Site icon Vistara News

Ragging Case : ಹೈಸ್ಕೂಲ್‌ನಲ್ಲೇ ರ‍್ಯಾಗಿಂಗ್‌; ಮಕ್ಕಳ ಗುದದ್ವಾರಕ್ಕೆ ಪೆನ್ಸಿಲ್‌ ಚುಚ್ಚಿದ ಬಾಲ ಕಿರಾತಕರು

Ragging Case koppala

ಕೊಪ್ಪಳ (ಗಂಗಾವತಿ): ರ‍್ಯಾಗಿಂಗ್‌ (Ragging Case) ಅಂದ ಕೂಡಲೇ ಕಾಲೇಜಿನ ನೆನಪಾಗುತ್ತದೆ. ಸಾಮಾನ್ಯವಾಗಿ ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ರ‍್ಯಾಗ್‌ ಮಾಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಠಿಣ ಕಾನೂನು, ಸಿಸಿ ಟಿವಿ ಕ್ಯಾಮೆರಾಗಳು, ಸಾರ್ವಜನಿಕ ತಿಳುವಳಿಕೆಯಿಂದಾಗಿ ಕಾಲೇಜುಗಳಲ್ಲೂ ಈ ರೀತಿಯ ಚುಡಾಯಿಸುವಿಕೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಈಗ ಒಂದು ಹೈಸ್ಕೂಲಿನಲ್ಲಿ ರ‍್ಯಾಗಿಂಗ್‌ ಪ್ರಕರಣ (Ragging Case in High scool) ನಡೆದು ದೊಡ್ಡ ಸುದ್ದಿಯಾಗಿದೆ.

ಕೊಪ್ಪಳ ಜಿಲ್ಲೆ (Koppala News) ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ವಸತಿ ಶಾಲೆಯ (Morarji Residential School) ಮಕ್ಕಳ ಮೇಲೆ ಕಳೆದ ಆರು ತಿಂಗಳಿನಿಂದ ರ‍್ಯಾಗಿಂಗ್‌ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲಿನ ಹೈಸ್ಕೂಲ್‌ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಹಿಂಸಾತ್ಮಕವಾಗಿ ಚುಡಾಯಿಸಿದ್ದಾರೆ.

10ನೇ ತರಗತಿಯಲ್ಲಿ ಕಲಿಯುತ್ತಿರುವ ಎಂಟು ವಿದ್ಯಾರ್ಥಿಗಳು ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಕೆಲವು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪೆನ್ಸಿಲ್ ನಿಂದ ಮಕ್ಕಳ ಗುದದ್ವಾರಕ್ಕೆ ಚುಚ್ಚಿ ಕಿರುಕುಳ ನೀಡುತ್ತಿದ್ದ ವಿದ್ಯಾರ್ಥಿಗಳು, ವಿಷಯವನ್ನು ವಾರ್ಡನ್ ಹಾಗೂ ಶಿಕ್ಷಕರಿಗೆ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಪ್ರಾಥಮಿಕ ಶಾಲೆ ಮಕ್ಕಳನ್ನು ಬಸ್ಕಿ ಹೊಡೆಸೋದು, ಕಸ ಗುಡಿಸಲು ಆರ್ಡರ್‌ ಮಾಡುವುದು, ಅವರ ಕೈಯಲ್ಲಿ ಬಟ್ಟೆ ಒಗೆಸುವ ಕೆಲಸಗಳನ್ನು ಹಿರಿಯ ವಿದ್ಯಾರ್ಥಿಗಳು ಮಾಡುತ್ತಿದ್ದರು. ಒಂದೊಮ್ಮೆ ಅವರು ಹೇಳಿದಂತೆ ಮಾಡದೆ ಹೋದರೆ ಬೆಲ್ಟ್ ನಿಂದ ಹಲ್ಲೆ ಮಾಡುವುದಲ್ಲದೆ, ಪೆನ್ಸಿಲ್ ನಿಂದ ಮಕ್ಕಳ ಗುದದ್ವಾರಕ್ಕೆ ಚುಚ್ಚಿ ಕಿರುಕುಳ ನೀಡುತ್ತಿದ್ದರು.

