Site icon Vistara News

Road accident : ಆ್ಯಕ್ಸೆಲ್ ತುಂಡಾಗಿ ರಸ್ತೆಯಲ್ಲೇ ಮಗುಚಿಬಿದ್ದ ಬಸ್‌; ಒಬ್ಬ ಪ್ರಯಾಣಿಕ ಸ್ಥಳದಲ್ಲೇ ಸಾವು

Koppala accident

ಕೊಪ್ಪಳ: ಸರ್ಕಾರಿ ಬಸ್‌ ಒಂದು ಚಲಿಸುತ್ತಿದ್ದಾಗಲೇ ಆಕ್ಸೆಲ್ ತುಂಡಾಗಿ (Bus overturns after Axle cut) ರಸ್ತೆಯಲ್ಲೇ ಮಗುಚಿಬಿದ್ದ (Road accident) ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದು, (One passenger dead) ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ.

ಕೊಪ್ಪಳ ಜಿಲ್ಲೆ (Koppala News) ಕುಷ್ಟಗಿ ತಾಲೂಕಿನ ತಾವರಗೇರಾ ಬಳಿ ಘಟನೆ ನಡೆದಿದ್ದು, ಮೃತ ಪ್ರಯಾಣಿಕ ಯಾರು ಎನ್ನುವುದು ಗೊತ್ತಾಗಿಲ್ಲ. ಈ ಬಸ್‌ ಬೀದರ್‌ನಿಂದ ಕೊಪ್ಪಳಕ್ಕೆ ಬರುತ್ತಿತ್ತು. ಬಸ್‌ನಲ್ಲಿ 88 ಮಂದಿ ಪ್ರಯಾಣಿಸುತ್ತಿದ್ದರು.

ಬಸ್‌ ತಾವರಗೇರಾ ಬಳಿ ಬರುತ್ತಿದ್ದಂತೆಯೇ ಒಮ್ಮಿಂದೊಮ್ಮೆಗೇ ಆ್ಯಕ್ಸೆಲ್‌ ತುಂಡಾಗಿದ್ದು, ನಿಯಂತ್ರಣ ತಪ್ಪಿದ ಬಸ್‌ ಅಲ್ಲೇ ಪಲ್ಟಿಯಾಗಿದೆ. ಬಸ್ ಉರುಳಿಬೀಳುತ್ತಲೇ ಪ್ರಯಾಣಿಕರಲ್ಲಿ ಕೆಲವರು ಹೊರಗೆ ಎಸೆಯಲ್ಪಟ್ಟರೆ ಕೆಲವರು ಒಳಗೇ ಬಸ್‌ನ ಒಳಭಾಗಕ್ಕೆ ಬಡಿದು ಗಾಯಗೊಂಡರು.

ಸ್ಥಳೀಯರು ಕೂಡಲೇ ಅವರ ನೆರವಿಗೆ ಧಾವಿಸಿದರು. ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಮೃತಪಟ್ಟ ಪ್ರಯಾಣಿಕರ ಗುರುತು ಇನ್ನೂ ಪತ್ತೆಯಾಗಿಲ್ಲ.

ಗುರುವಾರ ರಾಜ್ಯದಲ್ಲಿ ಅಪಘಾತಗಳ ಸರಮಾಲೆಯೇ ನಡೆದಿದ್ದು, ಕೊಪ್ಪಳದ ಘಟನೆಯೂ ಸೇರಿದಂತೆ ಒಟ್ಟು ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಭದ್ರಾವತಿಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ: ತಂದೆ-ಮಗಳು ಸಾವು

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಜಾವಳ್ಳಿ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ತಂದೆ ಮತ್ತು ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ಎರಡು ಕಾರುಗಳಲ್ಲಿದ್ದ ಒಟ್ಟು 8 ಮಂದಿಗೆ ಗಾಯಗಳಾಗಿವೆ.

