Site icon Vistara News

Koppala News: ಕೊಪ್ಪಳದ ಹನುಮನಾಳ ಗ್ರಾಮದ ನರೇಗಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ

Koppala Free health checkup

ಕನಕಗಿರಿ: ತಾಲೂಕಿನ ಹುಲಿಹೈದರ್ ಗ್ರಾ.ಪಂ ವ್ಯಾಪ್ತಿಯ ಹನುಮನಾಳ ಗ್ರಾಮದಲ್ಲಿ ಮನರೇಗಾ (MNarega) ಕಾರ್ಮಿಕರಿಗೆ ಶುಕ್ರವಾರ ಕಾಮಗಾರಿ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ (Health checkup) ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಗ್ರಾ.ಪಂ. ಹಾಗೂ ಕರ್ನಾಟಕ ಆರೋಗ್ಯ ಅಮೃತ ಅಭಿಯಾನ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವೀಂದ್ರ ಕುಲಕರ್ಣಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೂಲಿ ಕಾರ್ಮಿಕರಿಗೆ ಕೆಲಸ ಕೊಡುವುದರೊಂದಿಗೆ ಅವರ ಆರೋಗ್ಯವನ್ನು ಕಾಪಾಡುವುದು ಸಹ ನಮ್ಮ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಂಡು ತಪಾಸಣೆ ಮಾಡಲಾಗುತ್ತಿದೆ, ಪ್ರತಿಯೊಬ್ಬ ಕೂಲಿಕಾರ್ಮಿಕರು ಈ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Airtel and Jio Offer: ಏರ್‌ಟೆಲ್, ಜಿಯೋದಿಂದ ಸಖತ್ ಆಫರ್ಸ್, ಯಾವ ಪ್ಲ್ಯಾನ್‌‌ನಲ್ಲಿ ಏನೆಲ್ಲ ಲಾಭಗಳಿವೆ?

ಕೂಲಿಕಾರ್ಮಿಕರಿಗೆ ನರೇಗಾ ಯೋಜನೆಯಡಿ ಇರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಸೌಲಭ್ಯಗಳ ಕುರಿತು ತಾಲೂಕು ಐಇಸಿ ಸಂಯೋಜಕ ಶಿವಕುಮಾರ್ ಕೆ ಮಾಹಿತಿ ನೀಡಿದರು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾರ್ಮಿಕರ ಬಿಪಿ, ಶುಗರ್ ಸೇರಿದಂತೆ ಇತರೆ ಸಣ್ಣಪುಟ್ಟ ಖಾಯಿಲೆಗಳ ಕುರಿತು ತಪಾಸಣೆ ನಡೆಸಿ, ಉಚಿತವಾಗಿ ಔಷಧಗಳನ್ನು ವಿತರಿಸಿದರು.

ಇದನ್ನೂ ಓದಿ: Murder Case: ಪತ್ನಿಯ ಅನೈತಿಕ ಸಂಬಂಧಕ್ಕೆ ಬಲಿಯಾದ ಪತಿ; ಪ್ರಿಯಕರನ ಜತೆ ಸೇರಿ ಕೊಂದವಳು ಈಗ ಸೆರೆ

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಶಿವಶಂಕ್ರಪ್ಪ ಚೆನ್ನದಾಸರ, ಸದಸ್ಯರಾದ ಹನುಮಮ್ಮ, ಅಮರೇಶಪ್ಪ, ಮುಖಂಡರಾದ ಹುಡುಚಪ್ಪ ಪೂಜಾರ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಮಾರುತಿ, ಕಸ್ತೂರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version