Site icon Vistara News

Misbehaviour : ಮಹಿಳೆಯರನ್ನು ಚುಡಾಯಿಸಿದ ಕಾಮುಕನ ಹಿಗ್ಗಾಮುಗ್ಗಾ ಥಳಿಸಿದ ಜನರು

Misbehaviour Koppala News

ಕೊಪ್ಪಳ: ರಸ್ತೆಯಲ್ಲಿ ಓಡಾಡುವ ಮಹಿಳೆಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿಹಾಕಿ ಧರ್ಮದೇಟು (Misbehaviour ) ಕೊಟ್ಟಿದ್ದಾರೆ. ಕೊಪ್ಪಳದ (Koppala News) ಕನಕಗಿರಿ ಪಟ್ಟಣದ 5ನೇ ವಾರ್ಡ್‌ನಲ್ಲಿ ಘಟನೆ ನಡೆದಿದೆ.

ಕಾಲೇಜು ಯುವತಿಯರಿಗೆ, ಮಹಿಳೆಯರನ್ನು ಹಿಂಬಾಲಿಸಿ ಹಲವು ದಿನಗಳಿಂದ ಕಿರಿಕಿರಿ ಉಂಟು ಮಾಡುತ್ತಿದ್ದ. ಹಲವು ದಿನಗಳಿಂದ ಈತನ ಕಾಟವನ್ನು ಸಹಿಸಿಕೊಂಡು ಬಂದಿದ್ದರು. ಆದರೆ ದಿನ ಕಳೆದಂತೆ ಈತನ ಹುಚ್ಚಾಟ ವಿಪರೀತಗೊಂಡಿತ್ತು.

ಇದರಿಂದ ಬೇಸತ್ತ ಮಹಿಳೆಯರು ಈ ವಿಚಾರವನ್ನು ಮನೆಯವರಿಗೆ ಹೇಳಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಾದ ಜನರು ಯುವಕನನ್ನು ಹಿಡಿದು, ವಿದ್ಯುತ್‌ ಕಂಬಕ್ಕೆ ಕಟ್ಟಿ, ದೊಣ್ಣೆಯಿಂದ ಥಳಿಸಿದ್ದಾರೆ.

ಇದನ್ನೂ ಓದಿ: Bengaluru News : ರಂಗೋಲಿ ಅಳಿಸ್ತಾಳೆ, ಚಪ್ಪಲಿ ಸ್ಟ್ಯಾಂಡ್‌ ಬೀಳಿಸ್ತಾಳೆ; ಪಕ್ಕದ ಮನೆಯವರ ಗೋಳು

ಗಂಡನ ಬಿಟ್ಟು ಇನ್‌ಸ್ಟಾದಲ್ಲಿ ಸಿಕ್ಕವನ ಜತೆಗಿದ್ದ ಬೆಂಗಳೂರು ಮಹಿಳೆಗೆ ಮೋಸ; ಇದೆ ಒಂದು ಟ್ವಿಸ್ಟ್

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿ ಹಲವು ಸಾಮಾಜಿಕ ಜಾಲತಾಣಗಳು (Social Media) ತುಂಬ ಜನರಿಗೆ ಮನರಂಜನೆ, ಆದಾಯ, ಸಮಯ ಕಳೆಯುವ ಮೂಲಗಳಾಗಿವೆ. ಹಾಗೆಯೇ, ಈ ಜಾಲತಾಣಗಳು, ರೀಲ್ಸ್‌ ಹುಚ್ಚು ತುಂಬ ಜನರ ಪ್ರಾಣವನ್ನೇ ಬಲಿ ಪಡೆದಿವೆ. ಹೆಚ್ಚಿನ ಸಂಸಾರಗಳಿಗೆ, ಜನರ ನೆಮ್ಮದಿಗೆ ಕೊಳ್ಳಿ ಇಟ್ಟಿವೆ. ಇದರಲ್ಲಿ ಜನರ ಪಾಲೂ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಬೆಂಗಳೂರಿನ (Bengaluru) ಮಹಿಳೆಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ (Instagram) ಸಿಕ್ಕವನ ನಂಬಿ ಮೋಸ ಹೋಗಿದ್ದಾರೆ.

