Site icon Vistara News

ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ವಿದ್ಯಾರ್ಥಿನಿ ಸಾವು

ವಿದ್ಯಾರ್ಥಿನಿ

ಕೊಡಗು: ಜಿಲ್ಲೆಯ ಕಿರುಂದಾಡು ಗ್ರಾಮದಲ್ಲಿ ದನ ಕಟ್ಟಲು ಹೋಗಿದ್ದಾಗ ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಚಸ್ಮಿಕಾ (20) ಮೃತೆ. ಯುವತಿ ಮೂರ್ನಾಡು ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದಾಳೆ.

ಸ್ಥಳಕ್ಕೆ ಶಾಸಕ ಕೆ.ಜಿ.ಬೋಪಯ್ಯ ‌ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Robbery Case | ಲಗ್ನ ಪತ್ರಿಕೆ ಕೊಡುವಂತೆ ಮನೆಗೆ ಬಂದರು; ಕೈ-ಕಾಲು ಕಟ್ಟಿ ಚಿನ್ನ, ಬೆಳ್ಳಿ ದೋಚಿದರು!

Exit mobile version