Site icon Vistara News

Lokayukta Raid : 50 ಸಾವಿರ ರೂ. ಲಂಚ ಕೇಳಿದ್ದ ಸಬ್‌ ರಿಜಿಸ್ಟ್ರಾರ್‌ ಲೋಕಾಯುಕ್ತ ದಾಳಿ ವೇಳೆ ಎಸ್ಕೇಪ್!‌

Lokayukta Raid Madikeri

ಕೊಡಗು: ಅಧಿಕಾರಿಗಳಿಗೆ ಕೈ ತುಂಬಾ ಸಂಬಳ ಬಂದರೂ ಲಂಚದ ಮೇಲೆ ಆಸೆ ನಿಂತಿಲ್ಲ. ಅದರಲ್ಲೂ ಸರ್ಕಾರಗಳು ಪಾರದರ್ಶಕ ಆನ್‌ಲೈನ್‌ ಸಿಸ್ಟಮ್‌, ಲಂಚರಹಿತ ವ್ಯವಸ್ಥೆ ಎಂದೆಲ್ಲ ಹೇಳುತ್ತಿದ್ದರೂ ಖದೀಮ ಅಧಿಕಾರಿಗಳು ರಂಗೋಲಿ ಕೆಳಗೆ ತೂರುತ್ತಲೇ ಇದ್ದಾರೆ. ಇಂಥವರನ್ನು ಹಿಡಿದು ಹಾಕುವ ಕೆಲಸಗಳು ಆಗಾಗ ನಡೆಯುತ್ತವೆ. ಕೊಡಗಿನಲ್ಲಿ (Kodagu News) ಲಂಚವನ್ನೇ ಹಾಸಿ ಹೊದೆಯುತ್ತಿರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ (Madikeri Sub Registrar Office) ಬುಧವಾರ ಲೋಕಾಯುಕ್ತ ದಾಳಿ (Lokayukta Raid) ನಡೆಯಿತು. ಈ ವೇಳೆ ಸಬ್‌ ರಿಜಿಸ್ಟ್ರಾರ್‌ ಸೌಮ್ಯಲತಾ ಎಸ್ಕೇಪ್‌ (Sub Registrar Soumyalatha Escape) ಆಗಿದ್ದರೆ, ಬ್ರೋಕರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಮಡಿಕೇರಿಯ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ರಿಜಿಸ್ಟ್ರಾರ್‌ ಆಗಿರುವ ಸೌಮ್ಯಲತಾ ಅವರು ಪೌತಿ ಖಾತೆ ರಿಜಿಸ್ಟ್ರೇಷನ್‌ಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಕೋರಂಗಾಲ ಗ್ರಾಮದ ನಂಗಾರು ಕುಮಾರ್ ಅವರು ಪೌತಿ ಖಾತೆ ನೋಂದಣಿ ಮಾಡಿಸಲು 50,000 ರೂ. ಕೇಳಿದ್ದರು.

ಕಳೆದ ಎರಡು ತಿಂಗಳುಗಳಿಂದ ರಿಜಿಸ್ಟ್ರೇಷನ್‌ ಮಾಡಲು ಸತಾಯಿಸುತ್ತಿದ್ದ ಸೌಮ್ಯಲತಾ ಅವರು ಕೊನೆಗೆ ಬ್ರೋಕರ್‌ ಮೂಲಕ ಹಣ ಕೇಳಿದ್ದರು. ಅದರಂತೆ ಹಣ ಕೊಡಲು ಕುಮಾರ್‌ ಒಪ್ಪಿದ್ದರು. ಬುಧವಾರ ಹಣ ಕೊಡಲು ದಿನ ನಿಗದಿಯಾಗಿತ್ತು.

ಇದರ ನಡುವೆ ‌ ಲೋಕಾಯುಕ್ತ ಪೊಲೀಸರಿಗೆ ಈ ರೀತಿಯ ನಿರ್ದಿಷ್ಟ ಹಣ ನೀಡುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರು ನಂಗಾರು ಕುಮಾರ್‌ ಅವರು ಹಣ ಕೊಡಲು ಸಿದ್ಧವಾಗುವ ಹೊತ್ತಿಗೆ ಎಂಟ್ರಿ ಕೊಟ್ಟರು. ಕುಮಾರ್‌ ಅವರು ಬ್ರೋಕರ್‌ ಹರಿದತ್ತ ಅವರಿಗೆ ಹಣ ನೀಡುತ್ತಿದ್ದಂತೆಯೇ ಹಿಡಿದುಕೊಂಡರು.

ಈ ನಡುವೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ರಿಜಿಸ್ಟ್ರಾರ್‌ ಸೌಮ್ಯಲತಾ ಅವರನ್ನು ವಿಚಾರಿಸೋಣ ಎಂದು ಹೋದರೆ ಸೌಮ್ಯಲತಾ ಅವರು ಅದ್ಯಾವುದೋ ಮಾಯದಿಂದ ಆಫೀಸಿನಿಂದ ಪರಾರಿಯಾಗಿದ್ದರು.