ನಜ್ಜುಗುಜ್ಜಾಗಿರುವ ಕಾರು

ಶಿವಮೊಗ್ಗದ ಟಿಪ್ಪು ನಗರದ ನಿವಾಸಿಗಳಾದ ತಂದೆ ಅಫ್ತಾಬ್‌ (35) ಮತ್ತು ಮಗಳು ಮದೀಯಾ ಮೃತ ದುರ್ದೈವಿಗಳು. ಜಾವಳ್ಳಿ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ರಭಸಕ್ಕೆ ಅಫ್ತಾಬ್‌ ಮತ್ತು ಮದೀಯಾ ಅವರು ಪ್ರಯಾಣಿಸುತ್ತಿದ್ದ ಕಾರು ಹೊಂಡಕ್ಕೆ ಉರುಳಿದೆ. ಈ ಹಂತದಲ್ಲಿ ಕಾರು ಉರುಳಿದ ಹೊಡೆತಕ್ಕೆ ಅಫ್ತಾಬ್‌ ಅವರು ಡ್ರೈವಿಂಗ್‌ ಸೀಟಿನಲ್ಲಿ ಕುಳಿತಲ್ಲೇ ಗಂಭೀರ ಗಾಯಕ್ಕೊಳಗಾದರು.

ಇದನ್ನೂ ಓದಿ: Road Accident : ತರೀಕೆರೆ ಖಾಸಗಿ ಬಸ್‌ ಅಟ್ಟಹಾಸದಲ್ಲಿ ಗಾಯಗೊಂಡಿದ್ದ ಒಬ್ಬ ಬಾಲಕಿ ಮೃತ್ಯು, ಇನ್ನೊಬ್ಬಳು ಗಂಭೀರ

ಜಾಲಿ ರೈಡ್‌ಗೆ ಬಂದಿದ್ದ ಯುವಕರು ದುರ್ಮರಣ

ಇಷ್ಟೇ ಅಲ್ಲ ದಾವಣಗೆರೆ (Davanagere News) ಬಳಿಯ ರಾಷ್ಟ್ರೀಯ ಹೆದ್ದಾರಿ 54ರಲ್ಲಿ (NH 54) ತಡೆಗೋಡೆಗೆ ಬೈಕ್‌ ಡಿಕ್ಕಿ (Bike Accident)ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾಲಿ ರೈಡ್‌ಗೆಂದು ಕೇರಳದಿಂದ ಬಂದಿದ್ದ ಅತುಲ್(25), ಋಷಿಕೇಶ್ ( 24) ಅಪಘಾತದಲ್ಲಿ (Road Accident) ಪ್ರಾಣ ಕಳೆದುಕೊಂಡಿದ್ದಾರೆ.

ದಾವಣಗೆರೆಯ ಎಸ್‌ಎಸ್ ಆಸ್ಪತ್ರೆ ಪಕ್ಕದಲ್ಲಿರುವ ರೈಲ್ವೆ ಬ್ರಿಡ್ಜ್ ಬಳಿ ಅಪಘಾತ ನಡೆದಿದೆ. ಕೇರಳದಿಂದ ಜಾಲಿ ರೈಡ್‌ಗೆ ಬೈಕ್‌ನಲ್ಲಿ ಬಂದಿದ್ದರು ಎಂದು ಪೊಲೀಸರು ಪ್ರಾಥಮಿಕ ಮಾಹಿತಿ‌ ನೀಡಿದ್ದಾರೆ. ಬೈಕ್ ಸವಾರನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬ್ರಿಡ್ಜ್ ಮೇಲಿಂದ ಹಾರಿ ರೈಲ್ವೆ ಹಳಿ ಪಕ್ಕದಲ್ಲಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.

ತರೀಕೆರೆಯಲ್ಲಿ ಹೈಸ್ಕೂಲ್‌ ವಿದ್ಯಾರ್ಥಿನಿ ಬಸ್‌ ಅಟ್ಟಹಾಸಕ್ಕೆ ಬಲಿ

ಚಿಕ್ಕಮಗಳೂರು ಚಿಲ್ಲೆಯ ತರೀಕೆರೆ ಬಳಿ ಮಾರ್ಗದ ಬದಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಕ್ಕಳ ಮೇಲೆಯೆ ಖಾಸಗಿ ಬಸ್‌ ಹಾಯ್ದು ಇಬ್ಬರು ಮಕ್ಕಳಿಗೆ ತೀವ್ರ ಗಾಯಗಳಾಗಿತ್ತು. ಅವರ ಪೈಕಿ ತುಳಸಿ ಎಂಬ 15 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

Exit mobile version