ಬೆಂಗಳೂರಿನ ಸರ್‌ಎಂವಿ ನಗರದ ರಾಧಿಕಾ ಎಂಬುವರು ಗಂಡನಿಂದ ದೂರವಾಗಿ, ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ಇವರು ಇನ್‌ಸ್ಟಾಗ್ರಾಂನಲ್ಲಿ ಆಗಾಗ ರೀಲ್ಸ್‌ ಮಾಡುತ್ತಿದ್ದರು. ಹೀಗೆ ರೀಲ್ಸ್‌ ಮಾಡಿದ ವಿಡಿಯೊಗೆ 2019ರಲ್ಲಿ ತಮಿಳುನಾಡು ಮೂಲದ ಪರಮಶಿವಂ ಎಂಬಾತ ಪ್ರತಿಕ್ರಿಯಿಸಿದ್ದು, ನಂತರ ಇಬ್ಬರ ಪರಿಚಯವಾಗಿದೆ. ಇಬ್ಬರ ಪರಿಚಯವು ಪ್ರೇಮಕ್ಕೆ ತಿರುಗಿದೆ. ಇಬ್ಬರೂ ರೊಮ್ಯಾಂಟಿಕ್‌ ಆಗಿ ರೀಲ್ಸ್‌ಗಳನ್ನು ಮಾಡುವ ಮೂಲಕ ಸಾಮಾಜಿಕ ಜಾಲತಾಣಕ್ಕೂ ಪ್ರೇಮ ಪ್ರಸಂಗ ತಲುಪಿದೆ.

ರೀಲ್ಸ್‌ ಮಾಡುತ್ತಿದ್ದ ಜೋಡಿ

“ನಾನು ನಿನ್ನನ್ನು ಮದುವೆಯಾಗುತ್ತೇನೆ. ನಿನಗೊಂದು ನೆಲೆ ಕಲ್ಪಿಸುತ್ತೇನೆ. ಕಾರು ಖರೀದಿಸಿ ಕಂಪನಿಗೆ ಬಿಟ್ಟರೆ ಒಳ್ಳೆಯ ಆದಾಯ ಬರುತ್ತದೆ” ಎಂದು ನಂಬಿಸಿದ ಬೆಂಗಳೂರಿನಲ್ಲಿ ನೆಲೆಸಿರುವ ಪರಮಶಿವಂ, ರಾಧಿಕಾ ಅವರಿಂದ 6 ಲಕ್ಷ ರೂ. ಪಡೆದುಕೊಂಡಿದ್ದಾನೆ. ಮಹಿಳೆಯಿಂದ 6 ಲಕ್ಷ ರೂ. ಪಡೆದ ಪರಮಶಿವಂ ತಮಿಳುನಾಡಿಗೆ ಹೋಗಿದ್ದಾನೆ. ಹೀಗೆ, ಅಂಗೈಯಲ್ಲೇ ಆಕಾಶ ತೋರಿಸಿ ತಮಿಳುನಾಡಿಗೆ ಹೋದ ಪ್ರಿಯತಮ ಬರದೆ ಇದ್ದಾಗ ರಾಧಿಕಾ ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಹಾಗೆಯೇ, ತಮಿಳುನಾಡಿನಲ್ಲಿ ಪರಮಶಿವಂ ಇನ್ನೊಂದು ಮದುವೆಯಾಗಿದ್ದಾನೆ ಎಂದು ಕೂಡ ರಾಧಿಕಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಸಹಾಯದ ನೆಪದಲ್ಲಿ ಅಬ್ದುಲ್‌ ವಂಚನೆ; ಚಿಕಿತ್ಸೆ ಸಿಗದೆ ಅಸುನೀಗಿದ ಬಾಲಕಿ

ಪೊಲೀಸರ ವಿರುದ್ಧವೇ ಆರೋಪ

ರಾಧಿಕಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿ ನಗರದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈಗ ಪೊಲೀಸರ ವಿರುದ್ಧವೇ ಆರೋಪ ಮಾಡಿದ್ದಾರೆ. ದೂರು ನೀಡಿ ಒಂದು ವರ್ಷವಾದರೂ ಪೊಲೀಸ್‌ ಠಾಣೆಗೆ ಅಲೆಯುವುದೇ ಆಗಿದೆ ಹೊರತು ಆರೋಪಿಯನ್ನು ಬಂಧಿಸಿಲ್ಲ ಎಂದು ರಾಧಿಕಾ ಆರೋಪಿಸಿದ್ದಾರೆ. ಪರಮಶಿವಂ ಸುಲೋಚನಾ ಎಂಬುವರಿಗೆ ಹಣ ನೀಡಿದ್ದಾನೆ. ಆರು ಜನರ ವಿರುದ್ಧ ಇದುವರೆಗೆ ಎಫ್‌ಐಆರ್‌ ದಾಖಲಿಸಿದ್ದೇನೆ. ನನ್ನ ವಿರುದ್ಧವೇ ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಅವಹೇಳನ ಮಾಡಲಾಗುತ್ತಿದೆ. ಆದರೂ, ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂಬುದಾಗಿ ರಾಧಿಕಾ ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version