ಕೊಡಗು: ಕೊಡಗಿನ ಗೋಣಿಕೊಪ್ಪಲು ಪಟ್ಟಣದಲ್ಲಿ (Gonikoppa News) ಏಕಾಏಕಿ ಕಟ್ಟಡವೊಂದು ಕುಸಿದು (Building Collapse) ಬಿದ್ದಿದೆ. ಕಟ್ಟಡದೊಳಗೆ ಹಲವರು ಸಿಲಿಕಿರುವ ಶಂಕೆ ಇದೆ. ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿದ್ದ ಅಂಬೂರು ಬಿರಿಯಾನಿ ಸೆಂಟರ್ ಇದ್ದ ಕಟ್ಟಡ ಕುಸಿದು ಬಿದ್ದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ಕಟ್ಟಡದೊಳಗೆ ಸಿಲುಕಿಕೊಂಡಿರುವವರನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳದಲ್ಲಿ ನೆರೆದಿರುವ ನೂರಾರು ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಕಟ್ಟಡದಡಿಯಲ್ಲಿ ಸಿಲುಕಿದ್ದ ಐವರನ್ನು ರಕ್ಷಣೆ ಮಾಡಲಾಗಿದ್ದು, ಗಾಯಾಳುಗಳನ್ನು ಗೋಣಿಕೊಪ್ಪ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ಮುಂದುವರಿದಿದೆ. ಅಂಬೂರು ಬಿರಿಯಾನಿ ಸೆಂಟರ್‌ಗೆ ಮಧ್ಯಾಹ್ನ ಊಟಕ್ಕೆಂದು ಬಂದಿದ್ದಾಗ ಈ ದುರ್ಘಟನೆ ನಡೆದಿದೆ.
ಗೋಣಿಕೊಪ್ಪದ ಉತ್ತಯ, ತಿಮ್ಮಯ್ಯ ಇಬ್ಬರಿಗೆ ಸೇರಿದ ಕಟ್ಟಡ ಇದಾಗಿದ್ದು, ಶಿಥಿಲಾವಸ್ಥೆಯಲ್ಲಿದ್ದ ಹಳೆಯದಾದ ಕಟ್ಟಡ ಇದಾಗಿದೆ. ಗೋಣಿಕೊಪ್ಪ ಮೈಸೂರು ಮುಖ್ಯ ರಸ್ತೆ ಬಂದ್ ಮಾಡಿ ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ. ಮುಖ್ಯ ರಸ್ತೆ ಬಂದ್ ಆಗಿರುವುದರಿಂದ ಬೈ ಪಾಸ್ ರಸ್ತೆ ಮೂಲಕ ವಾಹನಗಳು ಸಂಚರಿಸಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