Site icon Vistara News

Obscene Act : ಮೆಡಿಕಲ್‌ ಕಾಲೇಜು ಲೇಡಿಸ್‌ ಹಾಸ್ಟೆಲ್‌ ಮುಂದೆ ಪೋಲಿ ಹುಡುಗರ ಪುಂಡಾಟ, ಹಸ್ತಮೈಥುನ

Boys at Medical College hostel

ಮಡಿಕೇರಿ: ಮಡಿಕೇರಿ ಹೊರವಲಯದಲ್ಲಿರುವ ಮೆಡಿಕಲ್ ಕಾಲೇಜು ಆವರಣದಲ್ಲಿ (Madikeri Medical College) ಪೋಲಿ ಯುವಕರ ಪುಂಡಾಟ (obscene act) ಮಿತಿಮೀರಿದೆ. ಇಲ್ಲಿನ ಲೇಡಿಸ್‌ ಹಾಸ್ಟೆಲ್‌ ಆವರಣಕ್ಕೆ (Ladies Hostel Campus) ರಾತ್ರಿಯ ಹೊತ್ತು ಕೆಲವು ಪುಂಡ ಯುವಕರು ಆಗಮಿಸಿ ಪುಂಡಾಟಿಕೆ ನಡೆಸುವುದಲ್ಲದೆ, ಅಲ್ಲೇ ಮುಕ್ತವಾಗಿ ಹಸ್ತಮೈಥುನ (Open Masturbation) ನಡೆಸುವಷ್ಟು ದಾರ್ಷ್ಟ್ಯ ಮೆರೆಯುತ್ತಿದ್ದಾರೆ. ಈ ಅಸಭ್ಯ ವರ್ತನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ (Obscene acts recorded in CC Camera) ಸೆರೆಯಾಗಿವೆ. ಆದರೆ, ಯಾರೂ ಹೆಣ್ಮಕ್ಕಳ ರಕ್ಷಣೆಗೆ (Girl students under threat) ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಪಾದಿಸಲಾಗಿದೆ. ಸೋಮವಾರ ಇಲ್ಲಿನ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ (Students Protest) ನಡೆಸಿದರು.

ಮಡಿಕೇರಿ ಕಾಲೇಜಿನ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ನಗರದ ಹೊರವಲಯದಲ್ಲಿರುವ ಮೆಡಿಕಲ್ ಕಾಲೇಜಿಗೆ ಯಾವುದೇ ಗೇಟ್ ವ್ಯವಸ್ಥೆ ಇಲ್ಲ. ವಿದ್ಯಾರ್ಥಿನಿಯರ ವಸತಿ ನಿಲಯವಿದ್ದರೂ ಯಾವುದೇ ಭದ್ರತೆ ಒದಗಿಸಿಲ್ಲ. ಕತ್ತಲಾಗುತ್ತಿದ್ದಂತೆ ಬೈಕ್, ಆಟೋಗಳಲ್ಲಿ ಆಗಮಿಸುವ ಯುವಕರು, ವಿಕೃತವಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ನಡುರಾತ್ರಿ ಕ್ಯಾಂಪಸ್‌ ಪ್ರವೇಶಿಸುವ ಧೂರ್ತರು: ಏನೇನು ಆರೋಪ?

  1. ಮೆಡಿಕಲ್ ಕಾಲೇಜಿನ ಆವರಣದಲ್ಲಿ ವಿಕೃತ ಕಾಮಿಗಳ ಕಾಟ ಮಿತಿಮೀರಿದ್ದು, ಹಾಸ್ಟೆಲ್ ಎದುರು ಕಾಮುಕರು ಅಶ್ಲೀಲ ವರ್ತನೆ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪ ಮಾಡಿದರು.
  2. ನಡುರಾತ್ರಿ ಕ್ಯಾಂಪಸ್ ಪ್ರವೇಶಿಸುವ ಕಾಮುಕರು, ಹುಡುಗಿಯರ ಎದುರು ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.
  3. ವಿದ್ಯಾರ್ಥಿಯರ ಹಾಸ್ಟೆಲ್ ಸುತ್ತ ಅನಾಮಿಕ ವ್ಯಕ್ತಿಗಳ ಸುಳಿದಾಟದಿಂದ ವಿದ್ಯಾರ್ಥಿನಿಯರು ಆತಂಕದಲ್ಲಿ ದಿನದೂಡುವಂತಾಗಿದೆ.
  4. ಇಷ್ಟೇ ಅಲ್ಲದೆ ಮೆಡಿಕಲ್ ಕಾಲೇಜಿನಿಂದ ಹೊರಗೆ ಬರುವಾಗ ಇರುವ ನಿರ್ಜನ ರಸ್ತೆಯಲ್ಲೂ ಕಿರಿಕಿರಿ ಉಂಟಾಗುತ್ತಿದೆ.
  5. ಕೆಲ ವಿದ್ಯಾರ್ಥಿಗಳನ್ನು ಪುಂಡರು ತಡೆದು ತೊಂದರೆ ನೀಡುತ್ತಿರುವುದಾಗಿಯೂ ವಿದ್ಯಾರ್ಥಿಗಳು ಆರೋಪಿಸಿದರು.
ಕಾಲೇಜು ಆವರಣದಲ್ಲಿ ರಾತ್ರಿ ಹೊತ್ತು ಯುವಕರ ಪುಂಡಾಟ ಮತ್ತು ಹಸ್ತಮೈಥುನಕ್ಕೆ ಸಿದ್ಧತೆ.

