Site icon Vistara News

Moral policing: ರಷ್ಯದಿಂದ ಬಂದವನು ಇಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಿದ! ಆರೋಪಿ ಬಂಧನ

moral policing kolar

ಕೋಲಾರ: ನೈತಿಕ ಪೊಲೀಸ್‌ಗಿರಿ (Moral policing) ಮಾಡಿದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಜಾಕೀರ್ ಅಹಮದ್ ಎಂದು ಗುರುತಿಸಲಾಗಿದೆ.

ಈತ ರಷ್ಯಾದಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಎಂದು ಗೊತ್ತಾಗಿದೆ. ರಜೆ ಎಂದು ಈತ ಬೆಂಗಳೂರಿನ ಗೋವಿಂದಪುರದಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದ. ಅನ್ಯಧರ್ಮೀಯ ಯುವಕನ ಜೊತೆಗೆ ಬುರ್ಖಾ ಧರಿಸಿದ ಯುವತಿ ಹೋಗುತ್ತಿರುವುದು ಕಂಡಿದ್ದ ಈತ ಅವರ ಬೈಕ್ ಅಡ್ಡಗಟ್ಟಿ ಯುವತಿಯನ್ನು ನಿಂದಿಸಿ ಗಲಾಟೆ ಎಬ್ಬಿಸಿದ್ದ.

ಯುವತಿ ಮತ್ತು ಬೈಕ್‌ನಲ್ಲಿದ್ದ ಯುವಕ ಇಬ್ಬರೂ ಪರಿಚಿತರಾಗಿದ್ದು, ಇಬ್ಬರೂ ಕಂಪನಿಯೊಂದರ ಇಂಟರ್‌ವ್ಯೂಗೆ ಹೋಗಿದ್ದರು. ನಂತರ ಯುವತಿಯನ್ನು ಬೈಕ್‌ನಲ್ಲಿ ಮನೆಗೆ ಡ್ರಾಪ್ ಮಾಡಲು ಯುವಕ ಹೋಗುತ್ತಿದ್ದ. ಈ ಸಂದರ್ಭದಲ್ಲಿ ಅಡ್ಡಗಟ್ಟಿ ಬುರ್ಖಾ ತೆಗೆಯುವಂತೆ ಜಾಕೀರ್ ಅಹಮದ್ ಕೆಟ್ಟದಾಗಿ ನಿಂದಿಸಿದ್ದ. ಸದ್ಯ ಜಾಕೀರ್ ಮೇಲೆ ಎಫ್ಐಆರ್ ದಾಖಲಾಗಿದೆ. ಪೂರ್ವ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಕ್ರವರ್ತಿ ಸೂಲಿಬೆಲೆ ಮೇಲೆ ದೂರು ದಾಖಲು

ಶಿವಮೊಗ್ಗ: ವಾಗ್ಮಿ, ಹಿಂದುತ್ವವಾದಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಹಿಳೆ ವಿರುದ್ಧ ಅವಮಾನಕಾರಿಯಾಗಿ ಕಮೆಂಟ್‌ ಮಾಡಿದ ವಿಚಾರದಲ್ಲಿ ಪ್ರಕರಣ ದಾಖಲಾಗಿದೆ.

IPC ಸೆಕ್ಷನ್ 504, 509ರ ಅಡಿಯಲ್ಲಿ FIR ದಾಖಲು ಮಾಡಲಾಗಿದೆ. ಆ. 24ರಂದು ಸೌಗಂಧಿಕ ರಘುನಾಥ್ ಎಂಬವರು ದೂರು ನೀಡಿದ್ದರು. ಇವರು ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷೆಯಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ಕಾಮೆಂಟ್ ವಿನಿಮಯ ನಡೆದಿದೆ. ಚಂದ್ರಯಾನದ ಕುರಿತ ಪೋಸ್ಟ್‌ಗೆ ಸೌಗಂಧಿಕ ಕಾಮೆಂಟ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ʼಅವರ ಸಂಘಟನೆಯ ಕಾರ್ಯಕರ್ತ ದೇವರಿಗೆ ಪೂಜೆ ಸಲ್ಲಿಸಿದ್ದು ಅವರು ಹಾಕ್ಕೊಂಡ್ರೆ ನಿನಗೆ ಯಾಕೆ, ಎಲ್ಲಿ ಉರಿ ಬಂತೋ ಗೊತ್ತಾಗಿಲ್ಲʼ ಎಂದು ʼಚಕ್ರವರ್ತಿ ಸೂಲಿಬೆಲೆʼ ಎಂಬ ಹೆಸರಿನ ಅಕೌಂಟ್‌ನಿಂದ ಕಾಮೆಂಟ್ ಮಾಡಲಾಗಿದೆ. ಇದಕ್ಕೆ ಕಾಮೆಂಟ್ ಬಾಕ್ಸ್‌ನಲ್ಲೇ ಸೌಗಂಧಿಕ ಉತ್ತರ ಕೂಡ ನೀಡಿದ್ದಾರೆ.

ನಂತರ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸೌಗಂಧಿಕ ರಘುನಾಥ್ ದೂರು ನೀಡಿದ್ದಾರೆ. ವಿನೋಬ ನಗರ ಪೊಲೀಸರಿಗೆ ದೂರು IPC ಸೆಕ್ಷನ್ 504, 509ರ ಅಡಿಯಲ್ಲಿ ಸೌಗಂಧಿಕ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: moral policing: ಅನ್ಯಕೋಮಿನ ಯುವತಿ ಜತೆ ಇದ್ದ ಯುವಕನಿಗೆ ಮಾರಣಾಂತಿಕ ಹಲ್ಲೆ! ಪೊಲೀಸರೆದುರೇ ನೈತಿಕ ಪೊಲೀಸ್‌ಗಿರಿ

Exit mobile version