Site icon Vistara News

Student death: ಕಾಲೇಜ್‌ ಕಾಂಪೌಂಡ್‌ನಿಂದ ಬಿದ್ದು ವಿದ್ಯಾರ್ಥಿನಿ ಮೃತ್ಯು, ಪಿಯು ಸೇರಿದ 4ನೇ ದಿನವೇ ದುರಂತ

college student Siniksha

#image_title

ದಾವಣಗೆರೆ: ವಿದ್ಯಾರ್ಥಿನಿಯೊಬ್ಬಳು ಕಾಂಪೌಂಡ್‌ನಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ (Student death) ದಾವಣಗೆರೆ ಜಿಲ್ಲೆಯ (Davanagere news) ಹರಿಹರ ತಾಲೂಕಿನ ಕುರುಬರಹಳ್ಳಿಯಲ್ಲಿ ನಡೆದಿದೆ. ಕುರುಬರ ಹಳ್ಳಿಯ ಸಮೀಪದ ಮಾನ್ಯತಾ ಪಬ್ಲಿಕ್ ವಸತಿ ಕಾಲೇಜಿನಲ್ಲಿ ದುರಂತ ಸಂಭವಿಸಿದ್ದು, ಪ್ರಥಮ ಪಿಯು ವಿದ್ಯಾರ್ಥಿನಿ (first PU Student) ಸಿನಿಕ್ಷಾ (16) ಸಾವನ್ನಪ್ಪಿದ ದುರ್ದೈವಿ ವಿದ್ಯಾರ್ಥಿನಿ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಶಶಿಕಾಂತ ಎಂಬುವರ ಪುತ್ರಿಯಾಗಿರುವ ಸಿನಿಕ್ಷಾ ಮಾನ್ಯತಾ ವಸತಿ ಕಾಲೇಜಿನಲ್ಲಿ ‌ ಸೈನ್ಸ್ ವಿಭಾಗದ ಪಿಯು ಪ್ರಥಮ ವರ್ಷದಲ್ಲಿ ಕಲಿಯುತ್ತಿದ್ದಳು. ಕಾಲೇಜಿಗೆ ಸೇರಿ ಇನ್ನೂ ನಾಲ್ಕು ದಿನಗಳಷ್ಟೇ ಆಗಿದ್ದು, ಆಕೆ ಈಗ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ಕಾಂಪೌಂಡ್‌ನಿಂದ ಬಿದ್ದು ತೀವ್ರ ಗಾಯಗೊಂಡಿದ್ದ ಸಿನಿಕ್ಷಾಳನ್ನು ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಸಂಭವಿಸಿದೆ. ಬಿದ್ದಾಗ ಆಕೆಗೆ ತೀವ್ರವಾದ ಗಾಯಗಳಾಗಿದ್ದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಈ ಸಾವು ಸಂಭವಿಸಿದೆ ಎನ್ನಲಾಗಿದೆ.

ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೆಯೂ ನಡೆದಿತ್ತು ದುರಂತ

ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಾವಿನ ದುರಂತ ಸಂಭವಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆಯೂ ಇದೇ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು.

2015ರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಮಾಲಾಶ್ರೀ ಬಿರಾದಾರ ಎಂಬ‌ ವಿದ್ಯಾರ್ಥಿನಿ ಆತ್ಮಹತ್ಯೆ ಮಾಢೀಖೋಂಡಿದ್ದು, ಆತ ಮೃತ ಮಾಲಾಶ್ರೀ ಪಾಲಕರು ಸಂಸ್ಥೆ ವಿರುದ್ದ ದೂರು ದಾಖಲಿಸಿದ್ದರು. ಆ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಂಸ್ಥೆಗೆ ಭೇಟಿ ಆಡಳಿತ ಮಂಡಳಿಯನ್ನು ತರಾಟೆ ತೆಗೆದುಕೊಂಡಿದ್ದರು.

ಕೋಲಾರದಲ್ಲಿ ಈಚರ್ ಅಪಘಾತ: ಬಿಹಾರ ಮೂಲದ ವ್ಯಕ್ತಿ ಸಾವು

ಈಚರ್ ವಾಹನವೊಂದನ್ನು ರಿವರ್ಸ್‌ ತೆಗೆದುಕೊಳ್ಳುವಾಗ ವಾಹನದ ಮೇಲೆ ಕುಳಿತಿದ್ದ ವ್ಯಕ್ತಿ ಕಂಬಿ ತಗುಲಿ ಪ್ರಾಣ ಕಳೆದುಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಮಾವು ಮಾರುಕಟ್ಟೆಯಲ್ಲಿ ಘಟನೆ ನಡೆದಿದ್ದು, ಬಿಹಾರ ಮೂಲದ ಕಾರ್ಮಿಕ ದಿಲೀಪ್ (21) ಮೃತಪಟ್ಟಿದ್ದಾರೆ.

ಈಚರ್ ವಾಹನ ರಿವರ್ಸ್ ತೆಗೆದುಕೊಳ್ಳುವ ವೇಳೆ ವಾಹನ ಮೇಲೆ ಕುಳಿತಿದ್ದ ವ್ಯಕ್ತಿ ಕಂಬಿ ತಗುಲಿ ನೆಲಕ್ಕೆ ಉರುಳಿದ್ದಾನೆ. ನೆಲಕ್ಕೆ ಬಿದ್ದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾನೆ.

ಮೃತ ದೇಹವನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Murder case: ಪಿಯುಸಿ ವಿದ್ಯಾರ್ಥಿಯನ್ನು ಸೇತುವೆಯಿಂದ ಕೆಳಗೆ ತಳ್ಳಿ ಕೊಂದ ಗೆಳೆಯರು!

Exit mobile version