ಬೆನ್ನಟ್ಟಿದ ವಿದ್ಯಾರ್ಥಿಗಳಿಗೇ ಧಮ್ಕಿ ಹಾಕಿದರು!

ಕಾಲೇಜು ಕ್ಯಾಂಪಸ್ ಒಳಗೆ ಯಾರು ಬೇಕಾದರೂ ಬಂದು ಹೋಗಬಹುದು ಎಂಬ ಪರಿಸ್ಥಿತಿ ಇರುವುದೇ ಇದಕ್ಕೆ ಕಾರಣ ಎನ್ನುವುದು ವಿದ್ಯಾರ್ಥಿಗಳ ದೂರು. ಕಳೆದ ಮೂರು ದಿನಗಳ ಹಿಂದೆ ವಿದ್ಯಾರ್ಥಿನಿಯರ ಹಾಸ್ಟೆಲ್ ಮುಂದೆ ಕಾಮುಕನೊಬ್ಬ ಅಶ್ಲೀಲವಾಗಿ ನಡೆದುಕೊಂಡಿದ್ದ.

ವಿಷಯ ತಿಳಿದ ಕೆಲವು ವಿದ್ಯಾರ್ಥಿಗಳು ಅವನನ್ನು ಬೆನ್ನಟ್ಟಿದ್ದರು. ಆದರೆ ಆತ ಆವತ್ತು ತಪ್ಪಿಸಿಕೊಂಡಿದ್ದ. ಈ ನಡುವೆ ಬೆನ್ನಟ್ಟಿಕೊಂಡು ಹೋದ ವಿದ್ಯಾರ್ಥಿಗಳನ್ನೇ ಅಲ್ಲಿನ ಕೆಲವು ಯುವಕರು ಬೆದರಿಸಿದ್ದಾರೆ.ʻʻ ನಿಮ್ಮ ಕಾಲೇಜಿನ ವಿದ್ಯಾರ್ಥಿನಿಯರನ್ನು ರೇಪ್ ಮಾಡುತ್ತೇವೆ. ಏನು ಮಾಡುತ್ತೀರಿ, ಮಾಡಿಕೊಳ್ಳಿʼʼ ಎಂದು ಬೆದರಿಕೆ ಹಾಕಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದರು.

Madikeri Medical college

ರಕ್ಷಣೆ ನೀಡದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ವಿದ್ಯಾರ್ಥಿನಿಯರು ತಾವು ಎದುರಿಸುತ್ತಿರುವ ಆತಂಕದ ಸ್ಥಿತಿ, ಮಧ್ಯರಾತ್ರಿ ಎಂಟ್ರಿ ಕೊಡುವ ಪುಂಡರು, ಅದಕ್ಕೆ ಸಂಬಂಧಿಸಿ ಸಿಸಿ ಟಿವಿ ಕ್ಯಾಮೆರಾ ಫೂಟೇಜ್‌ಗಳು ಇದ್ದರೂ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಅಸಮಾಧಾನ.

ಇದೇ ಕಾರಣಕ್ಕಾಗಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸೋಮವಾರ ಬೃಹತ್‌ ಪ್ರತಿಭಟನೆ ನಡೆದಿದರು. ಗೇಟಿನಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ಅನಧಿಕೃತ ವ್ಯಕ್ತಿಗಳು ಕಾಲೇಜು ಆವರಣವನ್ನು ಪ್ರವೇಶಿಸುವುದನ್ನು ತಡೆಯಬೇಕೆಂದು ಒತ್ತಾಯಿಸಿದರು.

