Site icon Vistara News

Physical assualt : ಅಣ್ಣ ಕರೀತಾನೆ ಎಂದು ಹೇಳಿ ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್ ; ನಾಲ್ವರಿಂದ ಸಾಮೂಹಿಕ ಅತ್ಯಾಚಾರ

Gang rape by friends

ಕೊಪ್ಪಳ: ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು (COllege Student) ತಂಡವೊಂದು ಕಾಲೇಜಿನಿಂದಲೇ ಅಪಹರಿಸಿ ಸಾಮೂಹಿಕ ಅತ್ಯಾಚಾರ (Mass Physical assault) ನಡೆಸಿದ ಭಯಾನಕ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ. ಬಳ್ಳಾರಿಯ ಕಾಲೇಜು ವಿದ್ಯಾರ್ಥಿನಿಯನ್ನು ಆಟೋದಲ್ಲಿ ಕಿಡ್ನಾಪ್‌ ಮಾಡಿ ಕೊಪ್ಪಳಕ್ಕೆ ಕರೆ ತಂದು ಅಲ್ಲಿ ಬಿಯರ್‌ ಕುಡಿಸಿ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ (Girl kidnapped and Raped) ಎಂದು ದೂರು ನೀಡಲಾಗಿದೆ.

ಕೊಪ್ಪಳ ಜಿಲ್ಲೆಯ ಸಣಾಪುರ ಎಂಬ ಊರಿನ ಹೋಟೆಲ್‌ನಲ್ಲಿ ಅತ್ಯಾಚಾರ ನಡೆದಿದ್ದು, ನವೀನ್‌, ಸಾಕೀಬ್‌, ತನು ಮತ್ತು ಇನ್ನೊಬ್ಬ ಯುವಕ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ದೂರಿನಲ್ಲಿ ಆಪಾದಿಸಲಾಗಿದೆ.

ಅಣ್ಣ ಕರೀತಾನೆ ಎಂದು ಹೇಳಿ ಕರೆತಂದರು!

ಆಕೆ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಆವತ್ತು ಆಕೆಗೆ ಕಾಲೇಜಿನಲ್ಲಿ ಪರೀಕ್ಷೆ ಇತ್ತು. ಆಕೆ ಪರೀಕ್ಷೆ ಬರೆಯುತ್ತಿದ್ದಾಗ ಯಾರೋ ಬಂದು ಆಕೆಯನ್ನು ಕರೆದು ಅಣ್ಣ ಹೊರಗೆ ಕಾಯುತ್ತಿದ್ದಾನೆ ಎಂದು ಹೇಳಿದ್ದರು. ಆಕೆ ಅಣ್ಣ ಬಂದಿದ್ದಾನೆ ಎಂದು ಹೊರಗೆ ಬಂದು ನೋಡಿದರೆ ಕಾಯುತ್ತಿದ್ದದ್ದು ಆಕೆಯ ಒಬ್ಬ ಸ್ನೇಹಿತ ಮತ್ತು ಇತರ ಮೂವರು. ಅವರು ಆಕೆಯನ್ನು ಮನೆಗೆ ಕರೆದೊಯ್ಯುವುದಾಗಿ ಹೇಳಿ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾರೆ.

ಆಕೆ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳುತ್ತಿರುವಂತೆಯೇ ಆಟೋ ಬಳ್ಳಾರಿಯಿಂದ ಕೊಪ್ಪಳದತ್ತ ಹೊರಟಿತ್ತು. ಆರೋಪಿಗಳು ಆಕೆಯನ್ನು ಕರೆದುಕೊಂಡು ಹೋಗಿದ್ದು ಕೊಪ್ಪಳ ಜಿಲ್ಲೆಯ ಸಣಾಪುರಕ್ಕೆ. ಅಲ್ಲಿನ ಅಂತರಾಳ ಕೆಫೆ ಹೋಟೆಲ್​ಗೆ ಕರೆದೊಯ್ದು ಅಲ್ಲಿ ಆಕೆಗೆ ಬಿಯರ್ ಕುಡಿಸಿ ಮತ್ತು ಬರಿಸಿದ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಆಕೆಯ ಸ್ನೇಹಿತನೇ ಮುಂದೆ ನಿಂತು ಇತರ ಮೂವರ ಜತೆ ಸೇರಿ ಅತ್ಯಾಚಾರ ಮಾಡಲಾಗಿದೆ ಎಂದು ಹೇಳಲಾಗಿದೆ. ಅಲ್ಲಿಂದ ಆಕೆ ಮರಳಿ ಬಳ್ಳಾರಿ ತಲುಪಿ ಆರೋಪಿಗಳ ಮೇಲೆ ಕೇಸು ದಾಖಲಿಸಿದ್ದಾರೆ. ಬಳ್ಳಾರಿ ನಗರದ ಕೌಲ್ ಬಜಾರ್​ನ ನವೀನ್, ಸಾಕೀಬ್, ತನು ಸೇರಿದಂತೆ ನಾಲ್ವರ ವಿರುದ್ಧ ಬಳ್ಳಾರಿ ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಇವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Lover and Friend : ಇವನೆಂಥಾ ಪ್ರೇಮಿ! ಗೆಳೆಯ ಕೇಳಿದನೆಂದು ಪ್ರಿಯತಮೆಯನ್ನೇ ಬಿಟ್ಕೊಟ್ಟ!

