Site icon Vistara News

Assault case : ಜಮೀನು ವಿವಾದ; ಒಂಟಿ ಮಹಿಳೆಯನ್ನು ನೆಲಕ್ಕುರುಳಿಸಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು!

assault Case

ಕೋಲಾರ: ಜಮೀನು ವಿವಾದ (Land Dispute) ಹಿನ್ನೆಲೆಯಲ್ಲಿ ಒಂಟಿ ಮಹಿಳೆಯನ್ನು ಸಂಬಂಧಿಕರು ಥಳಿಸಿರುವ (Assault Case) ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತೊಂಗಲಕುಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ.

ಆಶಾ ಎಂಬಾಕೆಯನ್ನು ಐದಾರು ಮಂದಿ ಸೇರಿ ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಗ್ರಾಮ ಪಂಚಾಯತ್‌ ಸದಸ್ಯ ಶ್ರೀನಿವಾಸ್‌ ಸೇರಿ ಆಶಾಗೆ ಕಾಲಿನಿಂದ ಒದ್ದು, ಮನಬಂದಂತೆ ಥಳಿಸಿದ್ದಾರೆ.

ಪತಿಯನ್ನು ಕಳೆದುಕೊಂಡು ಒಂಟಿಯಾಗಿರುವ ಆಶಾ ನಿನ್ನೆ ಗುರುವಾರ ಸಂಜೆ ಆಸ್ತಿ ಪಾಲು ಕೇಳಲು ಹೋದಾಗ ಸಂಬಂಧಿಕರ ಜತೆಗೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಗಲಾಟೆ ಶುರುವಾಗಿದ್ದು, ನೋಡನೋಡುತ್ತಿದ್ದಂತೆ ಎಲ್ಲ ಸಂಬಂಧಿಕರು ಒಂಟಿಯಾಗಿದ್ದ ಆಶಾ ಮೇಲೆ ಎರಗಿದ್ದಾರೆ.

ಆಶಾಳನ್ನು ನೆಲಕ್ಕುರಳಿಸಿ ಸಿಕ್ಕ ಸಿಕ್ಕ ವಸ್ತುಗಳಿಂದ ಐದಾರು ವ್ಯಕ್ತಿಗಳು ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದೆಲ್ಲವೂ ಅಲ್ಲೆ ಇದ್ದ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ. ಒಂಟಿ ಹೆಣ್ಣಿನ ಮೇಲೆ ಕ್ರೌರ್ಯ ಮೆರೆದ ಪುಂಡರ ವಿರುದ್ಧ ಆಕ್ರೋಶಗಳು ಕೇಳಿ ಬಂದಿದೆ. ಕ್ಯಾಸಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Assault Case: 3 ವರ್ಷದ ಮಗಳ ಗುಪ್ತಾಂಗ ಕಚ್ಚಿ ಮಲತಂದೆಯ ಕ್ರೌರ್ಯ; ಸಿಗರೇಟ್‌ನಿಂದ ಸುಟ್ಟು ವಿಕೃತಿ

ಮಗನ ಜತೆ ಜಗಳವಾಡಿದ್ದಕ್ಕೆ ಸಿಟ್ಟು; ಬಾಲಕನಿಗೆ ಕಾಲಿನಿಂದ ಜಾಡಿಸಿ ಒದ್ದು ಕ್ರೌರ್ಯ ಮರೆದ ತಂದೆ!

ಬೆಳಗಾವಿ: ಮಗನ ಜತೆ ಜಗಳವಾಡಿದ ಬಾಲಕನ ಮೇಲೆ ತಂದೆಯೊಬ್ಬ (Assault Case) ಕ್ರೌರ್ಯ ಮರೆದಿದ್ದಾನೆ. ತನ್ನ ಮಗನೊಂದಿಗೆ ಜಗಳವಾಡಿದ ಸಿಟ್ಟಿಗೆ ಬಾಲಕನನ್ನು ಹಿಡಿದು ಕಾಲಿನಿಂದ ಒದ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಬಾಲಕನ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಸ್ಮಾಯಿಲ್ ಗಫಾರ್ ಮುಲ್ಲಾ ಎಂಬಾತ 12 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ನೂರಾಣಿ ಮಸೀದಿಯಲ್ಲಿ ಘಟನೆ ನಡೆದಿದೆ. ಕಳೆದ ಜೂನ್‌ 9ರಂದು ಇಸ್ಮಾಯಿಲ್ ಮಗನ‌ ಜತೆಗೆ ಬಾಲಕನೊಬ್ಬ ಜಗಳವಾಡಿದ್ದ. ನಂತರ ಮಸೀದಿಗೆ ನಮಾಜ್ ಮಾಡಲು ತೆರಳಿದ್ದ.

ಮಗನೊಟ್ಟಿಗೆ ಜಗಳವಾಡಿದ ವಿಷಯ ತಿಳಿದ ಇಸ್ಮಾಯಿಲ್‌ ಇದೇ ಸಿಟ್ಟಿನಲ್ಲಿ ಮಸೀದಿಗೆ ತೆರಳಿ ಬಾಲಕನನ್ನು ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದ. ಚಿಕ್ಕ ಹುಡುಗ ಎಂಬುದನ್ನೂ ನೋಡದೆ ಆತನನ್ನು ನೆಲಕ್ಕುರುಳಿಸಿ ಎದೆಗೆ, ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದ. ಇಸ್ಮಾಯಿಲ್‌ ಹೊಡೆತಕ್ಕೆ ಬಾಲಕ ತೀವ್ರ ಅಸ್ವಸ್ಥಗೊಂಡಿದ್ದ. ಇತರರು ಬಿಡಿಸಲು ಬಂದರೂ ಇಸ್ಮಾಯಿಲ್‌ ನನ್ನ ಮಗನೊಟ್ಟಿಗೆ ಯಾಕೆ ಜಗಳವಾಡುತ್ಯಾ ಎಂದು ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಹಲ್ಲೆ ಮಾಡಿದ್ದು ಹಾಗೂ ಪಾಪಿ ಇಸ್ಮಾಯಿಲ್ ಕ್ರೌರ್ಯವೆಲ್ಲವೂ ಮಸೀದಿಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಗೊಂಡು ಮನೆಗೆ ತೆರಳಿದ್ದ ಬಾಲಕನಿಗೆ ಪೋಷಕರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಇಸ್ಮಾಯಿಲ್ ವಿರುದ್ಧ ನಿಪ್ಪಾಣಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version