Site icon Vistara News

ಬಿ.ಎಸ್‌. ಯಡಿಯೂರಪ್ಪ ನಮ್ಮ ಪಿತಾಮಹ: ಹಾಡಿ ಹೊಗಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ

JP Nadda Praises BS Yediyurappa in koppal

ಕೊಪ್ಪಳ: ರಾಜ್ಯದಲ್ಲಿ ಅತ್ಯಂತ ತಳಮಟ್ಟದಿಂದಲೂ ಬಿಜೆಪಿಯನ್ನು ಕಟ್ಟಿಬೆಳೆಸಿದ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಪಿತಾಮಹ ಇದ್ದಂತೆ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಡಿ ಹೊಗಳಿದ್ದಾರೆ.

ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಾಲಯಗಳ ಉದ್ಘಾಟನೆ ಹಾಗೂ ಮೂರು ಜಿಲ್ಲಾ ಕಾರ್ಯಾಲಯಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾಷಣ ಆರಂಭಕ್ಕೂ ಮುನ್ನ, ಕರ್ನಾಟಕದ ಎಲ್ಲರಿಗಿಂತ ಹಿರಿಯ ನಾಯಕ ಹಾಗೂ ನಮ್ಮ ಪಿತಾಮಹ ಬಿ.ಎಸ್‌. ಯಡಿಯೂರಪ್ಪ ಅವರೇ ಎಂದು ಸಂಬೋಧಿಸಿದರು. ಈ ಮಾತನ್ನು ಹೇಳುತ್ತಿದ್ದಂತೆಯೇ ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು

ಕರ್ನಾಟಕದಲ್ಲಿ ಈ ಹಿಂದೆ ಕಾರ್ಯಕರ್ತರು ಪರಿಶ್ರಮ ಪಟ್ಟಿದ್ದರ ಕುರಿತು ಯಡಿಯೂರಪ್ಪ ಅವರು ಭಾಷಣದಲ್ಲಿ ಮಾತನಾಡಿದ್ದನ್ನು ನೆನೆದ ಜೆ.ಪಿ. ನಡ್ಡಾ, ಯಡಿಯೂರಪ್ಪ ಅವರು ನೆನಪಿಸಿದಂತೆ, ಒಂದು ಸಮಯದಲ್ಲಿ ರೆಸ್ಟ್‌ ಹೌಸ್‌, ಸರ್ಕ್ಯೂಟ್‌ ಹೌಸ್‌ನಲ್ಲಿ ನಮನ್ನು ಕೂರಲೂ ಬಿಡುತ್ತಿರಲಿಲ್ಲ. ಕಾರ್ಯಕರ್ತರ ಮನೆಗಳಲ್ಲಿ ಸಭೆಗಳು ನಡೆಯುತ್ತಿದ್ದವು. ಆದರೆ ಯಡಿಯೂರಪ್ಪ ಅವರಂತಹ ನಾಯಕರ ಪರಿಶ್ರಮದಿಂದಾಗಿ ರಾಜ್ಯದಲ್ಲಿ ಪಕ್ಷ ಇಷ್ಟು ಬೆಳೆದಿದೆ. ಒಂದೇ ದಿನ ಹತ್ತು ಕಾರ್ಯಾಲಯಗಳ ಉದ್ಘಾಟನೆ, ಮೂರು ಕಾರ್ಯಾಲಯಗಳ ಶಂಕು ಸ್ಥಾಪನೆ ಮಾಡುವ ಹಂತಕ್ಕೆ ಬಂದಿದ್ದೇವೆ ಎಂದರು.

ಬಿಜೆಪಿ ಆಡಳಿತದಲ್ಲಿ ಯಾರಿಗೂ ತುಷ್ಠೀಕರಣ ಇಲ್ಲ, ಆದರೆ ಎಲ್ಲರಿಗೂ ನ್ಯಾಯ ಸಿಗುತ್ತದೆ. ಒಂದೇ ದೇಶ, ಒಬ್ಬರೇ ಪ್ರತಿನಿಧಿ ಎಂಬ ಭಾವನೆಯಲ್ಲಿ ನಡೆಯುತ್ತೇವೆ. ರಾಮ ಜನ್ಮಭೂಮಿ ನಿರ್ಮಾಣದ ಸಂಕಲ್ಪ ಮಾಡಿದ್ದು ಬಿಜೆಪಿ. ನಮಗೆ ಪಕ್ಷವೇ ಕುಟುಂಬ. ಆದರೆ ಬೇರೆ ಕಡೆಗಳಲ್ಲಿ ಕುಟುಂಬವೇ ಪಕ್ಷವಾಗಿದೆ. ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸ ಮಾಡಿ ಅದರ ರಿಪೋರ್ಟ್‌ ಕಾರ್ಡ್‌ ಹಿಡಿದುಕೊಂಡು ಚುನಾವಣೆಗೆ ಹೋಗುವ ತಾಕತ್ತು ಯಡಿಯೂರಪ್ಪ, ಬೊಮ್ಮಾಯಿ ಅವರಲ್ಲಿದೆ ಎಂದರು.

ಇತ್ತೀಚೆಗೆ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ಭಾರತ್‌ ಜೋಡೊ ಯಾತ್ರೆ ನಡೆಸಿದರು. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪತ್ರಕರ್ತರು ಕೇಳಿದರು. ಇದು ಭಾರತ್‌ ತೋಡೊ ಯಾತ್ರೆ, ಇದು ಪ್ರಾಯಶ್ಚಿತ್ತ ಯಾತ್ರೆ. ಇವರ ಪೂರ್ವಜನರು ಭಾರತವನ್ನು ತುಂಡು ಮಾಡುವಲ್ಲಿ ಯಾವುದೇ ಪ್ರಯತ್ನವನ್ನೂ ಬಿಟ್ಟಿಲ್ಲ. ಭಾರತೀಯ ಜನತಾ ಪಕ್ಷವು ಎಲ್ಲ ಸಮಯದಲ್ಲೂ ದೇಶವನ್ನು ಒಂದುಗೂಡಿಸಿದೆ ಎಂದರು.

ಇದನ್ನೂ ಓದಿ | J.P. Nadda | ಕರ್ನಾಟಕದಲ್ಲಿ ಕಾಂಗ್ರೆಸ್‌ ಉಸಿರಾಟವನ್ನು ನಿಲ್ಲಿಸಿ: ಕೊಪ್ಪಳದಲ್ಲಿ ಬಿ.ಎಸ್‌. ಯಡಿಯೂರಪ್ಪ ಕರೆ

Exit mobile version