ಮಡಿಕೇರಿ: ಕೊಡಗು ಜಿಲ್ಲೆ (Kodagu News) ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಚೆಟ್ಟಳ್ಳಿ ರಸ್ತೆಯಲ್ಲಿರುವ ಯಂಕನ ದೇವರಾಜು ಎಂಬುವವರ ಗದ್ದೆಯಲ್ಲಿ ಎರಡು ದಿನಗಳ ಹಿಂದೆ ನವಜಾತ ಶಿಶುವಿನ (Newly born Child) ಮೃತದೇಹ ಮಣ್ಣಿನೊಳಗೆ ಪತ್ತೆಯಾಗಿತ್ತು (Child Burried). ಈ ಶವವನ್ನು ಮಣ್ಣಿನಲ್ಲಿ ಹೂತು ಹಾಕಿದ್ದು ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಪೊಲೀಸರು ಈ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ಇದು ಅಕ್ರಮ ಸಂಬಂಧದಿಂದ ಹುಟ್ಟಿದ ಮಗು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಸುಂಟಿಕೊಪ್ಪ ಪೊಲೀಸರು ಆರೋಪಿಗಳಿಬ್ಬರನ್ನು ಪತ್ತೆಹಚ್ಚಿ ಬಂಧಿಸಿದ್ದು, ಬಂಧಿತರನ್ನು ಗದ್ದೆಹಳ್ಳ ಗಿರಿಯಪ್ಪ ಮನೆ ಗದ್ದೆಯಲ್ಲಿ ವಾಸವಾಗಿರುವ ಕುಮಾರ ಮತ್ತು ಆತನ ತಾಯಿ ಯಮುನಾ ಎಂದು ಗುರುತಿಸಲಾಗಿದೆ. ಇವರು ಆಗಷ್ಟೇ ಹುಟ್ಟಿದ ಮಗುವಿನ ಕತ್ತು ಹಿಸುಕಿ ಸಾಯಿಸಿ ನಂತರ ಹೂತು ಹಾಕಿರುವುದನ್ನು ಪೋಲೀಸರ ವಿಚಾರಣೆ ಸಂದರ್ಭ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ? ಯಾಕೆ ನಡೆಯತು ಮಗುವಿನ ಕೊಲೆ?
ವಿವಾಹಿತನಾಗಿರುವ ಕುಮಾರನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈತ ಚೆಟ್ಟಳ್ಳಿ ಸಮೀಪದ ಗ್ರಾಮವೊಂದರ ಮಹಿಳೆ ಒಬ್ಬಳ ಜತೆ ಅಕ್ರಮ ಸಂಬಂಧ ಇರಿಸಿದ್ದು ಇದರ ಫಲವಾಗಿ ಆಕೆ ತುಂಬು ಗರ್ಭಿಣಿಯಾಗಿದ್ದಳು.
ಫೆಬ್ರವರಿ 6ರಂದು ರಾತ್ರಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ ಕುಮಾರ ಮತ್ತು ಅವನ ತಾಯಿ ಯಮುನಾ ಮಗು ಹುಟ್ಟಿದ ತಕ್ಷಣ ಹೆತ್ತಾಕೆಯ ಎದೆ ಹಾಲನ್ನು ಕುಡಿಸಿ ಜೀವ ತುಂಬಬೇಕಾಗಿದ್ದವರು ಜೀವಂತವಿದ್ದ ನವಜಾತ ಶಿಸುವಿನ ಕತ್ತುಹಿಸುಕಿ ಅದರ ಜೀವ ಕಿತ್ತುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅತ್ಯಾಚಾರದ ಬಳಿಕ ಮಗಳ ಕೊಲೆ; ಈಗ ಆಕೆಯ ತಂದೆಯೂ ನೇಣಿಗೆ ಶರಣು
ಮರುದಿನ ಮುಂಜಾನೆ ಕುಮಾರ ಮತ್ತು ಯಮುನಾ ರಸ್ತೆ ಬದಿಯ ಗದ್ದೆಯಲ್ಲಿ ಗುಂಡಿ ತೋಡಿ ನವಜಾತ ಶಿಶುವನ್ನು ಹೂತಿದ್ದಾರೆ. ಸಂಜೆ ನವಜಾತ ಶಿಶುವಿನ ಮೃತ ದೇಹ ಪತ್ತೆಯಾದ ವಿಚಾರ ಹರಡಿದೆ. ಕುಮಾರ ಕೂಡ ಅದನ್ನು ನೋಡಲು ಬಂದಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಸುಂಟಿಕೊಪ್ಪ ಪೊಲೀಸರು ತನಿಖೆಯ ಜಾಡು ಹಿಡಿದು ಆರೋಪಿಗಳಾದ ಕುಮಾರ ಹಾಗೂ ಆತನ ತಾಯಿ ಯಮುನಾಳ ನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.