ಮೆಡಿಕಲ್ ಕಾಲೇಜು ಶುರುವಾಗಿ ಇಲ್ಲಿಯವರೆಗೆ ಸರಿಯಾದ ಒಂದು ಗೇಟ್ ವ್ಯವಸ್ಥೆಯಾಗಲಿ, ಸ್ಟ್ರೀಟ್ ಲೈಟ್ ಆಗಲಿ ಮಾಡಲಾಗಿಲ್ಲ. ಇಲ್ಲಿರುವ ಹೆಣ್ಮಕ್ಕಳು ಸಂಜೆಗತ್ತಲಾದ ಬಳಿಕ ಹೊರಗೆ ಬರುವುದೇ ಕಷ್ಟ ಎಂಬ ಸ್ಥಿತಿ ಇದೆ. ಇಲ್ಲಿ ಬೇಕಾದ ಜಾಗದಲ್ಲಿ ಸೂಕ್ತ ಸಿಸಿ ಕ್ಯಾಮೆರಾಗಳು ಕೂಡಾ ಇಲ್ಲ. ಇರುವ ಕ್ಯಾಮೆರಾಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಪಾದಿಸಿದ ವಿದ್ಯಾರ್ಥಿಗಳು ನಮಗೆ ನ್ಯಾಯ ಸಿಗುವ ತನಕ ಪ್ರತಿಭಟನೆ ನಿಲ್ಲಿಸೋದಿಲ್ಲ ಅಂತ ಪಟ್ಟು ಹಿಡಿದರು. ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Girls Hostel : ರಾತ್ರಿ ಹೊತ್ತು ಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿದ ಅನಾಮಿಕ ಯುವಕ; ಪಕ್ಕದ ಮನೆಗಳಿಗೆ ಓಡಿಹೋದ ಮಕ್ಕಳು

ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಆಡಳಿತ ಮಂಡಳಿ

ಗೇಟ್‌, ಬೆಳಕು, ಸಿಸಿ ಕ್ಯಾಮೆರಾ ಸ್ಥಾಪನೆ ಭರವಸೆ

ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರತಿಕ್ರಿಯಿಸಿ ಸಮಾಧಾನ ಹೇಳಿದ ಕಾಲೇಜ್ ಡೀನ್ ಕಾರ್ಯಪ್ಪ ಅವರು ತಕ್ಷಣವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ʻʻಈ ವಿಚಾರ ನಮ್ಮ ಗಮನಕ್ಕೂ ಬಂದಿದೆ. ತಕ್ಷಣವೇ ಉತ್ತಮ ರೀತಿಯ ಸಿಸಿ ಕ್ಯಾಮೆರಾ, ಲೈಟಿಂಗ್ ವ್ಯವಸ್ಥೆ ಮಾಡಲಾಗುವುದು ಹಾಗೂ ತಾತ್ಕಾಲಿಕವಾಗಿ ಗೇಟ್ ವ್ಯವಸ್ಥೆ ಮಾಡಲಾಗುವುದುʼʼ ಎಂದು ಅವರು ತಿಳಿಸಿದರು.

ಎರಡು ಬದಿಯ ರಸ್ತೆಯಲ್ಲಿ ಒಂದು ಬದಿಯ ಗೇಟ್ ಮುಚ್ಚಿ ಒಂದು ಬದಿಯಲ್ಲಿ ಸೆಕ್ಯುರಿಟಿ ಸಿಬ್ಬಂದಿ ನೇಮಿಸಲಾಗುವುದು. 5 ತಿಂಗಳ ಒಳಗಾಗಿ ಸೂಕ್ತರೀತಿಯಲ್ಲಿ ಗೇಟ್ ನಿರ್ಮಿಸಲಾಗುವುದೆಂದು ಕಾಲೇಜ್ ಡೀನ್ ತಿಳಿಸಿದರು. ಇವರ ಭರವಸೆಗೆ ಒಪ್ಪಿದ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು. ಘಟನಾ ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಜಗದೀಶ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಲೇಜು ಆವರಣ ಪ್ರವೇಶಿಸಿದ ಪುಂಡರ ಮೇಲೆ ಕಣ್ಣಿಡಲಾಗುವುದು, ಸಿಸಿ ಟಿವಿ ಕ್ಯಾಮೆರಾ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

Exit mobile version