Site icon Vistara News

Shot dead: ಕೊಡಗಿನಲ್ಲಿ ಗುಂಡೇಟಿಗೆ ವ್ಯಕ್ತಿ ಬಲಿ, ಹಳೆ ದ್ವೇಷದ ಕೃತ್ಯ

shot dead

ಕೊಡಗು: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಗುಂಡೇಟಿನಿಂದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ಬೈಮನ ನಾಣಯ್ಯ ಅವರ ಪುತ್ರ ಬಿ.ಎಂ. ಮದು (44) ಮೃತ ದುರ್ದೈವಿ. ನಿನ್ನೆ ತಡ ರಾತ್ರಿ ಹನ್ನೆರಡು ಗಂಟೆಗೆ ಈ ದುರ್ಘಟನೆ ನಡೆದಿದೆ. ತೋರ ಗ್ರಾಮದ ಪಡಚಿಕಾಡು ಕಾಲೋನಿಯಲ್ಲಿ ಈ ಕೃತ್ಯ ನಡೆದಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಿರಣ, ಸುಧಿ, ಸುಗುಣ ಎಂಬವರು ಈ ಅಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ಅಕ್ರಮ ಮದ್ಯ ಸಂಗ್ರಹ, ಮಾರಾಟ ಆರೋಪ

ಶಿವಮೊಗ್ಗ: ಅಕ್ರಮ ಮದ್ಯ ಸಂಗ್ರಹಿಸಿಟ್ಟಿರುವ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಒಬ್ಬನನ್ನು ಬಂಧಿಸಿದ್ದು, 9 ಸಾವಿರ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದಲ್ಲಿ ಪ್ರದೀಪ್ ಎಂಬವರ ಮನೆ ಮೇಲೆ ದಾಳಿ ಮಾಡಿದ ಅಬಕಾರಿ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 9 ಸಾವಿರ ಲೀ. ಮದ್ಯ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದು ಬಯಲಾಗಿದ್ದು, ಆರೋಪಿ ವಿರುದ್ಧ NDPS ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Exit mobile version