Site icon Vistara News

Kolar News: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಆತ್ಮಹತ್ಯೆ

Kolar News

ಕೋಲಾರ: ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆ ಆತ್ಮಹತ್ಯೆ. ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಆಸ್ಪತ್ರೆಯ ಶೌಚಾಲಯದಲ್ಲಿ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಮಾಲೂರು ಮೂಲದ ರತ್ಮಮ್ಮ (45) ಆತ್ಮಹತ್ಯೆಗೆ ಶರಣಾದ ಮಹಿಳೆ. ಕಿಡ್ನಿ ವೈಫಲ್ಯದಿಂದ ಕಳೆದ ಐದು ದಿನದ ಹಿಂದೆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಮಂಗಳವಾರ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೈಕ್‌ ಚಲಾಯಿಸುತ್ತಿದ್ದ ತಂದೆ- ಮಗ ಅಪಘಾತದಲ್ಲಿ ಸಾವು

road accident chikkaballapur

ಚಿಕ್ಕಬಳ್ಳಾಪುರ: ಬೈಕ್‌ನಲ್ಲಿ ಸಂಚರಿಸುತ್ತಿದ್ದ ತಂದೆ ಹಾಗೂ ಮಗ ಇಬ್ಬರೂ ರಸ್ತೆ ಅಪಘಾತದಲ್ಲಿ (Road Accident) ಸಾವಿಗೀಡಾಗಿದ್ದಾರೆ. ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ (Chikkaballapur news) ತಾಲೂಕಿನ ಹುನೇಗಲ್ ಗ್ರಾಮದ ಬಳಿ ಘಟನೆ ನಡೆದಿದೆ. ಮುಂದೆ ಹೋಗುತ್ತಿದ್ದ ವಾಹನಕ್ಕೆ ತಂದೆ ಮಗ ಪ್ರಯಣಿಸುತ್ತಿದ್ದ ಬೈಕು ಡಿಕ್ಕಿ ಹೊಡೆದಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಹುಶಃ ಬೈಕ್‌ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ತಂದೆ ಗಂಗಿರೆಡ್ಡಿ, ಮಗ ಆದರ್ಶ ಮೃತ ದುರ್ದೈವಿಗಳು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ಉಪಾಧೀಕ್ಷಕ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಿಎಸ್‌ಐ ಹತ್ಯೆ ಅಪರಾಧಿಗಳಿಗೆ ಸಜೆ

ಬೆಂಗಳೂರು: ದೊಡ್ಡಬಳ್ಳಾಪುರ (Doddaballapur news) ನಗರ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಜಗದೀಶ್ (PSI Jagadish) ಅವರನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿದ ಪ್ರಕರಣದಲ್ಲಿ ಇಬ್ಬರು ಹಂತಕರಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ (judgement) ಪ್ರಕಟಿಸಿದೆ.

2016ರಲ್ಲಿ ನೆಲಮಂಗಲದಲ್ಲಿ ನಡೆದಿದ್ದ ಪಿಎಸ್‌ಐ ಜಗದೀಶ್ ಕೊಲೆ ಪ್ರಕರಣ ಭಾರೀ ಸದ್ದು ಮಾಡಿತ್ತು. ವಿಚಾರಣೆ ನಡೆದು 8 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿದೆ. ಪ್ರಮುಖ ಆರೋಪಿ ಹರೀಶ್ ಬಾಬು ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ದಂಡ ವಿಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಮಧುಗೆ 7 ವರ್ಷ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಲಾಗಿದೆ. ಬೆಂಗಳೂರು ಜಿಲ್ಲಾ ನ್ಯಾಯಾಲಯದಿಂದ ಈ ಮಹತ್ವದ ತೀರ್ಪು ಹೊರಬಿದ್ದಿದೆ.

