Site icon Vistara News

ಸಿದ್ದರಾಮಯ್ಯ ವಿರುದ್ಧ JDS-BJP ಜಂಟಿ ಅಭ್ಯರ್ಥಿ ಕುರಿತು ವರಿಷ್ಠರು ತೀರ್ಮಾನಿಸುತ್ತಾರೆ: ಸಂಸದ ಮುನಿಸ್ವಾಮಿ

muniswami kolar mp

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಿದರೆ ಅವರನ್ನು ಸೋಲಿಸಿ ಕಳಿಸುತ್ತೇವೆ ಎಂದು ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುನುಸ್ವಾಮಿ, ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಸಿದ್ದರಾಮಯ್ಯ ವಿರುದ್ದ ಅಭ್ಯರ್ಥಿ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರಕ್ಕೆ ಹತ್ತು ಬಾರಿ ಬಂದು ಹೋದರೂ ಸೋಲಿಸ್ತೇವೆ. ಐವತ್ತು ಬಾರಿ ಬಂದು ಹೋದರೂ ಸೋಲಿಸುತ್ತೇವೆ.

ಮುಖ್ಯಮಂತ್ರಿಯಾಗಿದ್ದವರು ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಮುಖ್ಯಮಂತ್ರಿಯಾಗಿದ್ದವರು ಚಾಮುಂಡಿ ಕ್ಷೇತ್ರದಲ್ಲೂ ಗೆಲ್ಲಲು ಸಾಧ್ಯವಾಗಲಿಲ್ಲ. ಬಾದಾಮಿ ಕ್ಷೇತ್ರದಲ್ಲೂ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಇಲ್ಲಿ ಕೆಲ ಕಾಂಗ್ರೆಸ್ ನಾಯಕರು ಸೋಲಿನ ಬೀತಿಯಲ್ಲಿ ಅವರನ್ನು ಕೋಲಾರಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳೀಯ ನಾಯಕರು ಅವರವರ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ಅವರ ಜತೆ ಇದ್ದಂತವರು ಅರ್ದ ಮಂದಿ ಕೆಟ್ಟವರು, ಅರ್ದ ಪಾಲು ಒಡೆಯುವವರು. ಸಿದ್ದರಾಮಯ್ಯ ಬರ್ತಾರೆ ಎಂದು ಬಂಗಾರಪೇಟೆ, ಶ್ರೀನಿವಾಸಪುರ ಚಿಂತಾಮಣಿ, ಮಾಲೂರು ಕಡೆಯಿಂದ ಜನರನ್ನು ಸೇರಿಸಿದ್ದಾರೆ. ಹಿರಿಯರು, ಬುದ್ಧಿವಂತರು ಅವರು ಕ್ಷೇತ್ರದ ಸ್ಥಿತಿಗತಿಗಳನ್ನು ನೋಡಿ ನಿರ್ಧಾರ ಮಾಡಬೇಕು. ಜಾತಿ ಲೆಕ್ಕಚಾರದಲ್ಲಿ ಕುರುಬ, ಮುಸ್ಲಿಂ, ದಲಿತರೆಲ್ಲ ಸಿದ್ದರಾಮಯ್ಯಗೆ ಓಟ್ ಹಾಕುತ್ತಾರೆ ಎಂದಾದರೆ ಚಾಮುಂಡಿ ಕ್ಷೇತ್ರದಲ್ಲಿ ಯಾಕೆ ಸೋಲು ಅನುಭವಿಸಿದರು? ಎಂದು ಪ್ರಶ್ನಿಸಿದರು.

ಬಿಜೆಪಿಯಿಂದ ಒಳ್ಳೆಯ ಕೆಲಸಗಳಾಗಿವೆ. ಸಿದ್ಧರಾಮಯ್ಯ ಅಲ್ಲ, ರಾಹುಲ್ ಗಾಂಧಿ ಬಂದು ನಿಂತರು ನಾವೇ ಗೆಲ್ಲುತ್ತೇವೆ. ಕೋಲಾರದಲ್ಲಿ ಬಿಜೆಪಿ ಅಸ್ತಿತ್ವ ಇಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ನೋಡಿ ಒಂದು ಲಕ್ಷ ಮತಗಳ ಅಂತರದಿಂದ‌ ಗೆಲ್ಲಿಸಿದ್ದಾರೆ. ಕಾಂಗ್ರೆಸ್‌ನ ಮೈನಸ್ ಪಾಯಿಂಟ್ ಇಟ್ಟುಕೊಂಡು ಇಲ್ಲಿಯೂ ಕೂಡ ಸಿದ್ದರಾಮಯ್ಯರನ್ನು ಸೋಲಿಸಿ ಮನೆಗೆ ಕಳುಹಿಸುತ್ತೇವೆ ಎಂದರು.

ಇದನ್ನೂ ಓದಿ | Siddaramaiah in Kolar | ಕೋಲಾರದಲ್ಲಿ ಸಿದ್ದರಾಮಯ್ಯಗೆ ಸಮಸ್ಯೆಯೇ ಶ್ರೀನಿವಾಸ್‌ಗೌಡ: ಎಚ್‌ಡಿಕೆ

Exit mobile version