ಮಡಿಕೇರಿ: ಇಲ್ಲಿನ ಮೆಡಿಕಲ್ ಕಾಲೇಜು ಆವರಣದಲ್ಲಿ (Madikeri Medical College) ಪುಂಡಾಟದ ವರ್ತನೆ ತೋರಿದ್ದಲ್ಲದೆ, ಅಶ್ಲೀಲ ಪ್ರದರ್ಶನ ಮಾಡಿದ್ದ ಆರೋಪಿಗಳಲ್ಲಿ ಒಬ್ಬನನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ಮಧ್ಯರಾತ್ರಿಯ ಹೊತ್ತು ಇಲ್ಲಿನ ಲೇಡಿಸ್ ಹಾಸ್ಟೆಲ್ ಆವರಣಕ್ಕೆ (Ladies Hostel Campus) ಕೆಲವು ಪುಂಡ ಯುವಕರು ಆಗಮಿಸಿ ಪುಂಡಾಟಿಕೆ ನಡೆಸುವುದಲ್ಲದೆ, ಅಲ್ಲೇ ಮುಕ್ತವಾಗಿ ಹಸ್ತಮೈಥುನ (Open Masturbation) ನಡೆಸುತ್ತಿರುವ ಬಗ್ಗೆ ಈಗಾಗಲೇ ಹಲವು ಬಾರಿ ದೂರು ನೀಡಲಾಗಿತ್ತು. ಆದರೆ, ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದಾಗ ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ (Students protest) ನಡೆಸಿದ್ದರು. ದುಷ್ಟ ಕೂಟದ ಅಸಭ್ಯ ವರ್ತನೆಗಳು ಸಿಸಿಟಿವಿ ಕ್ಯಾಮೆರಾದಲ್ಲಿ (Obscene acts recorded in CC Camera) ಸೆರೆಯಾದರೂ ಕ್ರಮ ಕೈಗೊಳ್ಳದ ವಿರುದ್ಧ ಸಿಟ್ಟಿಗೆದ್ದಿದ್ದರು. ಇದರ ಬೆನ್ನಿಗೇ ಒಬ್ಬ ಆರೋಪಿಯ ಅರೆಸ್ಟ್ ಆಗಿದೆ.
ಸೋಮವಾರ ನಡೆದ ಪ್ರತಿಭಟನೆ ವೇಳೆ ಮಡಿಕೇರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು. ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಎದುರಾಗಿರುವ ಅಸುರಕ್ಷಿತ ಭಾವ (Insecurity feeling)ವನ್ನು ದೂರ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ತಕ್ಷಣದಿಂದಲೇ ಕಾರ್ಯಪ್ರವೃತ್ತರಾದ ಮಡಿಕೇರಿ ಪೊಲೀಸರು ಕತ್ತಲೆಕಾಡು ನಿವಾಸಿ ಸಿಜಿಲ್(22) ಎಂಬಾತನನ್ನು ಬಂಧಿಸಿದ್ದಾರೆ.
ಕಾಲೇಜು ಮತ್ತು ಹಾಸ್ಟೆಲ್ ಆವರಣದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಪುಂಡರ ವರ್ತನೆಯ ದೃಶ್ಯಾವಳಿಗಳು ಸೆರೆಯಾಗಿರುವುದನ್ನು ವಿದ್ಯಾರ್ಥಿಗಳು ಉಲ್ಲೇಖಿಸಿದ್ದರು. ಪೊಲೀಸರು ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಸಿಜಿಲ್ ಬೈಕ್‌ನಲ್ಲಿ ಬಂದು ಹುಡುಗಿಯರಿಗೆ ತೊಂದರೆ ಮಾಡುತ್ತಿದ್ದುದಲ್ಲದೆ, ಮಧ್ಯರಾತ್ರಿಯ ಹೊತ್ತು ಹಾಸ್ಟೆಲ್ ಎದುರು ಬಂದು ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ಪ್ರಸಕ್ತ ಸಿಜಿಲ್‌ನನ್ನು ಬಂಧಿಸಲಾಗಿದೆ. ಆದರೆ, ಈ ದುಷ್ಕೃತ್ಯದಲ್ಲಿ ಇನ್ನೂ ಹಲವು ಯುವಕರು ಭಾಗಿಯಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Obscene Act : ಮೆಡಿಕಲ್ ಕಾಲೇಜು ಲೇಡಿಸ್ ಹಾಸ್ಟೆಲ್ ಮುಂದೆ ಪೋಲಿ ಹುಡುಗರ ಪುಂಡಾಟ, ಹಸ್ತಮೈಥುನ
ನಡುರಾತ್ರಿ ಕ್ಯಾಂಪಸ್ ಪ್ರವೇಶಿಸುವ ಧೂರ್ತರು: ಏನೇನು ಆರೋಪ?
- ಮೆಡಿಕಲ್ ಕಾಲೇಜಿನ ಆವರಣದಲ್ಲಿ ವಿಕೃತ ಕಾಮಿಗಳ ಕಾಟ ಮಿತಿಮೀರಿದ್ದು, ಹಾಸ್ಟೆಲ್ ಎದುರು ಕಾಮುಕರು ಅಶ್ಲೀಲ ವರ್ತನೆ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪ ಮಾಡಿದರು.
- ನಡುರಾತ್ರಿ ಕ್ಯಾಂಪಸ್ ಪ್ರವೇಶಿಸುವ ಕಾಮುಕರು, ಹುಡುಗಿಯರ ಎದುರು ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.
- ವಿದ್ಯಾರ್ಥಿಯರ ಹಾಸ್ಟೆಲ್ ಸುತ್ತ ಅನಾಮಿಕ ವ್ಯಕ್ತಿಗಳ ಸುಳಿದಾಟದಿಂದ ವಿದ್ಯಾರ್ಥಿನಿಯರು ಆತಂಕದಲ್ಲಿ ದಿನದೂಡುವಂತಾಗಿದೆ.
- ಇಷ್ಟೇ ಅಲ್ಲದೆ ಮೆಡಿಕಲ್ ಕಾಲೇಜಿನಿಂದ ಹೊರಗೆ ಬರುವಾಗ ಇರುವ ನಿರ್ಜನ ರಸ್ತೆಯಲ್ಲೂ ಕಿರಿಕಿರಿ ಉಂಟಾಗುತ್ತಿದೆ.
- ಕೆಲ ವಿದ್ಯಾರ್ಥಿಗಳನ್ನು ಪುಂಡರು ತಡೆದು ತೊಂದರೆ ನೀಡುತ್ತಿರುವುದಾಗಿಯೂ ವಿದ್ಯಾರ್ಥಿಗಳು ಆರೋಪಿಸಿದ್ದರು.
ಕಾಲೇಜು ಆಡಳಿತ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಒಬ್ಬನ ಬಂಧನ ಆಗಿದೆ.