Site icon Vistara News

Energy Drink : ಎನರ್ಜಿ ಡ್ರಿಂಕ್‌ ಸೇವಿಸಿದ ಕೂಡಲೇ ಯುವಕ ಅಸ್ವಸ್ಥ

Energy Drink Madikeri News

ಮಡಿಕೇರಿ: ಜನಪ್ರಿಯ ಪೇಯ ರೆಡ್ ಬುಲ್ ಎನರ್ಜಿ ಡ್ರಿಂಕ್ (Redbull Energy Drink) ಸೇವಿಸಿದ ಕೂಡಲೇ ಯುವಕನೊಬ್ಬ ಅಸ್ವಸ್ಥನಾಗಿ ಆಸ್ಪತ್ರೆ ಸೇರಿ (Young Man Hospitalized) ಚಿಕಿತ್ಸೆ ಪಡೆಯುತ್ತಿರುವ ಘಟನೆ ಕೊಡಗು ಜಿಲ್ಲೆ (Kodagu News) ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯ ಜೋತಿ ನಗರದ ನಿವಾಸಿ ವಿನೋದ್ ಎಂಬವರು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಸಮೀಪ ಇರುವ ಅಂಗಡಿಯಲ್ಲಿ ರೆಡ್ ಬುಲ್ ಎನರ್ಜಿ ಡ್ರಿಂಕ್ ತೆಗೆದುಕೊಂಡು ಕುಡಿದಿದ್ದಾರೆ. ಎನರ್ಜಿ ಡ್ರಿಂಕ್ ಟಿನ್ ಓಪನ್ ಮಾಡುತ್ತಿದಂತೆ ಕೆಟ್ಟ ವಾಸನೆ ಬಂದಿದೆಯಂತೆ. ಆದರೂ ಅವರು ಇದು ಇದೇ ರೀತಿ ಇರುತ್ತದೆಯೇನೋ ಅಂದುಕೊಂಡು ಕುಡಿದಿದ್ದಾರೆ.

ಕುಡಿಯುವ ಸಂದರ್ಭದಲ್ಲಿ ಅದರ ಒಳಗೆ ಲೋಳೆಯಂಥ ವಸ್ತು ಪತ್ತೆಯಾಗಿದೆ. ಪಾನೀಯ ಹೊಟ್ಟೆ ಸೇರುತ್ತಿದ್ದಂತೆಯೇ ವಿನೋದ್‌ಗೆ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರೆಡ್‌ ಬುಲ್‌ ಕ್ಯಾನ್ ಪರಿಶೀಲಿಸಿದಾಗ ಇದರ ಎಕ್ಸ್‌ ಪೈಯರಿ ಡೇಟ್ ಇನ್ನೂ ಕೂಡಾ ಮುಗಿಯದಿರುವುದು ಕಂಡು ಬಂದಿದೆ. ಆದರೆ ಕ್ಯಾನ್‌ ಒಳಗೆ ಮಾತ್ರ ಪಂಗಸ್ ರೀತಿಯ ಲೋಳೆಯಂಥ ಗಟ್ಟಿವಸ್ತು ಪತ್ತೆಯಾಗಿದೆ.

ಈ ಸಂಬಂದ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು. ಅಂಗಡಿಯಿಂದ ಖರೀದಿಸಿದ ಎನರ್ಜಿ ಡಿಂಕ್ ನ ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರವೆ ಪ್ರಕಣದ ನೈಜಾಂಶ ಬೆಳಕಿಗೆ ಬರಲಿದೆ. ಸದ್ಯ ವಿನೋದ್‌ಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ : Murder Case : ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಮೇಸ್ತ್ರಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಗಂಡ

ಚೇಲಾವರ ಫಾಲ್ಸ್ ನಲ್ಲಿ ಯುವಕ ನೀರುಪಾಲು

ಕೊಡಗಿನ ಚೆಯ್ಯಂಡಾಣೆ ಬಳಿಯ ಚೇಲಾವರ ಫಾಲ್ಸ್ ನಲ್ಲಿ ನಡೆದ ದುರ್ಘಟನೆಯಲ್ಲಿ ಕೇರಳದ ಯುವಕನೊಬ್ಬ ನೀರುಪಾಲಾಗಿದ್ದಾನೆ. ಕೇರಳದ ಮಟ್ಟನ್ನೂರು ನಿವಾಸಿ ರಶೀದ್( 25) ಮೃತ ದುರ್ದೈವಿ ಯುವಕ.

ಕೇರಳದ ಮಟ್ಟನ್ನೂರು ನಿವಾಸಿ ಮಹಮ್ಮದ್ ಅಶ್ರಫ್ ಎಂಬುವರ ಪುತ್ರನಾಗಿರುವ ರಶೀದ್‌ ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ಚೇಲಾವರ ಜಲಪಾತ ವೀಕ್ಷಣೆಗೆಂದು ಬಂದಿದ್ದರು.

ಜಲಪಾತದಲ್ಲಿ ಸ್ನಾನಕ್ಕೆಂದು ಇಳಿದಾಗ ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಹಳ ಪ್ರಯಾಸಪಟ್ಟು ಜಲಪಾತದಿಂದ ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ನಾಪೋಕ್ಲು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ರೀಧರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version