ಕೋಲಾರ : ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಂದೆಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ (Kolar News) ಶ್ರೀನಿವಾಸಪುರ ತಾಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ನಾರಾಯಣಸ್ವಾಮಿ (40) ಹಾಗೂ ಮಕ್ಕಳಾದ ಪವನ್ (12), ನಿತಿನ್ (10) ಮೃತ ದುರ್ದೈವಿಗಳು. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಕೌಟುಂಬಿಕ ಕಲಹ; ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಗದಗ: ಕೌಟುಂಬಿಕ ಕಲಹಕ್ಕೆ (Family Dispute) ಒಂದೇ ಕುಟುಂಬದ ಮೂವರು (Self Harming) ಬಲಿಯಾಗಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ (Gadag News) ಈ ಘಟನೆ ನಡೆದಿದೆ. ರೇಣುಕಾ ತೇಲಿ (49), ಮಂಜುನಾಥ್ (22), ಸಾವಕ್ಕ ತೇಲಿ (47) ಮೃತ ದುರ್ದೈವಿಗಳು.
ಸಾಲದ ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ರೇಣುಕಾ ತೇಲಿ ರೈಲು ಹಳಿಗೆ ಹಾರಿದ್ದರು. ತಾಯಿಯನ್ನು ಹಿಂಬಾಲಿಸಿ ಬಂದಿದ್ದ ಮಂಜುನಾಥ್ ತಾಯಿಯನ್ನು ಕಾಪಾಡಲು ಹೋಗಿ ಹಳಿಗೆ ಬಿದ್ದಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಇವರಿಬ್ಬರ ಪ್ರಾಣವನ್ನು ತೆಗೆದಿತ್ತು.
ಹಾವೇರಿ ಜಿಲ್ಲೆಯ ಎಲವಿಗಿ ರೈಲು ನಿಲ್ದಾಣದ ಬಳಿ ನಿನ್ನೆ ಭಾನುವಾರ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತ ಅಕ್ಕ ರೇಣುಕಾಳ ಸಾವಿನ ವಿಷಯ ತಿಳಿದು ಸಾವಕ್ಕ ತೇಲಿ (47) ಎಂಬುವವರು ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ.
ಸಾವಕ್ಕ, ರೇಣುಕಾ ಮಧ್ಯೆ ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಜಗಳವಾಡಿಕೊಂಡಿದ್ದರು. ಬ್ಯಾಂಕ್‌ನಿಂದ 4 ಲಕ್ಷ ರೂ. ಸಾಲ ಪಡೆದು ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಟ್ರ್ಯಾಕ್ಟರ್ ಕಂತು ವಿಚಾರವು ಕೂಡು ಕುಟುಂಬದಲ್ಲಿ ಗಲಾಟೆಗೆ ಕಾರಣವಾಗಿತ್ತು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಪತಿಯ ಅಗಲಿಕೆಯಿಂದ ಮನನೊಂದು ಪತ್ನಿ ಆತ್ಮಹತ್ಯೆ; ಸಾವಿನಲ್ಲಿ ಒಂದಾದ ಮಗಳು
ಮೈಸೂರು: ಮೈಸೂರಿನ ಸರಗೂರು ತಾಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ತಾಯಿ-ಮಗಳು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಗೀತಾ (40), ಮಗಳು ಪೂರ್ಣಿಮ (15) ಮೃತ ದುರ್ದೈವಿಗಳು.
ಕೆಲವು ದಿನಗಳ ಹಿಂದೆ ಗೀತಾ ಅವರ ಪತಿ ರಾಜನಾಯಕ ಎಂಬುವವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿಯ ಅಗಲಿಕೆಯ ನೋವಿನಿಂದ ಗೀತಾ ಹೊರಬಂದಿರಲಿಲ್ಲ. ತವರು ಮನೆಯವರು ಸಾಕಷ್ಟು ಆತ್ಮಸ್ಥೈರ್ಯ ತುಂಬಿದ್ದರು.
ಆದರೂ ಪತಿಯ ಅಗಲಿಕೆಯ ನೋವು ಹಗಲಿರುಳು ಕಾಡುತ್ತಿತ್ತು. ಪತಿಯಿಲ್ಲದೆ ಒಬ್ಬಂಟಿಯಾದ ಗೀತಾ ಖಿನ್ನತೆಗೆ ಜಾರಿದ್ದರು. ಪದೇಪದೆ ಪತಿ ನೆನೆಪು ಕಾಡಿದ್ದು, ಇದರಿಂದ ಮನನೊಂದ ಗೀತಾ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತ ತಾಯಿ ಸಾವಿನ ಸುದ್ದಿ ಕೇಳಿ ಮಗಳು ಪೂರ್ಣಿಮಾ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಾಯಿ-ಮಗಳ ಸಾವಿನ ಸುದ್ದಿ ಕೇಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸರಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