ಆರು ತಿಂಗಳಿಂದ ನಿರಂತರ ಕಿರುಕುಳ ಮಾಡಿದ ಆರೋಪವಿದೆ. ಮಕ್ಕಳು ಈ ಕಿರುಕುಳದಿಂದ ಬೇಸತ್ತು ಅಂತಿಮವಾಗಿ ಪೋಷಕರ ಗಮನಕ್ಕೆ ತಂದಿದ್ದಾರೆ. ಪೋಷಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಇಷ್ಟೆಲ್ಲ ಘಟನಾವಳಿಗಳು ನಡೆದಿದ್ದರೂ ಇದ್ಯಾವುದೂ ವಾರ್ಡನ್‌ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಿರುಕುಳಕ್ಕೆ ಒಳಗಾದ ಮಕ್ಕಳು ಮತ್ತು ಕಿರುಕುಳ ನೀಡಿದ ಮಕ್ಕಳನ್ನು ವಿಚಾರಣೆ ನಡೆಸಿದ್ದಾರೆ. ಈಗ ಹಿರಿಯ ವಿದ್ಯಾರ್ಥಿಗಳಿಗೆ ಯಾವ ಶಿಕ್ಷೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : Murder Case : ತಾಯಿಗಿತ್ತು ಅನೈತಿಕ ಸಂಬಂಧ; ಅಪ್ಪನಿಗಾಗಿ ಕೊಲೆಗಾರನಾದ ಮಗ!

ಹುಡುಗಿಗೆ ಕಿರುಕುಳ ನೀಡಿದ ವಿದ್ಯಾರ್ಥಿ ಮೇಲೆ ಹಲ್ಲೆ

ಚಿತ್ರದುರ್ಗ : ಖಾಸಗಿ ಬಸ್‌ನಲ್ಲಿ ಹೋಗುತ್ತಿದ್ದ ವೇಳೆ ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಜನರು ಸೇರಿ ಆ ಹುಡುಗನಿಗೆ ಚೆನ್ನಾಗಿ ಬಾರಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ದಿಂಡವರ ಗ್ರಾಮದ ಬಳಿ ಘಟನೆ ನಡೆದಿದೆ.

ಖಾಸಗಿ ಬಸ್‌ ದಿಂಡಾವರ ಮಾರ್ಗವಾಗಿ ಹಿರಿಯೂರು ನಗರದ ಕಡೆ ಹೊರಟಿತ್ತು. ಈ ಬಸ್ಸಿನಲ್ಲಿ ಹುಡುಗನೊಬ್ಬ ಹುಡುಗಿಯನ್ನು ಚುಡಾಯಿಸಿದ್ದ. ಆಗ ಹುಡುಗ ಮತ್ತು ಪ್ರಯಾಣಿಕರ ನಡುವೆ ಜಗಳ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಪ್ರಯಾಣಿಕರು ಸೇರಿ ಹುಡುಗನ ಮೇಲೆ ಹಲ್ಲೆ ಮಾಡಿದ್ದರು. ಯೋಗಿ, ಸುಧಾಕರ್ ಹಾಗೂ ಸ್ನೇಹಿತರಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳು ಆದಿವಾಲ ಭೋವಿ ಕಾಲೋನಿಯ ತಿರುಮಲ ನಗರದವರು ಎನ್ನಲಾಗಿದೆ.

ಬಸ್ಸಿನೊಳಗೆ ಜಗಳ ತಾರಕಕ್ಕೆ ಏರುತ್ತಿದ್ದಂತೆಯೇ ಯುವಕರು ಬಸ್ಸನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಯುವಕನನ್ನು ಇಳಿಸಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯ ಮಾಡಿದ್ದಾರೆ.

Exit mobile version