Site icon Vistara News

Drowned in Pond : ಕಾಲು ಜಾರಿ ನೀರಿಗೆ ಬಿದ್ದ ಮಗು, ರಕ್ಷಿಸಲು ಧಾವಿಸಿದ ತಾಯಿಯೂ ಜಲಸಮಾಧಿ

Drowned in Pond (2)

ಕೋಲಾರ : ಮಗುವೊಂದು ಕಾಲು ಜಾರಿ ಕೆರೆಗೆ ಬಿದ್ದಾಗ ಅದನ್ನು ರಕ್ಷಿಸಲು ಧಾವಿಸಿದ ತಾಯಿಯೂ ನೀರಿನಲ್ಲಿ ಸಮಾಧಿ ಹೊಂದಿದ ಹೃದಯವಿದ್ರಾವಕ ಘಟನೆಯೊಂದು (Drowned in Pond) ನಡೆದಿದೆ. ಕೋಲಾರ ಜಿಲ್ಲೆಯ (Kolara News) ಶ್ರೀನಿವಾಸಪುರ ತಾಲ್ಲೂಕಿನ ಕೋಡಿಪಲ್ಲಿ ಗ್ರಾಮದ ಕೆರೆಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡವರನ್ನು ತಾಯಿ ಗೀತಾ (26) ಮತ್ತು ಆರು ವರ್ಷದ ಮಗು ಯಶವಂತ್‌ (Mother and son dead) ಎಂದು ಗುರುತಿಸಲಾಗಿದೆ.

ಗೀತಾ ಅವರು ಮೃತರು ಶ್ರೀನಿವಾಸಪುರ ಪಟ್ಟಣದ ಮಾರುತಿ ನಗರದ ನಿವಾಸಿ. ಇವರು ಕೋಡಿಪಲ್ಲಿ ಗ್ರಾಮದ ಸಂಬಂದಿಕರ ಮನೆಗೆ ಬಂದಿದ್ದರು. ಈ ವೇಳೆ ತಾಯಿ ಮತ್ತು ಮಗ ಕೆರೆಯ ಬಳಿ ಹೋಗಿದ್ದರು. ಅಲ್ಲಿ ಮಗ ಆಟವಾಡುತ್ತಿದ್ದಾಗ ಕಾಲು ಜಾರಿಗೆ ನೀರಿಗೆ ಬಿದ್ದಿದ್ದಾನೆ. ಆಗ ಕೆರೆಯಲ್ಲಿ ಬಿದ್ದ ಮಗುವನ್ನು ರಕ್ಷಣೆ ಮಾಡಲು ಹೋಗಿ ತಾಯಿ ಕೂಡಾ ನೀರುಪಾಲಾಗಿದ್ದಾರೆ.

ಇದು ಆಕಸ್ಮಿಕವಲ್ಲ, ಆತ್ಮಹತ್ಯೆ ಶಂಕೆ?

ಈ ನಡುವೆ ಇದು ಕೇವಲ ಆಕಸ್ಮಿಕವಾಗಿ ಸಂಭವಿಸಿದ ಸಾವಲ್ಲ. ಇದೊಂದು ಆತ್ಮಹತ್ಯೆಯಾಗಿರಬಹುದು ಎಂಬ ಮಾತೂ ಕೇಳಿಬರುತ್ತಿದೆ. ಗೀತಾ ಅವರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾರಿ ನೋವಿನಲ್ಲಿದ್ದರು. ಹೀಗಾಗಿ ಅವರು ಸಂಬಂಧಿಕರ ಮನೆಗೆ ಬಂದು ಅಲ್ಲಿದ್ದ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡರೇ ಎಂಬ ಮಾತೂ ಕೇಳಿಬಂದಿದೆ.

ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : POCSO Case: ಪೋಕ್ಸೋ ಪ್ರಕರಣದಲ್ಲಿ ಬಾಲಮಂಜುನಾಥ ಸ್ವಾಮೀಜಿ ಬಂಧನ

Drowned in River : ಕಾವೇರಿ ನದಿಯಲ್ಲಿ ಮುಳುಗಿ ಮೂವರು ಯುವಕರು ದುರ್ಮರಣ

ಕೊಡಗು: ಕೊಡಗಿನಲ್ಲಿ ಭೀಕರ ಜಲ ದುರಂತವೊಂದು (Water Tragedy) ಸಂಭವಿಸಿದೆ. ಕಾವೇರಿ ನದಿಯಲ್ಲಿ (Drowned in River Cauvery) ಮುಳುಗಿ ಮೂವರು ಯುವಕರು ಮೃತಪಟ್ಟಿದ್ದಾರೆ (Three youngsters dead). ಕೊಡಗು ಜಿಲ್ಲೆ (Kodagu News) ಕುಶಾಲ ನಗರ ಸಮೀಪದ ಕೂಡಿಗೆಯಲ್ಲಿ ಈ ದುರಂತ ಸಂಭವಿಸಿದೆ.

ಕುಶಾಲ ನಗರದ ಕೂಡಿಗೆಯಲ್ಲಿ ಕಾವೇರಿ ನದಿಗೆ ಈಜಲು ತೆರಳಿದ್ದ ಮೂವರು ಯುವಕರಾದ ವಿನೋದ್, ಸಚಿನ್, ಶ್ರೀನಿವಾಸ್ ಎಂಬ ಯುವಕರು ಮೃತಪಟ್ಟಿದ್ದಾರೆ.

Drowned in Cauvery

ಈ ಮೂವರು ಯುವಕರು ಮುಳ್ಳುಸೋಗೆ, ಚಿಕ್ಕತ್ತೂರು, ಹೆಬ್ಬಾಲೆ ಮೂಲದದವರು ಎಂದು ತಿಳಿದುಬಂದಿದೆ. ಜತೆಯಾಗಿ ಈಜಲು ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿ‌ ಸಾವನ್ನಪ್ಪಿರುವ ಶಂಕೆ ಇದೆ.

ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಬಾರೆಯ ರ‍್ಯಾಫ್ಟಿಂಗ್‌ ಸಿಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ನಾಪತ್ತೆಯಾದವರ ಹುಡುಕಾಟ ನಡೆಸುತ್ತಿದ್ದಾರೆ. ಯುವಕರು ಒಂದೇ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಕಾರು ನದಿಯ ಬದಿಯಲ್ಲಿ ನಿಂತಿದೆ.

Exit mobile version