Site icon Vistara News

Kolar News: ಕ್ವಾರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು

Kolar News

ಕೋಲಾರ: ಕಲ್ಲು ಕ್ವಾರಿಯಲ್ಲಿ ಈಜುಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಮಲ್ಯಪ್ಪನಹಳ್ಳಿ ಬಳಿ ನಡೆದಿದೆ. ಬೇಸಿಗೆ ಬಿಸಿ ತಾಳಲಾರದೆ ಯುವಕರ ಜತೆ ಈಜಲು ಹೋಗಿದ್ದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

ಮನು ಕುಮಾರ್ (14), ಪವನ್ ಕುಮಾರ್ (18) ಮೃತರು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Fire Accident: ಭೀಕರ ಅಗ್ನಿ ದುರಂತ; ಒಂದೇ ಕುಟುಂಬದ 7 ಮಂದಿ ಸಜೀವ ದಹನ

ಬೈಕಿಗೆ ಟಾಟಾ ಏಸ್‌ ಡಿಕ್ಕಿ; ರಾಜಕಾಲುವೆಗೆ ಬಿದ್ದ ಬೈಕ್:‌ 2 ಅಪಘಾತಗಳಲ್ಲಿ ಮೂವರು ಸಾವು

ಬೆಂಗಳೂರು: ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ (Road Accident) ಮೂವರು ಸಾವಿಗೀಡಾಗಿ, ಇನ್ನೊಬ್ಬ ಬೈಕ್‌ ಸವಾರ (bike rider) ತೀವ್ರವಾಗಿ (injured) ಗಾಯಗೊಂಡಿದ್ದಾರೆ. ಒಂದು ಅಪಘಾತ ಬೆಂಗಳೂರಿನಲ್ಲಿ (Bangalore news) ಹಾಗೂ ಇನ್ನೊಂದು ಶಿರಸಿಯಲ್ಲಿ (Sirsi news) ಘಟಿಸಿವೆ.

ಬೆಂಗಳೂರಿನ ರಾಜಗೋಪಾಲನಗರ ಬಳಿಯ ಹೆಗ್ಗನಹಳ್ಳಿ ಬಳಿ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಟಾಟಾ ಏಸ್‌ ಡಿಕ್ಕಿಯಾಗಿದೆ. ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರನ್ನು ಫಾರೂಕ್‌ ಮತ್ತು ಅಬ್ರಹಾಂ ಎಂದು ಗುರುತಿಸಲಾಗಿದೆ. ಇಬ್ಬರೂ ಹೆಲ್ಮೆಟ್‌ ಧರಿಸಿರಲಿಲ್ಲ.

ಟಾಟಾ ಏಸ್‌ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಈ ದುರ್ಘಟನೆಗೆ ಕಾರಣವಾಗಿದೆ. ನಿನ್ನೆ ರಾತ್ರಿ 11 ಘಂಟೆಯ ಸುಮಾರಿಗೆ ಅಪಘಾತ ನಡೆದಿದ್ದು, ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಕಾಲುವೆಗೆ ಬಿದ್ದ ಬೈಕ್‌

ಕಾರವಾರ: ನಿಯಂತ್ರಣ ತಪ್ಪಿ ರಾಜಕಾಲುವೆಗೆ (Rajakaluve) ಬೈಕ್ ಬಿದ್ದ ಪರಿಣಾಮ ಒಬ್ಬ ಸ್ಥಳದಲ್ಲೇ ಸತ್ತಿದ್ದು, ಇನ್ನೋರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಯಲ್ಲಾಪುರ ರಸ್ತೆಯ ಪಂಚವಟಿ ಕ್ರಾಸ್‌ ಬಳಿ ಘಟನೆ ನಡೆದಿದೆ.

ಸಂದೀಪ ಛಲವಾದಿ (24) ಮೃತ ಬೈಕ್ ಸವಾರ. ಸುಭಾಷ್ ದೇವಾಡಿಗ (26) ಗಂಭೀರ ಗಾಯಗೊಂಡವನು. ಯಲ್ಲಾಪುರದ ಭರತ್ನಳ್ಳಿ ಗ್ರಾಮದ ಈ ಯುವಕರು ಸ್ನೇಹಿತನನ್ನು ಶಿರಸಿ ಬಸ್‌ ನಿಲ್ದಾಣಕ್ಕೆ ಬಿಟ್ಟು ವಾಪಸ್ಸಾಗುವಾಗ ಅಪಘಾತ ನಡೆದಿದೆ. ಇಳಿಜಾರಿನ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸುಮಾರು 20 ಅಡಿ ಆಳದ ರಾಜಕಾಲುವೆಗೆ ಬಿದ್ದಿದೆ.

ಇದನ್ನೂ ಓದಿ | Kolar News: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಆತ್ಮಹತ್ಯೆ

ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಯಿಂದ ಕಾಲುವೆಗೆ ಬಿದ್ದವರ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯಿತು. ಗಂಭೀರ ಗಾಯಗೊಂಡಿದ್ದ ಸವಾರನನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Exit mobile version