ಕೊಪ್ಪಳ: ಇಲ್ಲಿನ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದಲ್ಲಿ (Koppal) ಭಾರಿ ಮಳೆ ಹಿನ್ನೆಲೆಯಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ನಾಲ್ವರು ಮಹಿಳೆಯರು ಶನಿವಾರ ಕೊಚ್ಚಿ ಹೋಗಿದ್ದರು. ಶೋಧ ಕಾರ್ಯ ನಡೆಸಿದ ಅಗ್ನಿಶಾಮಕ ದಳ, ಪೊಲೀಸರಿಗೆ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಗಿರಿಜಮ್ಮ(32), ಭುವನೇಶ್ವರಿ (40) ಮೃತ ದುರ್ದೈವಿಗಳು. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಗಿರಿಜಾ ಮಾಲಿಪಾಟೀಲ್(32), ಭುವನೇಶ್ವರಿ ಪೊಲೀಸ್ ಪಾಟೀಲ್(40), ಪವಿತ್ರಾ ಪೊಲೀಸ್ ಪಾಟೀಲ್(45), ವೀಣಾ ಮಾಲಿಪಾಟೀಲ್(19) ಎಂಬುವವರು ಶನಿವಾರ ಸಂಜೆ ಕೆಲಸಕ್ಕೆ ಹೋಗಿ ಮರಳಿ ಗ್ರಾಮಕ್ಕೆ ಬರುವಾಗ ನೀರಿನ ರಭಸ ಲೆಕ್ಕಿಸದೆ ಹಳ್ಳಕ್ಕೆ ಇಳಿದು, ದಾಟಲು ಮಹಿಳೆಯರು ಪ್ರಯತ್ನಿಸಿದ್ದಾರೆ. ಆದರೆ ನೀರಿನ ರಭಸಕ್ಕೆ ಮಹಿಳೆಯರು ಕೊಚ್ಚಿ ಹೋಗಿದ್ದರು.
ನಾಲ್ವರಲ್ಲಿ ಗಿರಿಜಾ, ಭುವನೇಶ್ವರಿ ಎಂಬುವವರು ಹಳ್ಳಕ್ಕೆ ಬಿದ್ದ ಮೇಲೆ ಕೆಲಹೊತ್ತು ಗಿಡಗಳನ್ನು ಹಿಡಿದುಕೊಂಡು ಮೇಲೇರಲು ಪ್ರಯತ್ನಿಸಿದ್ದರು. ಆದರೆ ಗ್ರಾಮಸ್ಥರು ರಕ್ಷಿಸಲು ಮುಂದಾದಾಗ ನೀರಿನ ರಭಸ ತಡೆಯಲಾಗದೆ ಅವರೂ ಕೊಚ್ಚಿ ಹೋಗಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ನಾಪತ್ತೆಯಾದ ಮಹಿಳೆಯರಿಗಾಗಿ ಹುಡುಕಾಟ ಆರಂಭಿಸಿದ್ದರು, ಭಾನುವಾರ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಕೊಪ್ಪಳ | ಹಳ್ಳ ದಾಟಲು ಹೋಗಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು