ಕೋಲಾರ: ಕ್ಷುಲ್ಲಕ ವಿಚಾರಕ್ಕೆ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ (Kotiganahalli Ramaiah) ಅವರ ಮೇಲೆ ಗಂಭೀರವಾಗಿ ಹಲ್ಲೆ (Assault Case) ನಡೆಸಲಾಗಿದೆ. ತಂದೆಯನ್ನು ರಕ್ಷಿಸಲು ಬಂದ ಮಗನಿಗೂ ಹೊಡೆದಿದ್ದಾರೆ. ಕೋಲಾರದ (Kolar news) ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿಯ ಮುನೇಶ್ವರ ದೇವಾಲಯ ಬಳಿ ಘಟನೆ ನಡೆದಿದೆ.
ಪಾಪರಾಜನಹಳ್ಳಿ ಗ್ರಾಮದ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ- ಸಂಜೆ ಧ್ವನಿವರ್ಧಕದ ಮೂಲಕ ಜೋರಾಗಿ ಮೈಕ್ ಹಾಕಲಾಗಿತ್ತು. ಇಂದು ಗುರುವಾರ ಬೆಳಗ್ಗೆಯೂ ಧ್ವನಿವರ್ಧಕದ ಸೌಂಡ್ ಹೆಚ್ಚು ಮಾಡಿದ್ದಾರೆ. ಹೀಗಾಗಿ ಕೋಟಿಗಾನಹಳ್ಳಿ ರಾಮಯ್ಯ ಸೌಂಡ್ ಕಡಿಮೆ ಮಾಡಿ, ಓದಲು ತೊಂದರೆ ಆಗುತ್ತೆ ಎಂದು ಹೇಳಿದ್ದಾರೆ.
ಹೀಗಾಗಿ ಕೋಟಿಗಾನಹಳ್ಳಿ ರಾಮಯ್ಯ ಬುಡ್ಡಿ ದೀಪದಲ್ಲಿ ಇರಬಾರದು ಎಂದು ಗಲಾಟೆ ಮಾಡಿ ಕಣ್ಣು ಹಾಗೂ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಗ್ರಾಮದ ಮಂಜುನಾಥ್, ಬೈರಪ್ಪ, ಸುಬ್ಬು ಸೇರಿದಂತೆ ಇತರರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆಗೆ ಒಳಗಾದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಮಗ ಮೇಘಾವರ್ಷ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ಮಾಡಿದ ಮಂಜುನಾಥ್ ಎಂಬಾತನನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Road Accident : ಬಸ್ ಗುದ್ದಿದ ರಭಸಕ್ಕೆ ಅಪ್ಪಚ್ಚಿಯಾದ ಓಮ್ನಿ ಕಾರು; ಮೂವರು ದಾರುಣ ಸಾವು
Group clash : ರಾಯಚೂರಲ್ಲಿ ಗುಂಪು ಘರ್ಷಣೆ; ರಾಡ್, ದೊಣ್ಣೆಯಿಂದ ಬಡಿದಾಟ
ರಾಯಚೂರು: ರಾಯಚೂರಲ್ಲಿ (Raichur News) ನ್ಯಾಯ ಪಂಚಾಯತಿ ವಿಚಾರಕ್ಕೆ ಗುಂಪು (Group clash) ಘರ್ಷಣೆಯಾಗಿದೆ. ರಾಯಚೂರು ಹೊರವಲಯದ ಅಸ್ಕಿಹಾಳ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಸಂಘರ್ಷದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. 3 ವರ್ಷಗಳಿಂದ ಎರಡೂ ತಂಡಗಳ ಯುವಕರ ಮಧ್ಯೆ ಕಿರಿಕ್ ನಡೆಯುತ್ತಿತ್ತು. ಇದೇ ವಿಚಾರಕ್ಕೆ ನ್ಯಾಯ ಪಂಚಾಯತ್ ಮಾಡಲು ನರಸಪ್ಪ ಎಂಬವರು ಮುಂದಾಗಿದ್ದರು. ನೀವು ನ್ಯಾಯ ಪಂಚಾಯತಿ ಮಾಡೋಷ್ಟು ದೊಡ್ಡವರು ಎಂದು ಶುರುವಾದ ಮಾತು, ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಸಂಘರ್ಷಕ್ಕೆ ಕಾರಣವಾಗಿದೆ.
ಘಟನೆಯಲ್ಲಿ ರೇಷ್ಮಾ, ನರಸಪ್ಪ, ಮನೋಹರ್, ಗಿರಿಜಾ ಸೇರಿ ನಾಲ್ವರಿಗೆ ಗಾಯವಾಗಿದೆ. ಸದ್ಯ ಗಾಯಾಳುಗಳಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ರಂಗಪ್ಪ ಸೇರಿದಂತೆ ಒಟ್ಟು 15 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