ಕೋಲಾರ: ಕೋಲಾರದಲ್ಲಿ ಬಾಲಕಿಯ ಮೇಲೆ ಯುವಕನೊಬ್ಬ (POCSO Case) ಅತ್ಯಾಚಾರವೆಸಗಿದ್ದಾನೆ. ಕೋಲಾರದ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಘಟನೆ ನಡೆದಿದೆ. 7 ವರ್ಷದ ಬಾಲಕಿಯ ಮೇಲೆ 21ರ ಸಂದೀಪ್ ಎಂಬಾತ ಈ ಕೃತ್ಯ ನಡೆಸಿದ್ದಾನೆ.
ನಿನ್ನೆ ಶನಿವಾರ ಬಾಲಕಿ ಮನೆಯಲ್ಲಿ ಆಡುವಾಡುತ್ತಿದ್ದಳು. ಈ ವೇಳೆ ಬಾಲಕಿಯ ತಂದೆ ಜತೆಗೆ ಮಾತನಾಡುವ ನೆಪದಲ್ಲಿ ಬಂದಿದ್ದ ಈ ಸಂದೀಪ್, ಬಳಿಕ ಮೊಬೈಲ್ ಆಸೆ ತೋರಿಸಿ ಕರೆದಿದ್ದಾನೆ. ಸಂದೀಪ್ ಪರಿಚಯಸ್ಥನೇ ಆಗಿದ್ದರಿಂದ ಬಾಲಕಿ ಮೊಬೈಲ್ ನೋಡಲು ಆತನೊಂದಿಗೆ ಹೋಗಿದ್ದಾಳೆ.
ಮನೆಯ ಮಹಡಿ ಮೇಲೆ ಕರೆದುಕೊಂಡು ಹೋದ ಸಂದೀಪ್ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಬಾಲಕಿ ನೋವಿನಿಂದ ಕೂಗಿಕೊಂಡಾಗ ಆಕೆಯ ಬಾಯಿಮುಚ್ಚಿ ದೌರ್ಜನ್ಯ ನಡೆಸಿದ್ದಾನೆ. ಅತ್ಯಾಚಾರ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ವಾಪಸ್ ಮನೆಗೆ ಬಂದ ಬಾಲಕಿ ಮಂಕಾಗಿದ್ದಾಳೆ. ಆಕೆ ನೋವಿನಿಂದ ಒದ್ದಾಡುತ್ತಿದ್ದನ್ನು ಗಮನಿಸಿದ ಬಾಲಕಿ ತಾಯಿ ವಿಚಾರಿಸಿದ್ದಾರೆ. ಆಗ ಬಾಲಕಿ ನಡೆದಿದ್ದನ್ನು ಹೇಳಿದ್ದಾಳೆ. ಕೂಡಲೇ ಅಸ್ವಸ್ಥಳಾಗಿದ್ದ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ಕೃತ್ಯದ ಸಂಬಂಧ ಸಂತ್ರಸ್ತೆಯ ಪೋಷಕರು ಮುಳಬಾಗಿಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೌರ್ಜನ್ಯ ನಂತರ ಪರಾರಿಯಾಗಿರುವ ಆರೋಪಿಗಾಗಿ ತಲಾಶೆ ಹಾಕಿದ್ದಾರೆ.