ರಾಬರಿ ಕೇಸ್ ಸಂಬಂಧ ಆರೋಪಿ ಮಧು ಹಾಗೂ ಹರೀಶ್ ಬಾಬು ಇವರನ್ನು ಹಿಡಿಯಲು ಪಿಎಸ್‌ಐ ಜಗದೀಶ್ ಬಂದಿದ್ದರು. ಈ ವೇಳೆ ಆಯತಪ್ಪಿ ಚರಂಡಿಯಲ್ಲಿ ಬಿದ್ದಿದ್ದರು. ಆಗ ಪಿಎಸ್‌ಐ ಜಗದೀಶ್‌ಗೆ ಆರೋಪಿಗಳು ಚಾಕುವಿನಿಂದ ಬರ್ಬರವಾಗಿ ಇರಿದಿದ್ದರು. ಜಗದೀಶ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಪ್ರಕರಣದ ಸಂಬಂಧ ನೆಲಮಂಗಲ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಸುದೀರ್ಘ 8 ವರ್ಷಗಳ ವಿಚಾರಣೆ ಬಳಿಕ ಕೋರ್ಟ್‌ನಿಂದ ತೀರ್ಪು ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ರಘುನಾಥ್ ಮಹತ್ವದ ತೀರ್ಪು ನೀಡಿದ್ದಾರೆ. ಮೀನಾಕುಮಾರಿ ಹಾಗೂ ಎಸ್.ವಿ ಭಟ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ನಕಲಿ ನೋಟು ಚಲಾವಣೆ, ಬಂಧನ

ನಕಲಿ ‌ನೋಟ್ ಪ್ರೀಂಟ್ ಮಾಡಿ‌ ಚಲಾವಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಡಾ.ಕೆ ಆರ್ ಸಂಜಯ್ ಬಂಧಿತ ಆರೋಪಿ. ಬಂಧಿತನಿಂದ 500 ರೂ. ಮುಖ ಬೆಲೆಯ 51 ಖೋಟಾ ನೋಟು ವಶಪಡಿಸಿಕೊಳ್ಳಲಾಗಿದೆ. ಈತ ಕ್ಯಾಬ್ ಡ್ರೈವರುಗಳನ್ನ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಎಂದು ಗೊತ್ತಾಗಿದೆ.

ದೂರುದಾರ ಚಂದ್ರಶೇಖರ್‌ ಎಂಬವರನ್ನು ಯಶವಂತಪುರದಲ್ಲಿ ಪಿಕ್ ಮಾಡಿ ಊಟಕ್ಕೆ ಕರೆದೊಯ್ದಿದ್ದ ಆರೋಪಿ. ಮಾಗಡಿ ರೋಡ್ ಹೌಸಿಂಗ್ ಬೋರ್ಡ್‌ನಲ್ಲಿ ಬಿ.ಎನ್.ಬಾರ್ ಅಂಡ್ ರೆಸ್ಟೊರೆಂಟ್‌ಗೆ ಕರೆದುಕೊಂಡು ಹೋಗಿದ್ದ. ಬಾರ್‌ಗೆ ಹೋದ ಬಳಿಕ ದೂರುದಾರರ ಬಳಿ 10 ಸಾವಿರ ಪೋನ್ ಪೇ ಮಾಡಿಸಿದ್ದ. ಬದಲಾಗಿ ತನ್ನ ಬಳಿ ಇದ್ದ 10 ಸಾವಿರದ 500 ರೂ. ನಕಲಿ ನೋಟನ್ನು ನೀಡಿದ್ದ. ಹಣ ನೀಡಿ ದೂರುದಾರನ ಮೊಬೈಲ್ ಪಡೆದುಕೊಂಡು ಎಸ್ಕೇಪ್ ಆಗಿದ್ದ.

ಇದನ್ನೂ ಓದಿ: Encounter: ಗುರುದ್ವಾರ ಮುಖ್ಯಸ್ಥರನ್ನು ಕೊಂದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ; ಉತ್ತರಾಖಂಡದಲ್ಲೂ ಯೋಗಿ ಮಾದರಿ!

ಘಟನೆ ಬಳಿಕ ಮಾಗಡಿ ರೋಡ್ ಪೊಲೀಸ್ ಠಾಣೆಗೆ ಜರಿಪಿಟಿ ಚಂದ್ರಶೇಖರ್‌ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಚೆನ್ನೈ ಮೂಲದ ಆರೋಪಿಯನ್ನು‌ ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ. ದೂರುದಾರ ಚಂದ್ರಶೇಖರ್‌ಗೆ ನೀಡಿದ್ದ 21 ಖೋಟಾ ನೋಟ್‌ಗಳು, ನೋಟ್ ತಯಾರಿಕೆಗೆ ಬಳಸುತ್ತಿದ್ದ ಪ್ರಿಂಟರ್, 90 ಸಾವಿರ ಮೌಲ್ಯದ 9 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Exit mobile version