ಯಾರನ್ನೂ ನಂಬಬೇಡಿ, ಹುಷಾರಾಗಿರಿ

ಇಲ್ಲಿ ಯುವತಿ ಅಣ್ಣ ಬಂದಿದ್ದಾನೆ ಎಂಬ ಕಾರಣಕ್ಕೆ ಕಾಲೇಜಿನಿಂದ ಹೊರಗೆ ಬಂದಿದ್ದಾನೆ. ಆದರೆ, ಅಲ್ಲಿ ಕಂಡದ್ದು ಸ್ನೇಹಿತ. ಆತ ಏನೋ ಕಥೆ ಹೇಳಿ, ಮನೆಯಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿ ಆಕೆಯನ್ನು ಆಟೋದಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಬಳಿಕ ಇತರ ಗೆಳೆಯರನ್ನು ಸೇರಿಸಿಕೊಂಡು ಅತ್ಯಾಚಾರ ಮಾಡಿದ್ದಾನೆ.

ಹೆಣ್ಣು ಮಕ್ಕಳು ಈಗ ಯಾರನ್ನೂ ಸುಮ್ಮಸುಮ್ಮನೆ ನಂಬುವಂತಿಲ್ಲ. ಗೆಳೆಯನೇ ಆದರೂ ಆತನ ನಡವಳಿಕೆಗಳನ್ನು ಸ್ಪಷ್ಟವಾಗಿ ತಿಳಿದುಕೊಂಡ ಮೇಲಷ್ಟೇ ವ್ಯವಹರಿಸಬೇಕೇ ಹೊರತು ಗೆಳೆಯ ಸಿಕ್ಕಿದ ಎಂಬ ಕಾರಣಕ್ಕೆ ತುಂಬ ನಂಬಲು ಹೋದರೆ ಈ ಹುಡುಗಿಗೆ ಆದ ಕಥೆಯೇ ಎದುರಾಗುತ್ತದೆ.

ಹೆಚ್ಚಿನ ಹುಡುಗರು ಸ್ನೇಹದ ಹೆಸರಿನಲ್ಲಿ ತಮ್ಮ ಲೈಂಗಿಕ ದಾಹಗಳನ್ನು ತೀರಿಸಿಕೊಳ್ಳಲು ಹಾತೊರೆಯುತ್ತಾರೆ. ಅದರಲ್ಲೂ ತಾವು ಒಬ್ಬ ಹುಡುಗಿಯನ್ನು ಪಟಾಯಿಸಿದ್ದಾಗಿ ಗೆಳೆಯರ ಮುಂದೆ ಜಂಭ ಕೊಚ್ಚಿಕೊಳ್ಳುವುದು ಅವರಿಗೆ ಶೋಕಿಯಾಗಿರುತ್ತದೆ. ಅವಳು ನಾನು ಹೇಳಿದಲ್ಲಿಗೆ ಬರುತ್ತಾಳೆ, ಹೇಳಿದ್ದನ್ನು ಕೇಳುತ್ತಾಳೆ ಎಂದೆಲ್ಲ ಮಾತನಾಡಿರುತ್ತಾರೆ. ಇದನ್ನು ಪ್ರೂವ್‌ ಮಾಡುವುದಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಾರೆ. ನಿಜಕ್ಕೂ ನಂಬಿಗಸ್ಥ ಎಂದು ತಿಳಿದ ಮೇಲಷ್ಟೇ ಆತ್ಮೀಯವಾಗಿ ಬೆರೆಯುವುದು ಉತ್ತಮ. ಅಲ್ಲಿವರೆಗೆ ಪ್ರತಿಯೊಬ್ಬರನ್ನೂ ಸಂಶಯದಿಂದಲೇ ನೋಡುವುದು ಒಳಿತು.

Exit mobile version