ಬೆಂಗಳೂರು: ಸಮುದಾಯಗಳಲ್ಲಿ ದೀರ್ಘಾವಧಿಯ ಮೌಲ್ಯಗಳನ್ನು ಸೃಷ್ಟಿಸುವ ಉದ್ದೇಶದಿಂದ ಕೋಟಕ್ ಮಹೀಂದ್ರ ಬ್ಯಾಂಕ್ ಲಿಮಿಟೆಡ್ (Kotak Mahindra Bank) ಐಟಿ ಫಾರ್ ಚೇಂಜ್ (IT for Change)ನ ಸಹಯೋಗದೊಂದಿಗೆ 2023-24 ನೇ ಶೈಕ್ಷಣಿಕ ವರ್ಷದಲ್ಲಿ ನಿರಂತರ ವೃತ್ತಿಪರ ಅಭಿವೃದ್ಧಿ (CPD) ಯನ್ನು ಕಾರ್ಯರೂಪಕ್ಕೆ ತರಲು ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿನ ಹಿರಿಯ ಪ್ರಾಥಮಿಕ ಶಿಕ್ಷಕರಿಗೆ ಡಿಜಿಟಲ್ ಶಿಕ್ಷಣದ (Digital Education) ಬೋಧನ ವಿಧಾನದ ಕೌಶಲ್ಯಗಳನ್ನು ಬಲಪಡಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ. ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ( DSERT) ಅಡಿಯಲ್ಲಿ ನಡೆಯುತ್ತಿರುವ ‘ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನ’ ವನ್ನು ಸಂಯೋಜಿಸುವ ಕೋಟಕ್ ಸಿಎಸ್ಆರ್(CSR) ಯೋಜನೆಯು ಶಿಕ್ಷಕರಿಗೆ ತಮ್ಮ ಬೋಧನಾ ಅಭ್ಯಾಸಗಳಲ್ಲಿ ಅನನ್ಯ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಲು ಅಗತ್ಯವಾದ ತಂತ್ರಜ್ಞಾನದ ಜ್ಞಾನವನ್ನು ಒದಗಿಸುತ್ತದೆ.
ಭಾಷಾ ಬೋಧನೆ ಕಲಿಕೆಗಾಗಿ ಸಮನ್ವಯ ಮತ್ತು ನವೀನ ಬೋಧನ ವಿಧಾನದ ಮೂಲಕ ಡಿಜಿಟಲ್ ಸಂಪನ್ಮೂಲಗಳನ್ನು ಬಳಸುವುದರಿಂದ ಈ ಕಾರ್ಯಕ್ರಮವು ಶಿಕ್ಷಕರಿಗೆ ಅರ್ಥಪೂರ್ಣವಾಗಿ ತಂತ್ರಜ್ಞಾನ ಬಳಕೆಯ ಅನುಭವ ಪಡೆಯಲು ಮತ್ತು ಆಂತರಿಕಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಅವರ ಅನುಭವಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಶಿಕ್ಷಕರ ಕಲಿಕಾ ಸಮೂದಾಯವನ್ನು (CoPs) ಸ್ಥಾಪಿಸುವುದರ ಮೂಲಕ ಮಾರ್ಗದರ್ಶನ ಪಡೆಯಲು ಮತ್ತು ಸಹೋದ್ಯೋಗಿಗಳೊಂದಿಗೆ ಕಲಿಯುವ ಅವಕಾಶಗಳನ್ನು ಪ್ರೋತ್ಸಾಹಿಸುತ್ತದೆ. ರಾಜ್ಯದ ಬಹು-ಭಾಷಾ ಶಿಕ್ಷಣದ ಅಗತ್ಯಗಳನ್ನು ಪರಿಗಣಿಸಿ ಕನ್ನಡ ,ಇಂಗ್ಲಿಷ್, ಉರ್ದು, ಮರಾಠೀ ಭಾಷೆಯಲ್ಲಿ ಕಥೆ ಆಧಾರಿತ ಸಂಪನ್ಮೂಲಗಳನ್ನು ರಚಿಸಿ, ಅವುಗಳನ್ನು ನಿಗದಿಪಡಿಸಿದ ಭಂಡಾರದಲ್ಲಿ ಮುಕ್ತ ಶಿಕ್ಷಣ ಸಂಪನ್ಮೂಲವಾಗಿ (OERs) ಪಡೆಯಬಹುದು.
