Site icon Vistara News

Kodagu News: ಕುಶಾಲನಗರದ ಜರ್ಸಿ ತಳಿ ಸಂವರ್ಧನಾ ಕೇಂದ್ರದ ಹುಲ್ಲುಗಾವಲಲ್ಲಿ ಭಾರೀ ಬೆಂಕಿ; ನಂದಿಸಲು ಹರಸಾಹಸ

Kodagu News

ಕೊಡಗು: ಜಿಲ್ಲೆಯ ಕುಶಾಲನಗರ (Kodagu News) ಸಮೀಪದ ಕೂಡಿಗೆ ಬಳಿಯ ಜರ್ಸಿ ತಳಿ ಸಂವರ್ಧನಾ ಕೇಂದ್ರದ ಹುಲ್ಲುಗಾವಲಲ್ಲಿ ಶನಿವಾರ ರಾತ್ರಿ ಭಾರೀ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಯಿತು. 10 ಎಕರೆಯಲ್ಲಿ ಬೆಳೆಸಿದ್ದ ಹುಲ್ಲು ಗಾವಲಿನಲ್ಲಿ ಬೆಂಕಿ ಕಾಣಿಸಿಕೊಂಡು, ಸಮೀಪದ ಕೂಡಿಗೆ ತೋಟಗಾರಿಕಾ ಇಲಾಖೆ ಜಾಗಕ್ಕೂ ಬೆಂಕಿ ವ್ಯಾಪಿಸಿತ್ತು.

ಕೂಡಿಗೆಯ ಸೈನಿಕ ಶಾಲೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಹುಲ್ಲು ಒಣಗಿದ್ದ ಹಿನ್ನೆಲೆಯಲ್ಲಿ ಕ್ಷಣ ಕ್ಷಣಕ್ಕೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಿತ್ತು. ಹೀಗಾಗಿ ಕುಶಾಲನಗರದ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ ಮಡಿಕೇರಿ, ಸೋಮವಾರಪೇಟೆಯಿಂದಲೂ ಅಗ್ನಿಶಾಮಕ ವಾಹನ ದೌಡಾಯಿಸಿವೆ.

ಇದನ್ನೂ ಓದಿ | Murder Case: ಜಯನಗರದಲ್ಲಿ ಪ್ರಿಯತಮೆಯನ್ನೇ ಇರಿದು ಕೊಂದ ಪಾಗಲ್‌ ಪ್ರೇಮಿ!

ಗೋಣಿಕೊಪ್ಪಲುವಿನಲ್ಲಿ ಪೇಂಟ್ ಅಂಗಡಿಗೆ ಬೆಂಕಿ

ಕೊಡಗು: ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲುವಿನಲ್ಲಿ ಫೈಂಟ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಬೈಪಾಸ್ ರಸ್ತೆಯಲ್ಲಿನ ನಂದಿ ಪೇಂಟ್ ಅಂಗಡಿಯಲ್ಲಿ ಬೆಂಕಿ ಅವಘಡ ನಡೆದಿದೆ. ಬೆಂಕಿ‌ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಟ್ಟಿತು.

ಉಡುಪಿಯಲ್ಲಿ ಪೊಲೀಸ್‌ ಕ್ವಾರ್ಟರ್ಸ್‌ನಲ್ಲಿ ಲೇಡಿ ಕಾನ್ಸ್‌ಟೇಬಲ್‌ ಸೂಸೈಡ್‌

ಉಡುಪಿ: ಉಡುಪಿಯಲ್ಲಿ (Udupi News) ಮಹಿಳಾ ಕಾನ್ಸ್‌ಟೇಬಲ್‌ (Lady Constable) ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಬಾಗಲಕೋಟೆ ಮೂಲದ ಜ್ಯೋತಿ ಮೃತ ದುರ್ದೈವಿ.

ಕಾಪು ಪೊಲೀಸ್‌ ಠಾಣೆಯಲ್ಲಿ (Kapu Police Station) ಜ್ಯೋತಿ ಕರ್ತವ್ಯ ನಿರ್ವಹಿಸುತಿದ್ದರು. ಕೆಲಸ ಮುಗಿಸಿ ಪೊಲೀಸ್‌ ಕ್ವಾರ್ಟರ್ಸ್‌ಗೆ ತೆರಳಿದ ಜ್ಯೋತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version