Site icon Vistara News

Self Harm: ಕೊಡಗಿನಲ್ಲಿ ಅರಣ್ಯಾಧಿಕಾರಿ ನೇಣಿಗೆ ಶರಣು, ಕಾರಣ ನಿಗೂಢ

forest officer self harm

ಕೊಡಗು: ಕೊಡಗಿನಲ್ಲಿ ಯುವ ಅರಣ್ಯಾಧಿಕಾರಿಯೊಬ್ಬರು (forest officer) ನೇಣು ಬಿಗಿದು ಆತ್ಮಹತ್ಯೆಗೆ (self harm) ಶರಣಾಗಿದ್ದಾರೆ.

ಮಡಿಕೇರಿಯ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ಈ ಘಟನೆ ನಡೆದಿದೆ. ಮಂಡ್ಯ ಮೂಲದ ರಶ್ಮಿ(27) ಮೃತ ದುರ್ದೈವಿ. ಅರಣ್ಯ ಇಲಾಖೆಯಲ್ಲಿ DRFO ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಶ್ಮಿ ಕೊಡಗು ಜಿಲ್ಲೆ ಮಡಿಕೇರಿಯ ಅರಣ್ಯ ಭವನ ಬಳಿ ಇರುವ ವಸತಿ ಗೃಹದಲ್ಲಿ ತಂಗಿದ್ದರು. ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಆತ್ಮಹತ್ಯೆ‌ (suicide case) ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಸ್ತಿಗಾಗಿ ತಮ್ಮನಿಂದ ಅಣ್ಣ- ಅತ್ತಿಗೆ ಕೊಲೆ

ಮೈಸೂರು: ಆಸ್ತಿ ವಿಚಾರಕ್ಕೆ ಜೋಡಿ ಕೊಲೆ ನಡೆದಿದ್ದು, ತಮ್ಮನಿಂದಲೇ ಅಣ್ಣ ಮತ್ತು ಅತ್ತಿಗೆಯ ಬರ್ಬರ ಹತ್ಯೆಯಾಗಿದೆ. ತಿ.ನರಸೀಪುರ ತಾಲೂಕಿನ ನುಗ್ಗಳ್ಳಿ ಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ.

ಶಿವಲಿಂಗೆಗೌಡ (55), ಪತ್ನಿ ಭಾರತಿ (47) ಮೃತ ದುರ್ದೈವಿಗಳು. ಹನುಮಂತೆಗೌಡ (50) ಕೊಲೆ ಮಾಡಿರುವ ಆರೋಪಿ. ಹನುಮಂತೇಗೌಡ- ಶಿವಲಿಂಗೇಗೌಡ ಸಹೋದರರು. ಆಸ್ತಿ ವಿಚಾರಕ್ಕೆ ಆಗಾಗ್ಗೆ ಅಣ್ಣ ತಮ್ಮಂದಿರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಜಮೀನಿನಲ್ಲಿ ಕೆಲಸ ಶಿವಲಿಂಗೆಗೌಡ ಮತ್ತು ಪತ್ನಿ ಭಾರತಿ ಕೆಲಸ ಮಾಡುತ್ತಿದ್ದಾಗ ಹನುಮಂತೇಗೌಡ ಸಹೋದರ ಶಿವಲಿಂಗೇಗೌಡ, ಅತ್ತಿಗೆ ಭಾರತಿ ಮೇಲೆ ಮಚ್ಚಿನಿಂದ ಕೊಚ್ಚಿದ್ದಾನೆ. ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harming : 12ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣವಾಯ್ತಾ ಮಾನಸಿಕ ಖಿನ್ನತೆ

Exit mobile version