ಲೋಕಾಯುಕ್ತ ಎಸ್ಪಿ ಸುಜಿತ್‌ ಅವರ ನಿರ್ದೇಶನದಂತೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಕೇಶ್ ಮತ್ತು ಇನ್ಸ್‌ಪೆಕ್ಟರ್‌ ರೂಪಶ್ರೀ ನೇತೃತ್ವದಲ್ಲಿ ನಡೆದ ದಾಳಿಐಲ್ಲಿ ಏಜೆಂಟ್ ಹರಿದತ್ತ ಸಿಕ್ಕಿಬಿದ್ದಿದ್ದಾನೆ. ಇದೀಗ ಸೌಮ್ಯಲತಾ ಅವರಿಗೂ ನೋಟಿಸ್‌ ನೀಡಲಾಗಿದ್ದು, ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ : Lokayukta Case: ಮೇಲಧಿಕಾರಿಯಿಂದ ಕಿರುಕುಳ ಆರೋಪ; ಲೋಕಾಯುಕ್ತ ಮೆಟ್ಟಿಲೇರಿದ ಕಿರಿಯ ಅಧಿಕಾರಿ

ಆರೋಪಿಯ ಬಿಡುಗಡೆಗೆ 5 ಲಕ್ಷ ಕೇಳಿದ್ದ CPI, PSI ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ

ಬೆಂಗಳೂರು: ಅವರಲ್ಲಿ ಒಬ್ಬರು ಸೀನಿಯರ್‌ ಆಫೀಸರ್‌, ಇನ್ನೊಬ್ಬರು ಅವರ ಜ್ಯೂನಿಯರ್‌. ಇವರಿಬ್ಬರು ಸೇರಿ ಒಂದು ಡೀಲ್‌ ಕುದುರಿಸಿದ್ದರು. ಆದರೆ, ಅದು ಸಕ್ಸಸ್‌ ಆಗುವ ಮೊದಲೇ ಇಬ್ಬರೂ ಲೋಕಾಯುಕ್ತ ಬಲೆಗೆ (Lokayukta Raid) ಬಿದ್ದಿದ್ದಾರೆ. ಇದು ಇಬ್ಬರು ಪೊಲೀಸರ ಲಂಚಾವತಾರದ (Corruption Case) ಕಥೆ.

ಅಂದರೆ ಲಂಚ ಸ್ವೀಕರಿಸುವಾಗಲೇ ಪೊಲೀಸ್ ಇನ್ಸ್‌ಪೆಕ್ಟರ್‌ (Police Inspector) ಹಾಗೂ ಸಬ್ ಇನ್ಸ್‌ಪೆಕ್ಟರ್‌ (Sub Inspector) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೆ ಆರ್ ಪುರಂ ಇನ್ಸ್‌ಪೆಕ್ಟರ್‌ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್‌ ರಮ್ಯ ಲೋಕಾಯುಕ್ತ ಬಲೆಗೆ ಬಿದ್ದವರು. ಇವರು ಒಂದು ಲಕ್ಷ ರೂ. ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಆಗಿದ್ದು ಏನೆಂದರೆ, ಕೆ ಆರ್ ಪುರಂ ಇನ್ಸ್‌ಪೆಕ್ಟರ್‌ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್‌ ರಮ್ಯ ಅವರು ವಂಚನೆ ಪ್ರಕರಣವೊಂದರಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆತನನ್ನು ತಮ್ಮ ವಶದಿಂದ ಬಿಡಲು ಐದು ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರು. ಇದರಲ್ಲಿ ಆಗಲೇ ಐವತ್ತು ಸಾವಿರ ರೂ. ಮೊದಲು ಪಡೆದುಕೊಂಡಿದ್ದರು. ಎರಡನೇ ಕಂತಾಗಿ ಒಂದು ಲಕ್ಷ ರೂ.ಗೆ ಬೇಡಿಕೆ ಮಂಡಿಸಿದ್ದರು.

ಈ ನಡುವೆ, ವಂಚನೆ ಆರೋಪಿಯ ಕಡೆಯವರು ಎರಡನೇ ಕಂತು ಕೊಡುವ ಮುನ್ನ ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದರು. ಇತ್ತ ಆರೋಪಿಯ ಪಾರ್ಟಿಯವರು ಹಣದೊಂದಿಗೆ ಬಂದರೆ ಲೋಕಾಯುಕ್ತ ಪೊಲೀಸರು ಅವರನ್ನು ಹಿಡಿಯಲು ಸಿದ್ಧರಾಗಿ ಬಂದಿದ್ದರು. ಹಾಗೆ ಆರೋಪಿ ಪಾರ್ಟಿ ಕಡೆಯಿಂದ ಒಂದು ಲಕ್ಷ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದರು.

Exit mobile version