ಕೋಲಾರ: ಟಿಡಿಪಿ ಶಾಸಕ ಬೆಂಬಲಿಗನ ಕೊಲೆಗೆ (Attempt to murder case) ಸ್ಕೆಚ್ ಹಾಕಿದ್ದಕ್ಕೆ, ಕೋಲಾರ ಪೊಲೀಸ್ ಪೇದೆ ವಿನಾಯಕ ಎಂಬಾತನನ್ನು ಆಂಧ್ರಪ್ರದೇಶದ ಗಂಗವರಂ ಪೊಲೀಸರು ಬಂಧಿಸಿದ್ದಾರೆ. ವಿನಾಯಕ ಕೋಲಾರ ಪೊಲೀಸ್ ಠಾಣೆ ಅಪರಾಧ ಕಾನ್ಸ್‌ಟೇಬಲ್ ಆಗಿದ್ದು, ಟಿಡಿಪಿ ಶಾಸಕನ ಬೆಂಬಲಿಗನನ್ನು ಕೊಲ್ಲಲು ಸುಪಾರಿ ನೀಡಿದ್ದ (Murder case) ಎನ್ನಲಾಗಿದೆ.
ಇಚರ್ ವಾಹನದಿಂದ ಅಪಘಾತ ಮಾಡುವಂತೆ ವಿನಾಯಕ ಐಡಿಯಾ ಕೊಟ್ಟಿದ್ದ. ಕೊಲೆಗೆ ಯೋಜನೆ ರೂಪಿಸಿ , ಅಪಘಾತಕ್ಕೆ ವಾಹನವನ್ನು ಸಿದ್ಧಪಡಿಸಿದ್ದ. ಆದರೆ ಅದೃಷ್ಟವಶಾತ್ ಟಿಡಿಪಿ ಕಾರ್ಯಕರ್ತ ಪ್ರಾಣಾಪಾಯದಿಂದ ಪಾರಾಗಿದ್ದರು. ಲಕ್ಕಹಳ್ಳಿ ಶ್ರೀನಿವಾಸ ರೆಡ್ಡಿ ಹಾಗೂ ಪೇದೆ ವಿನಾಯಕ ಸೇರಿ ಟಿಡಿಪಿ ನಾಯಕ ರವಿಚಂದ್ರ ಗುಪ್ತರ ಕಾರಿಗೆ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದರು. ಸದ್ಯ ಸುಪಾರಿ ನೀಡಿದ ವಿನಾಯಕ ವಿರುದ್ಧ ಗಂಗವಾರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Accident Case : ಈಜಲು ಚಂಪಕ ಸರಸು ಕಲ್ಯಾಣಿಗೆ ಜಿಗಿದ ಎಂಜಿನಿಯರ್ ಶವವಾಗಿ ಹೊರ ಬಂದ
ತುಮಕೂರಿನಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದವನ ಮೇಲೆ ಅಟ್ಯಾಕ್
ಹಾಡಹಗಲೇ ಬೈಕ್‌ನಲ್ಲಿ ಹೋಗುತ್ತಿದ್ದವನ ಮೇಲೆ ಅಟ್ಯಾಕ್ ಮಾಡಿ ಕೊಲೆಗೆ ಯತ್ನಿಸಲಾಗಿದೆ. ದುಷ್ಕರ್ಮಿಗಳು ಸ್ಕಾರ್ಫಿಯೋ ಕಾರಿನಲ್ಲಿ ಬಂದು ಗುಬ್ಬಿ ಪಟ್ಟಣದ ಮನೋಜ್ (29) ಎಂಬಾತನ ಕೊಲೆಗೆ ಯತ್ನಿಸಲಾಗಿದೆ. ಕೊಲೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್ @ ಡೆಲ್ಲಿ ಸೀನಾ, ನಾಗರಾಜು, ದುಷ್ಯಾಂತ, ದರ್ಶನ್ ಬಂಧಿತ ಆರೋಪಿಗಳು.
ಕಳೆದ ಎರಡು ವರ್ಷಗಳ ಹಿಂದೆ ಹಣಕಾಸು ವಿಚಾರಕ್ಕೆ ಗುಬ್ಬಿ ಡಿಎಸ್‌ಎಸ್ ಮುಖಂಡ ನರಸಿಂಹ ಮೂರ್ತಿ@ ಕುರಿ ಮೂರ್ತಿಯನ್ನು ಗುಬ್ಬಿ ಪಟ್ಟಣದ ಬಿ.ಹೆಚ್ ರಸ್ತೆಯಲ್ಲಿ ಹಾಡಹಗಲೇ ಕೊಲೆ ಮಾಡಲಾಗಿತ್ತು. ಈ ಬಳಿಕ ನರಸಿಂಹ ಮೂರ್ತಿ ಪುತ್ರ ಮನೋಜ್ ಕೊಲೆಗೆ ಯತ್ನಿಸಲಾಗಿತ್ತು.
ಇದೇ ಬುಧವಾರ ಗುಬ್ಬಿ ತಾಲೂಕು ಕಚೇರಿ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಮನೋಜ್ ಮೇಲೆ ಅಟ್ಯಾಕ್ ಮಾಡಲಾಗಿತ್ತು. ಈ ವೇಳೆ ದುಷ್ಕರ್ಮಿಗಳ ಕೈಗೆ ಸಿಗದೇ ಮನೋಜ್ ತಪ್ಪಿಸಿಕೊಂಡಿದ್ದ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ ಗುಬ್ಬಿ ಪೊಲೀಸರು, ಸ್ಕಾರ್ಫಿಯೋ ಕಾರಿನಲ್ಲಿ ಬಂದು ಕೊಲೆಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ. ಪೊಲೀಸ್ ತನಿಖೆ ವೇಳೆ ಮೇಲ್ನೋಟಕ್ಕೆ ಹಳೆ ವೈಷಮ್ಯಕ್ಕೆ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