Site icon Vistara News

ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ಖಂಡಿಸಿ‌ದ ಎಸ್‌ಡಿಪಿಐ

ಬಜರಂಗದಳ

ಕೊಡಗು: ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ವಿಶ್ವ ಹಿಂದು ಪರಿಷತ್‌, ಬಜರಂಗದಳ ವತಿಯಿಂದ ಬಂದೂಕು, ಕತ್ತಿಗಳ ಪ್ರದರ್ಶನ ಹಾಗೂ ತ್ರಿಶೂಲ ದೀಕ್ಷೆ ನೀಡಿದ್ದನ್ನು ಎಸ್‌ಡಿಪಿಐ ಖಂಡಿಸಿದೆ. ಸಂಘಟಕರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಈ ಹಿಂದೆ ಮಂಗಳೂರಿನಲ್ಲಿ ಭಜರಂಗದಳದ ವತಿಯಿಂದ ಬಹಿರಂಗವಾಗಿ ಶಸ್ತ್ರಾಸ್ತ್ರ ವಿತರಿಸುವ ಕಾರ್ಯಕ್ರಮಗಳು ನಡೆದಿದ್ದವು. ವಿಶ್ವ ಹಿಂದು ಪರಿಶತ್‌ ಭಜರಂಗದಳ ಇದೀಗ ಕೊಡಗಿನಲ್ಲಿಯೂ ಇಂತಹ ಕಾರ್ಯಕ್ರಮವನ್ನು ಆರಂಭಿಸಿದೆ.

ಕೊಡಗಿನ ಪೊನ್ನಂಪೇಟೆಯ ಸಾಯಿ ಶಂಕರ್ ಎಜುಕೇಶನ್ ಇನ್ಸ್ಟಿಟ್ಯೂಟ್‌ನಲ್ಲಿ ಮೇ 5ರಿಂದ 13ರವರೆಗೆ ಶೌರ್ಯ ಪ್ರಶಿಕ್ಷಣ ವರ್ಗ ಆಯೋಜನೆ ಮಾಡಲಾಗಿತ್ತು. ಕಾಯ್ರಕರ್ಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಬಂದೂಕು ತರಬೇತಿಯನ್ನು ನೀಡಲಾಗಿತ್ತು. ಪ್ರಶಿಕ್ಷಣ ವರ್ಗದ ಫೊಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನೂರಾರು ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ನೀಡಿ ತರಬೇತಿ ಕೊಡುತ್ತಿರುವ, ತ್ರಿಶೂಲ ನೀಡುತ್ತಿರುವ ಫೋಟೊಗಳನ್ನು ಭಜರಂಗದಳ ಕಾರ್ಯಕರ್ತ ಅರುಣ್‌ ತೇಜ್‌ ಎನ್ನುವವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ, ಮಾನ್ಯ ಪೊಲೀಸ್ ಕಮಿಷನರ್‌ರವರೇ ಶಾಂತಿಯುತವಾಗಿರುವ ಕೊಡಗಿನ ಶಾಂತಿ ಕದಡುವ ಉದ್ದೇಶದಿಂದ ಅಮಾಯಕ ಯುವಕರನ್ನು ಉದ್ರೇಕಿಸಿ ತ್ರಿಶೂಲ ವಿತರಣೆ ಮಾಡಿರುವ ಸಂಘಪರಿವಾರದ ನಾಯಕ ರಘು ಸಕಲೇಶಪುರ ಮತ್ತು ಸಂಘಟಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದಾರೆ.

ಮಂಡ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕಾನೂನುಬಾಹಿರವಾದ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದಷ್ಟೆ ಹೇಳಿದ್ದಾರೆ.

ಇದನ್ನೂ ಓದಿ| ʼಹಿಂದೂ ಸ್ತ್ರೀಯರನ್ನು ಕೆಣಕಿದರೆ, ನಿಮ್ಮ ಹೆಣ್ಣುಮಕ್ಕಳನ್ನು ರೇಪ್‌ ಮಾಡುತ್ತೇನೆʼ: ಉತ್ತರ ಪ್ರದೇಶದಲ್ಲಿ ಮಹಂತ ಹೇಳಿಕೆ

Exit mobile version