ಇದನ್ನೂ ಓದಿ: Heart Attack : ಬೈಕ್‌ನಲ್ಲಿ ತೆರಳುತ್ತಿದ್ದಾಗಲೇ ಬಡಿತ ನಿಲ್ಲಿಸಿದ ಹೃದಯ; ಯೋಧನ ಸಾವಿನ ಕೊನೆ ಕ್ಷಣ ಸೆರೆ
ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲು
ಬೆಂಗಳೂರು: ಎಚ್ಎಸ್ಆರ್ ಲೇಔಟ್‌ನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ (Physical Abuse) ಸಂಬಂಧ ಯುವತಿ ಸ್ನೇಹಿತ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ. ಶನಿವಾರ ತಡರಾತ್ರಿ 1 ಗಂಟೆಗೆ ಅತ್ಯಾಚಾರ ಯತ್ನ ನಡೆದ ಬಳಿಕ ಸಂತ್ರಸ್ತೆ ಯುವತಿಯ ಸ್ನೇಹಿತೆ ದೂರುದಾರನಿಗೆ ಕರೆ ಮಾಡಿದ್ದಳು. ಸ್ಥಳಕ್ಕೆ ಹೋಗಿ ನೋಡಿದಾಗ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಆಕೆಯ ಸ್ನೇಹಿತ ನೀಡಿದ ದೂರಿನ ಮೇರೆಗೆ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತೆ ಯುವತಿಯಿಂದ ಎಮರ್ಜೆನ್ಸಿ ಕರೆ ಮತ್ತು ಲೊಕೇಶನ್ ಬಂದಿದೆ. ಆದರೆ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ಸ್ನೇಹಿತೆ ದೂರುದಾರನಿಗೆ ಹೇಳಿದ್ದ. ಲೊಕೇಶನ್ ಆಧರಿಸಿ ಹೊಸೂರು ಸರ್ವಿಸ್ ರಸ್ತೆ ಬಳಿ ಸ್ನೇಹಿತ ಹೋಗಿದ್ದ. ಗಿರಿಯಾಸ್ ಶೋರೂಮ್ ಹಿಂಭಾಗದ ಲಾರಿ ನಿಲ್ಲಿಸುವ ಜಾಗಕ್ಕೆ ಬಂದು ನೋಡಿದ್ದ. ಯುವತಿ ಬೆತ್ತಲೆಯಾಗಿ ಲಾರಿಯ ಹಿಂಭಾಗದಲ್ಲಿ ಬಿದ್ದಿದ್ದಳು. ಆಕೆಯ ಮೇಲೆ ಒಂದು ರೆಡ್ ಜಾಕೆಟ್ ಮಾತ್ರ ಇತ್ತು. ಈ ವೇಳೆ ದೂರುದಾರ ಸ್ನೇಹಿತ ತನ್ನ ಬಟ್ಟೆಯಿಂದ ಆಕೆಯ ದೇಹ ಮುಚ್ಚಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಮತ್ತೊಬ್ಬ ಸ್ನೇಹಿತ ಕೂಡ ಮೊಬೈಲ್‌ನಿಂದ ಹೋಗಿದ್ದ ಮೆಸೇಜ್ ಆಧಾರದ ಮೇಲೆ ಸ್ಥಳಕ್ಕೆ ಬಂದಿದ್ದ. ಇಬ್ಬರು ಸೇರಿಕೊಂಡು ಕಾರ್‌ನ ಶೀಟ್ ಕವರ್‌ನಿಂದ ಆಕೆಯ ದೇಹವನ್ನು ಮುಚ್ಚಿಕೊಂಡು ಕಾರಿನಲ್ಲಿ ಮಲಗಿಸಿದ್ದಾರೆ. ಅಷ್ಟರಲ್ಲಿ, ಸ್ಥಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಕೇವಲ ಪ್ಯಾಂಟ್‌ನಲ್ಲಿ ನಿಂತಿದ್ದ. ಗಾಬರಿಯಲಿದ್ದ ಆತನ ಮುಖಕ್ಕೆ ಪರಚಿರುವಂತಹ ಗಾಯಗಳಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರ ಆರೋಪಿಯನ್ನು ಹಿಡಿದುಕೊಳ್ಳಲು ಹೋದಾಗ ಆತ ಸ್ಥಳದಿಂದ ಓಡಿ ಹೋಗಿದ್ದಾನೆ. ನಂತರ ಆಸ್ವಸ್ಥಗೊಂಡಿದ್ದ ಯುವತಿಯನ್ನು ಸ್ನೇಹಿತನ ಕಾರಿನಲ್ಲಿ ಬೊಮ್ಮಸಂದ್ರ ಖಾಸಗಿ ಆಸ್ಪತ್ರೆಗೆ ದಾಖಲು ದೂರುದಾರ ಮಾಡಿದ್ದ. ಕಾರಿನಲ್ಲಿ ಯುವತಿ ಬಳಿ ಘಟನೆ ಬಗ್ಗೆ ಸ್ನೇಹಿತರು ಕೇಳಿದ್ದರು. ಆಗ ಅಪರಿಚಿತ ವ್ಯಕ್ತಿ, ಅತ್ಯಾಚಾರ ಮಾಡಲು ಯತ್ನಿಸಿರೋದಾಗಿ ಯುವತಿ ಹೇಳಿಕೆ ನೀಡಿದ್ದಾಳೆ. ಘಟನೆ ಬಗ್ಗೆ ದೂರುದಾರ ಆಕೆಯ ತಂದೆ-ತಾಯಿಗೆ ವಿಷಯ ತಿಳಿಸಿದ್ದಾರೆ.
