ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಕೊಡಗಿನಿಂದ ಗಜಪಯಣ ಶುರುವಾಗಿದೆ. ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಮೊದಲ ಹಂತದಲ್ಲಿ ಎರಡು ಆನೆಗಳನ್ನು ಸಂಪ್ರದಾಯದಂತೆ ಪೂಜೆ ಮಾಡಿ ಬೀಳ್ಕೊಡುಗೆ ಮಾಡಲಾಗಿದೆ.
ಕಾವೇರಿ ಹಾಗೂ ಧನಂಜಯ್ ಆನೆಗಳು ಲಾರಿ ಮೂಲಕ ವೀರನಹೊಸಳ್ಳಿಗೆ ಪಯಣ ಬೆಳಿಸಿವೆ. ಅರಣ್ಯಾಧಿಕಾರಿಗಳು, ಸಿಬ್ಬಂದಿ ಪೂಜೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ | ಈ ಬಾರಿ ಸಾಂಪ್ರದಾಯಿಕ, ಅದ್ಧೂರಿ ದಸರಾ; ಸಿಎಂ ಬಸವರಾಜ ಬೊಮ್ಮಾಯಿ