Site icon Vistara News

Physical Abuse: ಕೊಡಗಿನಲ್ಲೊಂದು ಪೈಶಾಚಿಕ ಕೃತ್ಯ; 2 ವರ್ಷದ ಮಗುವಿನ ಮೇಲೆ ಕಾಮುಕನ ದೌರ್ಜನ್ಯ

Physical abuse on Child Mani Arrested

ಮಡಿಕೇರಿ: ಕೊಡಗಿನಲ್ಲೊಂದು (Kodagu News) ಮನುಕುಲ ಮೆಚ್ಚದ ಪೈಶಾಚಿಕ ಪಾತಕ ಕೃತ್ಯವೊಂದು ನಡೆದಿದೆ. ಇನ್ನೂ ಜಗತ್ತು ಅಂದರೆ ಏನು ಎಂದು ತಿಳಿಯದೆ ಪುಟಾಣಿ ಮಗುವಿನ ಮೇಲೆ ಕಾಮುಕನೊಬ್ಬ ದೌರ್ಜನ್ಯವನ್ನು (physical Abuse) ನಡೆಸಿದ್ದಾನೆ.

ಕೇವಲ ಎರಡು ವರ್ಷದ ಈ ಮಗುವಿನ (two year old Child) ಮೇಲೆ 45 ವರ್ಷದ ಕಾಮುಕನೊಬ್ಬ (45 year old Rapist) ಅತ್ಯಾಚಾರವೆಸಗಿದ್ದಾನೆ. ಕಾಮುಕನ ಪೈಶಾಚಿಕ ಕೃತ್ಯದಿಂದ ಅಸ್ವಸ್ಥಗೊಂಡಿರುವ ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ನಡೆದಿರುವ ಘಟನೆ ಇದಾಗಿದೆ. ಸಿದ್ದಾಪುರದಿಂದ ಸುಮಾರು 20 ಕಿ.ಮೀ ದೂರದ ಎಸ್ಟೇಟ್‌ನಲ್ಲಿ ಕೃತ್ಯ ನಡೆದಿದೆ. ಮಣಿ ಎಂಬ ಕಾರ್ಮಿಕ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಅದು ಜಾರ್ಖಂಡ್‌ ಮೂಲದ ಸಂಸಾರ. ಮಗು ಮನೆಯಲ್ಲಿ ಆಡುತ್ತಿತ್ತು. ಅಲ್ಲಿದ್ದ ಮಗುವಿನ ತಂದೆ ಬೇರೇನೋ ಕೆಲಸಕ್ಕೆ ಹೊರಗೆ ಹೋಗಿದ್ದರು. ಆಗ ಅಲ್ಲಿಗೆ ಲಗ್ಗೆ ಇಟ್ಟ ಈ ನರಾಧಮ ಮಗುವಿನ ಮೇಲೆ ರಕ್ಕಸನಂತೆ ಎರಗಿದ್ದಾನೆ. ಮಗು ಒಂದೇ ಸಮನೆ ಬೊಬ್ಬೆ ಹೊಡೆದಾಗ ತಂದೆ ಓಡಿ ಬಂದಿದ್ದಾರೆ. ಆಗ ಮಣಿ ನಡೆಸುತ್ತಿದ್ದ ದುಷ್ಟ ಕೃತ್ಯ ಬಯಲಾಗಿದೆ.

ಈ ಕಿರಾತಕ ಎಷ್ಟರ ಮಟ್ಟಿಗೆ ಕ್ರೌರ್ಯವನ್ನು ಮೆರೆದಿದ್ದಾನೆ ಎಂದರೆ ಮಗುವಿನ ಜನನಾಂಗದಲ್ಲಿ ರಕ್ತ ಬರುತ್ತಿತ್ತು. ಈ ದುಷ್ಟ ಮಗುವಿನ ಮಗುವನ್ನು ಪರಚಿದ್ದ, ಕಚ್ಚಿದ್ದ ಎಂದು ಹೇಳಲಾಗಿದೆ. ಮಹಿಳಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಆರೋಪಿ ಮಣಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ : Physical Abuse : ಮದ್ಯದ ನಶೆಯಲ್ಲಿ ಪತಿಗೆ ಥಳಿಸಿದ ಕಿರಾತಕರು; ಪತ್ನಿ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ

ಅತ್ಯಾಚಾರ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದ ದುಷ್ಟ; ಬಾಲಕಿಯ ರಕ್ಷಣೆ

ಗದಗ: ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗಲೇ ಕಾಮುಕನನ್ನು (Physical Abuse) ರೆಡ್ ಹ್ಯಾಂಡ್ ಆಗಿ ಹಿಡಿದು ಅಪ್ರಾಪ್ತೆಯನ್ನು ರಕ್ಷಣೆ ಮಾಡಿರುವ ಘಟನೆ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ (Gadag News) ಬಳಿ ನಡೆದಿದೆ. ಆಟೋ ಚಾಲಕ ಆಸೀಫ್ ದಾವಲ್ ಖಾನ್ ಎಂಬಾತನಿಂದ ಕೃತ್ಯ ನಡೆದಿದೆ.

ಆಸೀಫ್‌ ತನ್ನ ಆಟೋದಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸುವಾಗ ಬಾಲಕಿಯ ಕಿರಾಚಾಟ ಕೇಳಿದ ದಾರಿ ಹೋಕರು ಹಾಗೂ ರೈತರು ಸೇರಿ ಕೂಡಲೇ ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ.

ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದೊಂದು ಲವ್ ಜಿಹಾದ್ ಪ್ರಕರಣದ ಆರೋಪ ಕೇಳಿ ಬಂದಿದೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದುಪರ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ. ಪೊಲೀಸರು ಸ್ವಯಂ ದೂರು ದಾಖಲು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಬೆತ್ತಲೆ ವಿಡಿಯೊ ಮಾಡಿ, ಮತಾಂತರಕ್ಕೆ ಬ್ಲಾಕ್‌ಮೇಲ್‌

ಬಾಲಕಿಯನ್ನು ಬೆತ್ತಲೆ ಮಾಡುವ ಈ ದುಷ್ಟರು ಮೊಬೈಲ್‌ನಲ್ಲಿ ಆಕೆಯ ವಿಡಿಯೋ ಮಾಡಿಕೊಳ್ಳುತ್ತಾರೆ. ನಂತರ ಬ್ಲಾಕ್‌ಮೇಲ್ ಮೂಲಕ ಮತಾಂತರ ಆಗುವಂತೆ ಬೆದರಿಕೆ ಹಾಕುತ್ತಾರೆ. ಮತಾಂತರ ಆಗಲು ಒಪ್ಪದೇ ಇದ್ದರೆ ಬೆತ್ತಲೇ ವಿಡಿಯೊ ಲಿಂಕ್‌ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ಜಿಲ್ಲೆಯಲ್ಲಿ ಒಂದೇ ವಾರದಲ್ಲೇ ಮೂರು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿವೆ. ಆದರೆ ಪೊಲೀಸರು ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಹಿಂದು ಸಂಘಟನೆ ಮುಖಂಡರು ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version