Site icon Vistara News

ಆಶ್ವಯುಜ, ಕಾರ್ತಿಕ ಮಾಸದಲ್ಲಿ ದೇಶಕ್ಕೆ ಕಷ್ಟ, ಭಂಗ, ನೋವಿದೆ: ಕೋಡಿಮಠದ ಶ್ರೀ ಭವಿಷ್ಯ

ಕೋಡಿಮಠದ ಶ್ರೀ

ಹಾಸನ: ಶುಭಕೃತನಾಮ ಸಂವತ್ಸದ ಫಲ ಅಶುಭವಾಗಿರುತ್ತದೆ. ಈ ವರ್ಷದಲ್ಲಿ ಗುಡುಗು, ಮಿಂಚು, ಗಾಳಿ, ಮಳೆ, ಪ್ರಕೃತಿ ಅಲ್ಲೋಲ ಕಲ್ಲೋಲ ಆಗುತ್ತದೆ. ಬಯಲುಸೀಮೆ‌ ಮಲೆನಾಡಾಗುತ್ತದೆ, ಮಲೆನಾಡು ಬಯಲುಸೀಮೆಯನ್ನು ಬಯಸುತ್ತದೆ, ಇದು ಮುಂದುವರಿಯುತ್ತದೆ ಎಂದು ಅರಸೀಕೆರೆ ತಾಲೂಕಿನ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಈ ಸಂವತ್ಸರದ ಫಲ‌ ನೋಡಿದರೆ ಮೇಘ ಗರ್ಜಿಸುವುದು, ಭೂಮಿ ತಲ್ಲಣಗೊಳ್ಳುವುದು, ಗುಡ್ಡಗಳು ಕುಸಿಯುತ್ತವೆ, ಕೆರೆ ಕಟ್ಟೆಗಳು ಒಡೆದು ಹೋಗುತ್ತವೆ, ಇದು ಈ ಸಂವತ್ಸರದ ಕಡೆಯವರೆಗೂ ಇರುತ್ತದೆ. ಮುಂಗಾರು ಮಳೆ ಕಳೆದ ಮೇಲೆ, ಹಿಂಗಾರು ಕಡಿಮೆಯಾಗುತ್ತದೆ. ಆದರೆ, ಅಕಾಲಿಕ ಮಳೆಗಳು ಹೆಚ್ಚಾಗುತ್ತವೆ, ಆಶ್ವಯುಜ, ಕಾರ್ತಿಕ ಮಾಸದಲ್ಲಿ ದೇಶಕ್ಕೆ ಕಷ್ಟ, ಭಂಗ, ನೋವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದು ಡಿ.ಕೆ.ಶಿವಕುಮಾರ್‌: ನಂಜಾವಧೂತ ಸ್ವಾಮೀಜಿ

ರೋಗ ರುಜನಗಳು ಹೆಚ್ಚುತ್ತವೆ, ಕಳ್ಳಕಾಕರ ಕಾಟಗಳು, ಅಪಮೃತ್ಯಗಳು, ಕೊಲೆಗಳು, ಮತೀಯ ಗಲಭೆಗಳು ಹೆಚ್ಚಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಕೋಪಗಳಾಗುತ್ತವೆ. ರಾಜಕೀಯದಲ್ಲಿ ಕಲಹಗಳಾಗುತ್ತವೆ, ಮಳೆ ಬರುತ್ತದೆ ಬೆಳೆ ಸಿಕ್ಕಲ್ಲ, ಬೆಳೆ ಬರುತ್ತದೆ ಮಳೆ ತಿಂದುಹಾಕುತ್ತದೆ, ಬಲಾಢ್ಯ ಪೃಥ್ವಿ ಹೆಚ್ಚುತ್ತಾ ಹೋಗುತ್ತದೆ, ಆಕಾಶ ಎಲ್ಲಿ ಬೇಕು ಅಲ್ಲಿ ಗರ್ಜಿಸಿ ಕೆಂಡಾಮಂಡಲ ಆಗುತ್ತದೆ. ದೊಡ್ಡದೊಡ್ಡ ಪಟ್ಟಣಗಳಿಗೆ ಭಂಗವಾಗುತ್ತದೆ. ಮತೀಯ ಗಲಭೆ ಇನ್ನೂ ಹೆಚ್ಚಾಗುತ್ತದೆ. ಸಾವು-ನೋವು, ಅಶಾಂತಿ ಇನ್ನೂ ಜಾಸ್ತಿ ಆಗುತ್ತದೆ ಎಂದು ನುಡಿದಿದ್ದಾರೆ.

ರಾಷ್ಟ್ರ, ರಾಜ್ಯಮಟ್ಟದ ಗೊಂದಲಗಳು, ಸಾವು ನೋವುಗಳು ಆಗುವ ಲಕ್ಷಣ ಬಹಳ ಇದೆ ಎಂದು ತಿಳಿಸಿದ್ದಾರೆ. ಈ ತಿಂಗಳವರೆಗೂ ಕಾದುನೋಡಿ. ಶುಭಕೃತ ನಾಮ ಸಂವತ್ಸರದಲ್ಲಿ ಶುಭ ಆಗೋದಿಲ್ಲ. ಗಾಳಿ, ಮಳೆಗೆ ವೃಕ್ಷಗಳು ಮುರಿದು ಬೀಳುತ್ತವೆ. ಸಾವು-ನೋವು ಹೆಚ್ಚಾಗುತ್ತದೆ, ಜಲಾಶಯಗಳು ತುಂಬಿ ಹರಿಯುತ್ತವೆ, ಕೆಲವು ಕಡೆ ಮಳೆ ಹೋದರೆ ಸಾಕು ಎನ್ನುತ್ತಾರೆ, ಕೆಲವು ಕಡೆ ಮಳೆ ಬೇಕು ಎನ್ನುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Chaturmasya 2022 | ಮಾತೃತ್ವವನ್ನು ಗೌರವಿಸುವುದು ಸಮಾಜದ ಕರ್ತವ್ಯ: ರಾಘವೇಶ್ವರ ಭಾರತೀ ಸ್ವಾಮೀಜಿ

Exit mobile version