Site icon Vistara News

ಬೆಂಗಳೂರಿನಲ್ಲಿ ವೈದ್ಯೆ ಮತ್ತು ಮಗಳ ನಿಗೂಢ ಸಾವು, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Doctor and daughter suicide

ಬೆಂಗಳೂರು: ದಂತ ವೈದ್ಯೆ ಮತ್ತು ಪುತ್ರಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿರಾಜಪೇಟೆ ಮೂಲದ ದಂತ ವೈದ್ಯೆ ಡಾ. ಶೈಮಾ(29) ಹಾಗೂ ಪುತ್ರಿ ಆರಾಧನಾ (10) ಮೃತ ದುರ್ದೈವಿಗಳು.

ವೈದ್ಯ ವೃತ್ತಿ ವೇಳೆಯಲ್ಲಿ ಕೋಲಾರ ಮೂಲದ ವೈದ್ಯ ನಾರಾಯಣ್‌ ಎಂಬವರನ್ನು ಪ್ರೀತಿಸಿದ್ದರು. ಈ ವಿಚಾರ ತಿಳಿದ ಸಂದರ್ಭದಲ್ಲೆ ತಾಯಿ ಮೃತಪಟ್ಟಿದ್ದರು. ನಂತರ ಕುಟುಂಬದವರನ್ನು ಒಪ್ಪಿಸಿ 10 ವರ್ಷ ಹಿಂದೆ ವಿವಾಹವಾಗಿದ್ದರು.

ಬನಶಂಕರಿ ಠಾಣಾ ವ್ಯಾಪ್ತಿಯ ಮನೆಯಲ್ಲಿ ಶನಿವಾರ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿತ್ತು. ಮಗುವಿಗೆ ನೇಣು ಬಿಗಿದು ನಂತರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆಸ್ಟ್ರೇಲಿಯಾದಲ್ಲಿದ್ದ ಸಹೋದರ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದಾರೆ.

ಈ ವೇಳೆ, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾವು ಸಂಭವಿಸಿದ ವೇಳೆಯಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಪತಿ ನಾರಾಯಣ್‌ ತಮ್ಮದೇ ಕ್ಲಿನಿಕ್‌ಗೆ ಹೋಗಿದ್ದರು. ಈ ಕುರಿತು ಹೆಚ್ಚಿನ ತನಿಖೆ ನಡೆಸಿ ಸತ್ಯಾಂಶ ಹೊರಗೆಡವುವಂತೆ ಕೋರಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ | ವರದಕ್ಷಿಣೆಗೆ, ಗಂಡು ಮಗು ಹೆರಲು ಚಿತ್ರಹಿಂಸೆ: ಅಮೆರಿಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮನದೀಪ್‌ ಕೌರ್‌ ಹಾರರ್‌

Exit mobile version