ಶಿಕ್ಷಕರ ಸಾಮರ್ಥ್ಯವನ್ನು ಉತ್ತೇಜಿಸಲು ‘ಐಟಿ ಫಾರ್ ಚೇಂಜ್’ ಸಂಸ್ಥೆ ರಾಜ್ಯಾದ್ಯಂತ ಶಿಕ್ಷಕರ ವೃತ್ತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ‘ಕೋಟಕ್ ಮಹೀಂದ್ರಾ ಬ್ಯಾಂಕ್’ ಸಂಸ್ಥೆಯನ್ನು ಬೆಂಬಲಿಸುತ್ತಿರುವುದು ಸಂತಸದ ವಿಷಯವಾಗಿದೆ. ಈ ಕಾರ್ಯಕ್ರಮವು ಪ್ರಾಥಮಿಕ ಶಾಲೆಗಳಲ್ಲಿ ಕಲಿಸುವ ಭಾಷೆಗಳಲ್ಲಿ ವಿದ್ಯಾರ್ಥಿಗಳ ಮೂಲಭೂತ ಭಾಷಾ ಕೌಶಲ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ” ಎಂದು ಕರ್ನಾಟಕದ ಡಿಎಸ್‌ಇಆರ್‌ಟಿ ನಿರ್ದೇಶಕರಾದ ಶ್ರೀಮತಿ ಸುಮಂಗಲಾ ರವರು ಉಲ್ಲೇಖಿಸಿದ್ದಾರೆ.
ವಿದ್ಯಾರ್ಥಿ ಜೀವನದ ಭವಿಷ್ಯವನ್ನು ಬೆಂಬಲಿಸಲು ಡಿಜಿಟಲ್ ಕಥೆಗಳನ್ನು ಬೋಧನ ವಿಧಾನದ ಸಾಧನವಾಗಿ ಬಳಸಿಕೊಂಡು ಶಿಕ್ಷಕರ ತರಭೇತಿಯನ್ನು ನೀಡಲು ನಾವು ಐಟಿ ಫಾರ್ ಚೇಂಜ್ ಸಂಸ್ಥೆಗೆ ಸಿಎಸ್ಆರ್ ಯೋಜನೆಯ ಮೂಲಕ ಧನಸಹಾಯವನ್ನು ನೀಡಿದ್ದೇವೆ” ಎಂದು ಕೋಟಕ್ ಮಹೀಂದ್ರ ಬ್ಯಾಂಕ್ ನ ಹಿರಿಯ ಇವಿಪಿ(EVP) ಮತ್ತು ಸಿಎಸ್ಆರ್(CSR) ನ ಮುಖ್ಯಸ್ಥರಾದ ಹಿಮಾಂಶು ನಿವ್ಸರ್ಕಾರ್ ರವರು ಹೇಳಿದ್ದಾರೆ.
ನಮ್ಮ ವೃತ್ತಿಪರ ಅಭಿವೃದ್ಧಿ ಕಾರ್ಯಗಾರಗಳು ಮತ್ತು ಶಿಕ್ಷಕರ ತರಬೇತಿಗಳು ತರಗತಿಯ ಕಲಿಕಾ-ಬೋಧನ ಅಭ್ಯಾಸದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಸಂಯೋಜಿಸಲು OER ಗಳನ್ನು ಅಭಿವೃದ್ಧಿಪಡಿಸಿ ಕಲಿಕೆಗಾಗಿ ಹಂಚಿಕೊಳ್ಳಲು ಮತ್ತು ಕಲಿಕಾ ಸಮುದಾಯದಲ್ಲಿ ಭಾಗವಹಿಸಲು ಉತ್ತೇಜಿಸಿ, ಶಿಕ್ಷಕರನ್ನು ಸಶಕ್ತನಾಗುವಂತೆ ಮಾಡುತ್ತದೆ” , ಎಂದು ಐಟಿ ಫಾರ್ ಚೇಂಜ್ ನಿರ್ದೇಶಕರಾದ ಗುರುಮೂರ್ತಿ ಕಾಸೀನಾಥನ್ ನವರು ಹೇಳಿದ್ದಾರೆ. ಕೋಟಕ್ ಕರ್ಮವು, ಕೋಟಕ್ ಮಹೀಂದ್ರ ಸಮೂಹ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR)ನ ಭಾಗವಾಗಿದೆ.
ಈ ಸುದ್ದಿಯನ್ನೂ ಓದಿ: Shivamogga News: ಆಧುನಿಕತೆಗೆ ತಕ್ಕಂತೆ ಡಿಜಿಟಲ್ ಗ್ರಂಥಾಲಯ ಅಭಿವೃದ್ಧಿ: ಮಧು ಬಂಗಾರಪ್ಪ