Site icon Vistara News

Electrocution | ವಿದ್ಯುತ್‌ ತಂತಿ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ರಹಸ್ಯವಾಗಿ ಮಣ್ಣು‌ಮಾಡಲು ಹೋಗಿ ಸಿಕ್ಕಿಬಿದ್ದ ಹೊಲದ ಮಾಲೀಕ

Electrocution

ಕೋಲಾರ: ಹೊಲದಲ್ಲಿ ಹಾಕಿದ್ದ ವಿದ್ಯುತ್‌ ತಂತಿ ಬೇಲಿ ಸ್ಪರ್ಶಿಸಿ(Electrocution) ಕಾಡಾನೆಯೊಂದು ಮೃತಪಟ್ಟ ಘಟನೆ ಕೋಲಾರ-ಆಂಧ್ರಪ್ರದೇಶದ ಗಡಿ ಗ್ರಾಮದಲ್ಲಿ ‌ನಡೆದಿದೆ. ಇದರಿಂದ ಗಾಬರಿಗೊಂಡ ಹೊಲದ ಮಾಲೀಕ ರಹಸ್ಯವಾಗಿ ಮೃತ ಆನೆಯನ್ನು ಮಣ್ಣು‌ಮಾಡಲು ಮುಂದಾದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪಲಮನೇರು ಮಂಡಲದ ಕೌಂಡಿನ್ಯ ಅಭಯಾರಣ್ಯದ ಸಮೀಪದ ನಾಗಿರೆಡ್ಡಿಪಲ್ಲಿಯಲ್ಲಿ ಸುರೇಶ್ ಎಂಬ ರೈತನ ಜಮೀನಿನಲ್ಲಿ ಅಳವಡಿಸಿದಿದ್ದ ವಿದ್ಯುತ್‌ ತಂತಿ ಬೇಲಿ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿದೆ. ಹೀಗಾಗಿ ಗಾಬರಿಗೊಂಡ ಜಮೀನಿನ ಮಾಲೀಕ, ಯಾರಿಗೂ ಗೊತ್ತಾಗದಂತೆ ಆನೆಯನ್ನು ಹೂಳಲು ಯತ್ನಿಸಿದ್ದಾನೆ.

ಮೃತ ಗಜರಾಜನನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಈ ವಿಷಯ ತಿಳಿದು ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆನೆಯ ಸಾವಿನ ಬಗ್ಗೆ ವಿಚಾರಿಸಿ, ಜಮೀನಿನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Electricution | ವಿದ್ಯುತ್ ಸ್ಪರ್ಶದಿಂದ 75 ಆನೆಗಳ ಸಾವು: ದುರಂತ ತಪ್ಪಿಸಲು ಮಾರ್ಗಸೂಚಿ, ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

Exit mobile version