ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ ಸಂವಹನ ವಿಭಾಗದಿಂದ ಮುಖ್ಯ ವಕ್ತಾರರು, ವಕ್ತಾರರ ಬಹುದೊಡ್ಡ ಪಟ್ಟಿಯನ್ನು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಘೋಷಣೆ ಮಾಡಿದ್ದಾರೆ.
ಸಂವಹನ ವಿಭಾಗದ ರಾಜ್ಯ ಸಮಿತಿ ಎಂದು 6 ಉಪಾಧ್ಯಕ್ಷರು, 11 ಪ್ರಧಾನ ಕಾರ್ಯದರ್ಶಿಗಳು ಹಾಗೂ ಮೂವರು ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.
ಕೆಪಿಸಿಸಿ ಮುಖ್ಯ ವಕ್ತಾರರಾಗಿ ಬಿ.ಎಲ್. ಶಂಕರ್, ವಿ.ಎಸ್. ಉಗ್ರಪ್ಪ, ವಿ. ಆರ್. ಸುದರ್ಶನ್, ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು, ಪ್ರೊ. ಬಿ.ಕೆ. ಚಂದ್ರಶೇಖರ್, ಜಿ.ಸಿ. ಚಂದ್ರಶೇಖರ್, ಮೋಟಮ್ಮ, ಡಾ. ಎಲ್. ಹನುಮಂತಯ್ಯ ಸೇರಿ 27 ಜನರನ್ನು ನೇಮಿಸಲಾಗಿದೆ.
ರಾಜ್ಯ ವಕ್ತಾರರು ಎಂದು ವಿವಿಧ ಜಿಲ್ಲೆಗಳಿಂದ ಒಟ್ಟು 41 ಜನರನ್ನು ನೇಮಕ ಮಾಡಿ ಪ್ರಿಯಾಂಕ್ ಖರ್ಗೆ ಆದೇಶಿಸಿದ್ದಾರೆ. ನೇಮಕವಾದವರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.
ಇದನ್ನೂ ಓದಿ | PSI Scam | ಗದ್ದಲದಲ್ಲೇ ಸರ್ಕಾರದ ಉತ್ತರ, ತಾಳ್ಮೆ ಕಳೆದುಕೊಂಡ ಪ್ರಿಯಾಂಕ್ ಖರ್ಗೆ: ಚರ್ಚೆ ಮುಕ್ತಾಯ