ಕೋಲಾರ: ಮೊದಲ ದಿನದ ಪಂಚರತ್ನ ಕಾರ್ಯಕ್ರಮವನ್ನು ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಅವರು ನಿನ್ನೆ ಮುಕ್ತಾಯಗೊಳಿಸಿದ್ದು, ಮಿಟ್ಟೂರಿನಲ್ಲಿ ಗ್ರಾಮವಾಸ್ತವ್ಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎಚ್‌ಡಿಕೆ ಅವರಿಗಾಗಿ ಹಾಕಲಾದ ವಿಶೇಷ ಜರ್ಮನ್ ಟೆಂಟ್‌ನಲ್ಲಿ ಅವರು ವಾಸ್ತವ್ಯ ಹೂಡಿದರು. ಕುಮಾರಸ್ವಾಮಿಯವರಿಗೆ ಎಂಎಲ್‌ಸಿ ಬೋಜೆಗೌಡ, ಗೋವಿಂದರಾಜು ಸೇರಿದಂತೆ ಸ್ಥಳೀಯ ಮುಖಂಡರು ಸಾಥ್ ನೀಡಿದರು. ಅವರಿಗೆ ಸಾಮಾನ್ಯ ಮಂಚ, ಹಾಸಿಗೆ ದಿಂಬು ವ್ಯವಸ್ಥೆ ಮಾಡಲಾಗಿತ್ತು.
ಇಂದು ಬಂಗಾರಪೇಟೆಯಲ್ಲಿ
ಇಂದು ಕೋಲಾರ ಜಿಲ್ಲೆ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ದಿನದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಬಂಗಾರಪೇಟೆ ಕ್ಷೇತ್ರದ ತಂಬಿಹಳ್ಳಿಯಿಂದ ರಥಯಾತ್ರೆ ಆರಂಭವಾಗಲಿದ್ದು, 10.30ಕ್ಕೆ ನಾಯಕನಳ್ಳಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಬಂಗಾರಪೇಟೆ ನಗರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಮಧ್ಯಾಹ್ನ 1.40ರಿಂದ 2.40ರ ವರೆಗೂ ಊಟದ ವಿರಾಮವಿದ್ದು, ಮಧ್ಯಾಹ್ನ 2.40ಕ್ಕೆ ಕಾಮಸಮುದ್ರದಲ್ಲಿ, ಸಂಜೆ 4.20ಕ್ಕೆ ಬೂದಿಕೋಟೆಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಸಂಜೆ 6ಕ್ಕೆ ಎರಡನೇ ದಿನದ ರಥಯಾತ್ರೆ ಮುಕ್ತಾಯಗೊಳ್ಳಲಿದೆ. ಸಂಜೆ ಮಾಗೇರಿಯಲ್ಲಿ ಸಭೆ ಮತ್ತು ಗ್ರಾಮ ವಾಸ್ತವ್ಯ ನಡೆಯಲಿದೆ.
ಇದನ್ನೂ ಓದಿ | ಇಂದು ಕುಮಾರಸ್ವಾಮಿ ಕನಸಿನ ಕಾರ್ಯಕ್ರಮ ಪಂಚರತ್ನ ರಥಯಾತ್ರೆ ಆರಂಭ