ಕೊಡಗು: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ (Mangalore Blast) ಮಹತ್ವದ ಬೆಳವಣಿಗೆಯಾಗಿದೆ. ಜಿಲ್ಲೆಯ ಹೋಮ್ ಸ್ಟೇ ಮೇಲೆ ಎನ್‌ಐಎ ಹಾಗೂ ಮಂಗಳೂರು ಪೊಲೀಸರು ಭಾನುವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದ ಓಟೆಕಾಡ್ ಹೋಮ್ ಸ್ಟೇಯಲ್ಲಿ ಎನ್‌ಐಎ ತಂಡ ಹಾಗೂ ಪೊಲೀಸರು ಪರಿಶೀಲಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟ 11 ಆರೋಪಿಗಳು ಹೋಮ್ ಸ್ಟೇಯಲ್ಲಿ ತಂಗಿದ್ದ ಶಂಕೆ ಹಿನ್ನೆಲೆಯಲ್ಲಿ ಹೋಮ್ ಸ್ಟೇ ಮಾಲೀಕನ ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ | Murder Case | ಮುಸ್ಲಿಂ ಮಹಿಳೆಯಿಂದ ಅಜ್ಜಿಯ ಭೀಕರ ಕೊಲೆ; ಕಬೋರ್ಡ್‌ನಲ್ಲಿ ಶವ ಬಚ್ಚಿಟ್ಟು ಪರಾರಿ