗಾಳಿಪಟ ಹಾರಿಸುವಾಗ ವಿದ್ಯುತ್ ತಂತಿ ತಗುಲಿ ಪ್ರಾಣ ಕಳೆದುಕೊಂಡಿದ್ದಾನೆ.
ಸೋಮವಾರ ಸಂಜೆ ಅಬೂಬಕರ್ ಗಾಳಿಪಟ ಹಾರಿಸುತ್ತಾ ಆಡುತ್ತಿದ್ದ ಆ ಸಂದರ್ಭದಲ್ಲಿ ಅದು ಹೈಟೆನ್ಶನ್ ವಿದ್ಯುತ್ ವಯರ್‌ಗೆ ತಾಗಿ ದುರಂತ ಸಂಭವಿಸಿದೆ. ಗಾಳಿಪಟ ವಿದ್ಯುತ್ ವಯರ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ ಅದನ್ನು ಬಿಡಿಸಿಕೊಳ್ಳಲು ಹೋದಾಗ ವಿದ್ಯುತ್ ಶಾಕ್ ಹೊಡೆಯಿತೇ ಅಥವಾ ದಾರದ ಮೂಲಕ ಶಾಖ ಹೊಡೆಯಿತೇ ಎನ್ನುವುದು ಸ್ಪಷ್ಟವಾಗಿಲ್ಲ.
ತೀವ್ರವಾಗಿ ಸುಟ್ಟ ಗಾಯಗಳಿಗೆ ಒಳಗಾದ ಬಾಲಕ ಅಬೂಬಕರ್‌ನನ್ನು ಅಂದೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಬಾಲಕ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ.
ಕೆಲವು ವಾರಗಳ ಹಿಂದೆ ಬೆಂಗಳೂರಿನಲ್ಲಿ ಇಬ್ಬರು ಬಾಲಕರು ಗಾಳಿಪಟ ಹಾರಿಸುವಾಗ ಶಾಕ್ ತಗುಲಿ ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ | ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ಬಾಲಕನ ಪ್ರಾಣ ತೆಗೆಯಿತು!