ಯುವತಿ ಪ್ರಾಣ ಉಳಿಸಿದ SOS ಬಟನ್
ಎಚ್ಎಸ್‌ಆರ್ ಲೇಔಟ್ ಯುವತಿ ಅತ್ಯಾಚಾರ ಪ್ರಕರಣದಲ್ಲಿ SOS ಬಟನ್ ಯುವತಿ ಪ್ರಾಣ ಉಳಿಸಿದೆ ಎಂಬ ವಿಷಯ ತಿಳಿದುಬಂದಿದೆ. ಮೊಬೈಲ್‌ನಲ್ಲಿ ಸ್ವಿಚ್ ಆಫ್ ಬಟನ್ ಪ್ರೆಸ್ ಮಾಡಿದಾಗ SOS ಆಪ್ಷನ್ ಕಾಣಲಿದೆ. ಅದಕ್ಕೆ ಎಮೆರ್ಜೆನ್ಸಿ ನಂಬರ್ ಆ್ಯಡ್ ಮಾಡಬಹುದು. ಅದನ್ನು ಪ್ರೆಸ್ ಮಾಡಿದಾಗ ಆ್ಯಡ್ ಮಾಡಿದ ನಂಬರ್‌ಗೆ ನಿರಂತರ ಕರೆ ಹಾಗೂ ಲೊಕೇಶನ್ ಶೇರ್ ಆಗುತ್ತೆ.
ಹೀಗಾಗಿ SOS ನಲ್ಲಿ ತಂದೆ ಹಾಗೂ ಸ್ನೇಹಿತೆ ನಂಬರ್ ಅನ್ನು ಸಂತ್ರಸ್ತ ಯುವತಿ ಆ್ಯಡ್ ಮಾಡಿದ್ದಳು. ಹೀಗಾಗಿ ತಕ್ಷಣ ಸ್ನೇಹಿತರಿಗೆ ಕರೆ ಹೋಗಿದೆ. ಲೊಕೇಶನ್ ಆಧರಿಸಿ ಬಂದು ಸ್ನೇಹಿತರು ಯುವತಿಯ ರಕ್ಷಣೆ ಮಾಡಿದ್ದಾರೆ. ಅರೆನಗ್ನ ಸ್ಥಿತಿಯಲ್ಲೇ ಯುವತಿಯನ್ನು ಆರೋಪಿ ಬಿಟ್ಟು ತೆರಳಿದ್ದ. ದೌರ್ಜನ್ಯ ಎಸಗಿದಾಗ ಯುವತಿ ಕೂಡ ಪ್ರತಿರೋಧ ಒಡ್ಡಿದ್ದಳು. ಇದರಿಂದ ಆರೋಪಿ ಹೆದರಿ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದ. ಸದ್ಯ ಹೆಬ್ಬಗೋಡಿ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